ಬಸವಣ್ಣನವರ ಸಂದೇಶ ಕಾರ್ಯರೂಪಕ್ಕೆ ತರಲು ಹಿಂದೇಟು: ಶಾಸಕ ಶ್ರೀನಿವಾಸ ಮಾನೆ

| Published : May 01 2025, 12:52 AM IST

ಬಸವಣ್ಣನವರ ಸಂದೇಶ ಕಾರ್ಯರೂಪಕ್ಕೆ ತರಲು ಹಿಂದೇಟು: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಸಮಾನತೆ ಹೋಗಲಾಡಿಸಿ, ಮಾನವಧರ್ಮ ಪ್ರತಿಪಾದಿಸಿದವರು ಬಸವಣ್ಣನವರು.

ಹಾನಗಲ್ಲ: ಶರಣರ ವಚನಗಳ ಅರ್ಥವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವ ಮೂಲಕ ನಾವೆಲ್ಲರೂ ಅವರ ಸಂದೇಶಗಳನ್ನು ಅನರ್ಥಗೊಳಿಸುತ್ತಿದ್ದೇವೆ. ಬಸವಣ್ಣನವರನ್ನು ತಿಳಿದಿದ್ದರೂ ಅವರ ಸಂದೇಶಗಳನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕುತ್ತಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಸಮಾನತೆ ಹೋಗಲಾಡಿಸಿ, ಮಾನವಧರ್ಮ ಪ್ರತಿಪಾದಿಸಿದವರು ಬಸವಣ್ಣನವರು. ಇಂದಿನ ಕಾಲಘಟ್ಟದಲ್ಲಿ ಅಸಮಾನತೆ ಹೋಗಲಾಡಿಸುವುದೇ ಕಷ್ಟಸಾಧ್ಯವಾಗುತ್ತಿದೆ. ಆದರೆ 900 ವರ್ಷಗಳ ಹಿಂದೆ ಇದಕ್ಕಾಗಿ ಮಹಾಮನೆಯ ಮೂಲಕ ಬಸವಾದಿ ಶರಣರು ಸಂಕಲ್ಪ ಮಾಡಿರುವುದನ್ನು ಗಮನಿಸಿದರೆ ಅವರ ಜನಪರ ಕಾಳಜಿ ಅರ್ಥವಾಗುತ್ತದೆ ಎಂದರು.

ವಕೀಲ ಸೋಮಶೇಖರ ಕೋತಂಬ್ರಿ ಮಾತನಾಡಿ, ಸಂವಿಧಾನದ ಮೂಲ ಆಶಯಗಳು, ಮಾನವ ಹಕ್ಕುಗಳನ್ನು 12ನೇ ಶತಮಾನದಲ್ಲಿಯೇ ಮಹಾಮನೆಯ ಮೂಲಕ ಬಸವಣ್ಣನವರು ಹುಟ್ಟುಹಾಕಿದ್ದರು. ₹600 ಕೋಟಿ ಅನುದಾನದಲ್ಲಿ ಕೂಡಲಸಂಗಮದಲ್ಲಿ ಅನುಭವ ಮಂಟಪ ಸ್ಥಾಪನೆಗೊಳಿಸಲಾಗಿದೆ. ಜಾಗತಿಕ ಮಟ್ಟದ ವಿದ್ಯಾರ್ಥಿಗಳು ವಿಶ್ವಗುರು ಬಸವಣ್ಣವರ ಕುರಿತು ಬಸವನ ಬಾಗೇವಾಡಿಯಲ್ಲಿ ಅಧ್ಯಯನ ಮಾಡುವಂತಾಗಬೇಕು. ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಎಸ್. ರೇಣುಕಾ ಮಾತನಾಡಿ, 12ನೇ ಶತಮಾನದಲ್ಲಿ ಸಮತಾವಾದ ಪ್ರತಿಪಾದಿಸಿ, ವರ್ಣಾಶ್ರಮ ಹಾಗೂ ಜಾತಿವಾದದ ವಿರುದ್ಧ ಹೋರಾಟ ಆರಂಭಿಸಿದ ಬಸವಣ್ಣನವರ ವಚನಗಳಲ್ಲಿನ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಇನ್ನೂ ಮೌಢ್ಯತೆ, ಅಜ್ಞಾನವನ್ನು ಹೋಗಲಾಡಿಸಲು ಬಸವಣ್ಣನವರ ಸಂದೇಶಗಳು ಪಾಲಿಸುವಂತಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಸಿದ್ದನಗೌಡ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ ದೇಶಮುಖ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಜಿಪಂ ಮಾಜಿ ಸದಸ್ಯರಾದ ಬಸವರಾಜ ಹಾದಿಮನಿ, ಮಾಲತೇಶ ಸೊಪ್ಪಿನ, ಟಾಕನಗೌಡ ಪಾಟೀಲ, ಮಹದೇವಪ್ಪ ಭಾಗಸರ, ಸಿ. ಮಂಜುನಾಥ್, ಪ್ರಕಾಶಗೌಡ ಪಾಟೀಲ, ಮಂಜು ನೀಲಗುಂದ, ವಿಜಯಕುಮಾರ ದೊಡ್ಡಮನಿ, ಶಿವಲಿಂಗಪ್ಪ ತಲ್ಲೂರ, ವೀರೇಶ ಬೈಲವಾಳ, ಮಮತಾ ಆರೇಗೊಪ್ಪ, ರಾಮು ಯಳ್ಳೂರ, ಜಗದೀಶ ಕೊಂಡೋಜಿ, ಮೇಕಾಜಿ ಕಲಾಲ, ಭರಮಣ್ಣ ಶಿವೂರ, ವಿ.ವಿ. ಸಾಲಿಮಠ, ಜಿ.ಬಿ. ಹಿರೇಮಠ, ಮಂಜುನಾಥ ಬಣಕಾರ, ಮಾರುತಿ ಅಂಗರಗಟ್ಟಿ, ಎಸ್. ಆನಂದ ಇತರರಿದ್ದರು.