ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ಪಂಚ ಗ್ಯಾರಂಟಿಗಳ ನೆಪದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಬಡವರಿಗೆ ಉಚಿತ ವಿದ್ಯುತ್ ನೀಡುವುದನ್ನು ವಂಚಿಸಲು ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇದು ಅವರ ಕಾಂಗ್ರೆಸ್ ಸರ್ಕಾರ ಜನ ವಿರೋಧ ನೀತಿಯಾಗಿದೆ. ಕೂಡಲೇ ಕೊಟ್ಟ ಮಾತಿನಂತೆ ಎಲ್ಲ ರೀತಿ ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಸರ್ಕಾರ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜ ನಿಗಮದ ಅಧಿಕಾರಿಗಳು ಬಡ, ರೈತ ಕೂಲಿ ಕಾರ್ಮಿಕರ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಸಾರ್ವಜನಿಕರ ಜೀವನದೊಂದಿಗೆ, ಚಲ್ಲಾಟವಾಡುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.

ನಗರದ ಕೆಇಬಿ ಕಚೇರಿ ಮುಂದೆ ವಿದ್ಯುತ್ ಸಂಪರ್ಕ ತೊಂದರೆಯನ್ನು ಬಗೆ ಹರಿಸಲು ಆಗ್ರಹಿಸಿ ರೈತ ಭಾರತ ಪಕ್ಷದಿಂದ ಹಮ್ಮಿಕೊಂಡಿರುವ 2ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ಪಂಚ ಗ್ಯಾರಂಟಿಗಳ ನೆಪದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಬಡವರಿಗೆ ಉಚಿತ ವಿದ್ಯುತ್ ನೀಡುವುದನ್ನು ವಂಚಿಸಲು ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇದು ಅವರ ಕಾಂಗ್ರೆಸ್ ಸರ್ಕಾರ ಜನ ವಿರೋಧ ನೀತಿಯಾಗಿದೆ. ಕೂಡಲೇ ಕೊಟ್ಟ ಮಾತಿನಂತೆ ಎಲ್ಲ ರೀತಿ ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು. ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿಯೊಂದು ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಇಲ್ಲ ಸಲ್ಲದ ನಿಯಮಗಳನ್ನು ರೂಪಿಸಿ ಕಿರುಕುಳ ಕೊಡುತ್ತಿರುವುದು ನೋವಿನ ಸಂಗತಿ. ಕೂಡಲೇ ಸರ್ಕಾರ ಮತ್ತು ಹೆಸ್ಕಾಂ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಬೇಕೆಂದು ಮನವಿ ಮಾಡಿದರು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೋಗೇಶ ಸೋಲ್ಲಾಪುರ ಧರಣಿಗೆ ಬೆಂಬಲಿಸಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಂದಕ್ಕೂ ಹೋರಾಟ ಮಾಡುವ ಅನಿವಾರ್ಯತೆವುಂಟಾಗಿದೆ. ಜಿಲ್ಲೆಯಿಂದ ಆಯ್ಕೆಯಾದ ಶಾಸಕರು, ಸಂಸದರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ ಎಂದರು.2ನೇ ದಿನದ ಅನಿರ್ದಿಷ್ಟ ಧರಣಿಗೆ ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಸ್ವಾಭಿಮಾನ ಸೈನ್ಯದ ಪದಾಧಿಕಾರಿಗಳು ಧರಣಿಗೆ ಬೆಂಬಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಚಾಂದಸಾಬ್‌ ಗೊಳಸಂಗಿ, ಲಿಂಗರಾಜ ಬಿದಕುಂದಿ, ಸುಂದರ ಚವ್ಹಾಣ, ಎಸ್.ಆರ್.ಕುರ್ಲೆ, ಲಾಯಪ್ಪ ಇಂಗಳೆ, ನೀಲಾಂಬಿಕ ಬಿರಾದಾರ, ಪ್ರಕಾಶ ಸಬರದ, ಜಗದೇವ ಸೂರ್ಯವಂಶಿ, ಅಶೋಕ ವಾಲಿಕಾರ, ಬಿ.ಬಿ.ಬಗಲಿ, ಎನ್.ಎಚ್.ಜಹಾಗೀರದಾರ, ಸಿಕಂದರ್ ಜಹಾಗೀರದಾರ, ಇಸಾಕ್‌ಅಹ್ಮದ್‌ ಮೇಟಿ, ಟಿ.ಎಸ್.ಪಾಟೀಲ, ಜ್ಯೋತಿ ಮಿಣಜಗಿ, ಎಸ್.ಎಸ್.ಉಪ್ಪಲದಿನ್ನಿ, ಅಲ್ತಾಫ್ ದಫೇದಾರ, ಕಾಶೀನಾಥ ರೂಗಿ, ಗೌಡಪ್ಪ ಬಡಿಗೇರ, ಸಂತೋಷ ಕುಮಾರ ನಾಯಕ, ಶಿವಶಂಕರ ಎಸ್.ಎಂ.ಸಿದ್ದಪ್ಪ ಬಸನಾಳ, ಸತೀಶ ಮಾಳಿ, ಸೈಯ್ಯದ್ ಅಫಾನ, ಸುರೇಶ ನಿನ್ನೆ, ಇಸ್ಮಾಯಿ ಸುತಾರ, ಸುಶೀಲಾ ಮಿಣಜಗಿ, ಪರಶುರಾಮ ಗಾಯಕವಾಡ, ರವಿ ಕೆಂಗರ, ಶಿವಾನಂದ ವೆಗೋರಿ, ಚಿದಾನಂದ ಗುಗರಿ, ಸಂತೋಷ ಗೆರಡೆ, ಶಿವಪ್ಪ ವಾಡೇದ, ಸೌಮ್ಯ ನಾರಯಣಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರವು ಪಂಚ ಗ್ಯಾರಂಟಿಗಳ ನೆಪದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಬಡವರಿಗೆ ಉಚಿತ ವಿದ್ಯುತ್ ನೀಡುವುದನ್ನು ವಂಚಿಸಲು ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಇದು ಅವರ ಕಾಂಗ್ರೆಸ್ ಸರ್ಕಾರ ಜನ ವಿರೋಧ ನೀತಿಯಾಗಿದೆ. ಕೂಡಲೇ ಕೊಟ್ಟ ಮಾತಿನಂತೆ ಎಲ್ಲ ರೀತಿ ಹೊಸ ನಿವೇಶನಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು.

-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.