ಸಾರಾಂಶ
ಹೇಮಾವತಿ ಶಿಕ್ಷಣ ಸಂಸ್ಥೆ ಹಾಗೂ ನಾಗಶ್ರೀ ಶಾಲೆಯಲ್ಲಿ ಇದುವರೆಗೂ ರಾಜ್ಯ ಪಠ್ಯಕ್ರಮದಲ್ಲಿ ಶಿಕ್ಷಣವನ್ನು ಬೋಧನೆ ಮಾಡಲಾಗುತ್ತಿದೆ ಎಂದು ನಾಗಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ವಿಜಯಕುಮಾರ್ ತಿಳಿಸಿದರು. ಚನ್ನರಾಯಪಟ್ಟಣದಲ್ಲಿ ಮಾತನಾಡಿದರು.
ಚನ್ನರಾಯಪಟ್ಟಣ: ಹೇಮಾವತಿ ಶಿಕ್ಷಣ ಸಂಸ್ಥೆ ಹಾಗೂ ನಾಗಶ್ರೀ ಶಾಲೆಯಲ್ಲಿ ಇದುವರೆಗೂ ರಾಜ್ಯ ಪಠ್ಯಕ್ರಮದಲ್ಲಿ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದು, ಅದನ್ನು ಈ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಸಿ ಪಠ್ಯಕ್ರಮ ಬೋಧನೆ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ನಾಗಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ವಿಜಯಕುಮಾರ್ ತಿಳಿಸಿದರು.
ಪಟ್ಟಣದ ನಾಗಶ್ರೀ ವಿದ್ಯಾ ಸಂಸ್ಥೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ‘ನಮ್ಮ ನಾಗಶ್ರೀ ವಿದ್ಯಾಸಂಸ್ಥೆಯ ವತಿಯಿಂದ ಕಳೆದ ೨೪ ವರ್ಷಗಳಿಂದ ನಿರಂತರವಾಗಿ ಉತ್ತಮವಾದ ಶಿಕ್ಷಣ ನೀಡುತ್ತ ಬಂದಿದ್ದೇವೆ, ನಮ್ಮ ಚನ್ನರಾಯಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚಿನ ಬೇಡಿಕೆಯಾದ ಸಿಬಿಎಸ್‌ಸಿ ಶಾಲೆಯನ್ನು ತೆರೆಯಬೇಕು ಎಂದು ಈಗಾಗಲೇ ಸರ್ಕಾರದಿಂದ ಅನುಮತಿಯನ್ನು ಪಡೆದಿದ್ದೇವೆ, ಒಂದನೇ ತರಗತಿಯಿಂದ ೫ನೇ ತರಗತಿಯವರೆಗೆ ಮುಂದಿನ ೨೪-೨೫ ನೇ ಸಾಲಿಗೆ ಪ್ರವೇಶ ಮಾಡಿಕೊಂಡು ಸಿಬಿಎಸ್‌ಸಿ ಪಠ್ಯಕ್ರಮ ಬೋಧನೆ ಮಾಡಲಾಗುವುದು’ ಎಂದು ತಿಳಿಸಿದರು.ಈಗಾಗಲೇ ನಮ್ಮ ಸಂಸ್ಥೆಯ ಆವರಣದಲ್ಲಿ ಹೊಸ ಕಟ್ಟಡ ಹಾಗೂ ಆಟದ ಮೈದಾನವನ್ನು ನಿರ್ಮಾಣ ಮಾಡಲಾಗಿದೆ, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ನೀಡುವುದು ಹಾಗೂ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಗುರಿಯನ್ನು ಹೂoದಲಾಗಿದೆ ಎಂದರು.
ನಾಗಶ್ರೀ ಶಿಕ್ಷಣ ಸಂಸ್ಥೆಯ ನೂತನ ಶಿಕ್ಷಣ ಸಂಯೋಜಕರಾಗಿ ಶೈಲಿನಿ ಸೋನ್ ರವರನ್ನು ನೇಮಕ ಮಾಡಿಕೊಳ್ಳಲಾಗಿದೆ. ನೂತನ ಆಡಳಿತ ಅಧಿಕಾರಿಗಳಾಗಿ ಪ್ರೊಫೆಸರ್ ಆಸ್ಟಿನ್ ಜೆ.ಎಸ್.ರಾಜ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಹೇಮಾವತಿ ವಿದ್ಯಾ ಸಂಸ್ಥೆ ಹಾಗೂ ನಾಗಶ್ರೀ ಶಾಲೆಯ ಕಾರ್ಯದರ್ಶಿ ಎಸ್. ವಿಜಯಕುಮಾರ್, ನಾಗಶ್ರೀ ಶಾಲೆಯ ಶಿಕ್ಷಣ ಸಂಯೋಜಕರಾದ ಶೈಲಿನಿ ಸೋನ್, ನಾಗಶ್ರೀ ಶಾಲೆಯ ಆಡಳಿತ ಅಧಿಕಾರಿ ಪ್ರೊಫೆಸರ್ ಆಸ್ಟಿನ್ ಜೆ.ಎಸ್.ರಾಜ್, ನಾಗಶ್ರೀ ಶಾಲೆಯ ಪ್ರಾಂಶುಪಾಲ ಶಿವರಾಂ ಹಾಜರಿದ್ದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಗಶ್ರೀ ಶಾಲಾ ಆಡಳಿತ ಮಂಡಳಿ ಸದಸ್ಯರು.