25 ಎಕರೆ ಪ್ರದೇಶದಲ್ಲಿ ಹೈಟೆಕ್‌ ಕ್ರೀಡಾಂಗಣ ನಿರ್ಮಾಣ

| Published : Mar 18 2025, 12:34 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಹನುಮನಹಳ್ಳಿ ಬಳಿ ೨೫ ಎಕರೆ ಜಮೀನನ್ನು ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಲು ಈಗಾಗಲೇ ಸಚಿವರೊಂದಿಗೆ ಚರ್ಚಿಸಲಾಗಿದೆ. ನಗರದ ನೇತಾಜಿ ಕ್ರೀಡಾಂಗಣ ಅಭಿವೃದ್ಧಿಗೆ ಎರಡು ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಲಾಗಿದ್ದು ಕಾಮಗಾರಿ ನಡೆಯುತ್ತಿದೆ. ಆದರೂ ಕೆಲವರು ಕ್ರೀಡಾಂಗಣ ಇಲ್ಲ ಎನ್ನುತ್ತಿದ್ದಾರೆ. ಇದು ತಪ್ಪು.

ಕನ್ನಡಪ್ರಭ ವಾರ್ತೆ ಮುಳಬಾಗಿಲುಇಡೀ ತಾಲೂಕಿನಲ್ಲಿ ೧೨೦ ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದ್ದು ಕಿರುಮಣಿ ಚನ್ನಾಪುರ ತಾಯಲೂರು ರಸ್ತೆಗಳ ಕಾಮಗಾರಿ ಜೊತೆಗೆ ಬೆಸ್ತರಹಳ್ಳಿಯಿಂದ ವಾನಗನಹಳ್ಳಿವರೆಗೂ ನಾಲ್ಕು ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಶಾಸಕ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.

ಶ್ರೀನಿವಾಸಪುರ ರಸ್ತೆಯ ಬೆಸ್ತರಲ್ಲಿ ಮತ್ತು ವಾನಗಾನಹಳ್ಳಿವರೆಗೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ತಾಲೂಕನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲು ಪಣ ತೊಟ್ಟಿರುವುದಾಗಿ ತಿಳಿಸಿದರು.

ಹೈಟೆಕ್ ಕ್ರೀಡಾಂಗಣ ನಿರ್ಮಾಣ

ರಾಷ್ಟ್ರೀಯ ಹೆದ್ದಾರಿ ಹನುಮನಹಳ್ಳಿ ಬಳಿ ೨೫ ಎಕರೆ ಜಮೀನನ್ನು ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಲು ಈಗಾಗಲೇ ಸಚಿವರೊಂದಿಗೆ ಚರ್ಚಿಸಲಾಗಿದೆ. ನಗರದ ನೇತಾಜಿ ಕ್ರೀಡಾಂಗಣ ಅಭಿವೃದ್ಧಿಗೆ ಎರಡು ಕೋಟಿ ರು.ಗಳನ್ನು ಬಿಡುಗಡೆ ಮಾಡಿಸಲಾಗಿದ್ದು ಕಾಮಗಾರಿ ನಡೆಯುತ್ತಿದೆ. ಆದರೂ ಕೆಲವರು ಕ್ರೀಡಾಂಗಣ ಇಲ್ಲ ಎಂದು ಸುಖಾಸುಮ್ಮನೆ ಆರೋಪಗಳು ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆ ಡಾಂಬರೀಕರಣ

ಶೀಘ್ರದಲ್ಲೇ ಅಂಬೇಡ್ಕರ್ ಪ್ರತಿಮೆಯಿಂದ ಕೆಜಿಎಫ್ ಮುಖ್ಯರಸ್ತೆ ಬೈಪಾಸ್‌ ವರೆಗೂ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ಶಾಸಕ ಮಂಜುನಾಥ್‌ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿ.ವಿ. ಸಾಮೇಗೌಡ, ಬಿಎಂಸಿ ವೆಂಕಟರಾಮೇಗೌಡ, ನಾರಾಯಣಗೌಡ, ಜೆಡಿಎಸ್ ಕಾರ್ಯದರ್ಶಿ ನಲ್ಲೂರು ರಘುಪತಿ ರೆಡ್ಡಿ, ಗ್ರಾಪಂ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ್, ನಗವಾರ ಸತ್ಯಣ್ಣ, ಪಿಡಿಒ ಎನ್.ವೆಂಕಟೇಶ್, ಎಚ್. ನಾಗೇಶ್, ಮುರಳೀಗೌಡ, ತರುಣ್ ಕುಮಾರ್ ಇದ್ದರು.