ಹೆಸ್ಕಾಂ ಬಿಲ್ ಕಲೆಕ್ಟರ್ ಬರ್ಬರ ಹತ್ಯೆ

| Published : Oct 14 2023, 01:00 AM IST

ಸಾರಾಂಶ

. ಧಾರವಾಡ ತಾಲೂಕಿನ ಬಾಡ ಗ್ರಾಮದ ರಜಾಕ್ ಕವಲಗೇರಿ (48) ಹತ್ಯೆಯಾದ ವ್ಯಕ್ತಿ. ಕೆಲಸ‌ ಮುಗಿಸಿ ವಾಪಸ್ ಹೋಗುವಾಗ ಹಳಿಯಾಳ ರಸ್ತೆಯ ಬೈಪಾಸ್ ಸೇತುವೆ ಬಳಿ ಬೈಕ್ ಮೇಲೆ ಬಂದಿದ್ದ ಯುವಕರು ರಜಾಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಧಾರವಾಡ ಮಾರಕಾಸ್ತ್ರಗಳಿಂದ ಹೆಸ್ಕಾಂ ಬಿಲ್‌ ಕಲೆಕ್ಟರ್‌ನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಧಾರವಾಡದ ಹಳಿಯಾಳ ರಸ್ಕೆ ಬೈಪಾಸ್‌ ಸೇತುವೆ ಬಳಿ ನಡೆದಿದೆ. ಧಾರವಾಡ ತಾಲೂಕಿನ ಬಾಡ ಗ್ರಾಮದ ರಜಾಕ್ ಕವಲಗೇರಿ (48) ಹತ್ಯೆಯಾದ ವ್ಯಕ್ತಿ. ಕೆಲಸ‌ ಮುಗಿಸಿ ವಾಪಸ್ ಹೋಗುವಾಗ ಹಳಿಯಾಳ ರಸ್ತೆಯ ಬೈಪಾಸ್ ಸೇತುವೆ ಬಳಿ ಬೈಕ್ ಮೇಲೆ ಬಂದಿದ್ದ ಯುವಕರು ರಜಾಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗೆ ಕಾರಣ‌‌ ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಉಪನಗರ ಠಾಣಾ‌‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.