ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ನೂತನವಾಗಿ ಆರಂಭಗೊಂಡ ಮನ್ಮುಲ್‌ನ ಹೈಟೆಕ್ ನಂದಿನಿ ಪಾರ್ಲರ್‌ನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಮನ್ಮುಲ್ ಒಕ್ಕೂಟದಲ್ಲಿ ತಯಾರಾಗುವ ಸಿಹಿತಿಂಡಿ ತಿನಿಸ್ಸುಗಳು ಹಾಗೂ ಹಾಲು, ಮೊಸರು ಮಾರಾಟ ಮಾಡುವ ಉದ್ದೇಶದಿಂದ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಹೈಟೆಕ್ ನಂದಿನಿ ಪಾರ್ಲರ್ ಆರಂಭಿಸಿದ್ದಾರೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮನ್ಮುಲ್ ಅಧ್ಯಕ್ಷ ಬಿ.ಬೋರೇಗೌಡ ಮಾತನಾಡಿ, ಹೈಟೆಕ್ ನಂದಿನಿ ಪಾರ್ಲರ್ ಮೂಲಕ ಒಕ್ಕೂಟದ ಪ್ರೊಡೆಕ್ಟ್ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಪಾರ್ಲರ್‌ನ ಮಾಲೀಕರಾದ ಮಂಜುನಾಥ್ ಅವರು ಒಕ್ಕೂಟದ ಪದಾರ್ಥಗಳನ್ನೇ ಮಾರಾಟ ಮಾಡುವ ಕೆಲಸ ಮಾಡಬೇಕು ಎಂದರು.ಈ ವೇಳೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಮಾಲೀಕ ಎಚ್.ಎನ್.ಮಂಜುನಾಥ್, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್‌ಪೆಕ್ಟರ್ ಉಮೇಶ್, ಒಕ್ಕೂಟದ ಅಧಿಕಾರಿ ರಾಜು, ಗ್ರಾಪಂ ಸದಸ್ಯ ಯಶ್ವಂತ್, ಬಿ.ಜೆ.ಸ್ವಾಮಿ, ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.
ಜಿಲ್ಲಾ ಅಧ್ಯಕ್ಷರಾಗಿ ರಕ್ಷಿತ್ ನಾಗ್ ಆಯ್ಕೆಮಂಡ್ಯ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆ ತಯಾರಕರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ರಕ್ಷಿತ್ ನಾಗ್ ಆಯ್ಕೆಯಾಗಿದ್ದಾರೆ.ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ವಿಠ್ಠಲ್ (ಮಳವಳ್ಳಿ), ನೂತನ ಅಧ್ಯಕ್ಷರಾಗಿ ರಕ್ಷಿತ್ ನಾಗ್ (ಕೆ.ಆರ್.ಪೇಟೆ) ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ್ (ಮಂಡ್ಯ) ಆಯ್ಕೆಯಾಗಿದ್ದಾರೆ.
ಅದೇ ರೀತಿ ಉಪಾಧ್ಯಕ್ಷರಾಗಿ ಕಾವ್ಯ (ನಾಗಮಂಗಲ), ಶ್ರೀಧರ್ (ಮದ್ದೂರು), ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ (ಮಂಡ), ಲಕ್ಷ್ಮಿ (ಮಂಡ್ಯ), ಸಹ ಕಾರ್ಯದರ್ಶಿಯಾಗಿ ಸುಷ್ಮಾ (ಪಾಂಡವಪುರ), ಖಜಾಂಚಿಯಾಗಿ ಶಂಭುಲಿಂಗಪ್ಪ (ಕೆ.ಆರ್. ಪೇಟೆ) ಆಯ್ಕೆಯಾಗಿರುತ್ತಾರೆ.ನಿರ್ದೇಶಕರಾಗಿ ಅವಿನಾಶ್ ಬಿ.ಕೆ.ಮಂಡ್ಯ, ಯಲ್ಲಪ್ಪ ಐಹೊಳೆ ನಾಗಮಂಗಲ, ರಾಜೇಂದ್ರ ಶ್ರೀರಂಗಪಟ್ಟಣ, ಚೇತನ್ ಮದ್ದೂರು, ಗಿರಿಜಾ ಮಳವಳ್ಳಿ ಹಾಗೂ ನಾಗಮ್ಮ ಕೆ.ಆರ್. ಪೇಟೆ ಅವರನ್ನು ಆಯ್ಕೆಯಾಗಿದ್ದಾರೆ ಎಂದು ನೂತನ ಅಧ್ಯಕ್ಷ ರಕ್ಷಿತ್ ನಾಗ್ ತಿಳಿಸಿದ್ದಾರೆ.