ಶಿರಾ: ತಾಲೂಕು ಹುಣಸೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೇರೂರು ಲಕ್ಷ್ಮೀ ರಾಜು.ಎಚ್, ಉಪಾಧ್ಯಕ್ಷರಾಗಿ ಚಿದಾನಂದ್ ಅವಿರೋಧವಾಗಿ ಆಯ್ಕೆಯಾದರು.

ಶಿರಾ: ತಾಲೂಕು ಹುಣಸೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೇರೂರು ಲಕ್ಷ್ಮೀ ರಾಜು.ಎಚ್, ಉಪಾಧ್ಯಕ್ಷರಾಗಿ ಚಿದಾನಂದ್ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಹುಣಸೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಚ್.ಪಿ.ಶಶಿಧರ ಗೌಡ, ಹೊಸೂರು ರಾಜಪ್ಪ, ಹೇರೂರು ಹನುಮಂತರಾಜು, ಡ್ಯಾಗೇರಹಳ್ಳಿ ಮಂಜು, ದಂಡಿಕೆರೆ ತಿಪ್ಪೇಸ್ವಾಮಿ, ಯರವರಹಳ್ಳಿ ನಿಂಗೇಶ್, ಪುಟ್ಟಜುಂಜಯ್ಯ, ಜುಂಜಣ್ಣ, ಚಿತ್ರಲಿಂಗ, ರಂಗನಾಥ್, ಪ್ರದೀಪ್, ಕರಿಯಣ್ಣ, ಪರಮೇಶ್, ಹರೀಶ್, ಕೇಶವ್, ಸಂಘದ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದರು.