ಕಲಾದಗಿ-ಕಾತರಕಿ ಬ್ಯಾರೇಜ್ ತಲುಪಿದ ಹಿಡಕಲ್ ನೀರು

| Published : Apr 05 2025, 12:46 AM IST

ಸಾರಾಂಶ

ಕಲಾದಗಿ: ಈ ಭಾಗದ ನೀರು ಸಂಗ್ರಹ ಜಿವನಾಡಿ ಜಲ ಮೂಲ ಕಲಾದಗಿ-ಕಾತರಕಿ ಬ್ರಿಡ್ಜ್‌ ಕಮ್ ಬ್ಯಾರೇಜ್ 0.07 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥವ್ಯ ಉಳ್ಳ ಬ್ಯಾರೇಜ್‌ ಗೆ ಹಿಡಕಲ್ ಜಲಾಶಯದಿಂದ ಬಿಟ್ಟ ನೀರು ಬಂದು ತಲುಪಿದೆ.

ಕಲಾದಗಿ: ಈ ಭಾಗದ ನೀರು ಸಂಗ್ರಹ ಜಿವನಾಡಿ ಜಲ ಮೂಲ ಕಲಾದಗಿ ಕಾತರಕಿ ಬ್ರಿಡ್ಜ್‌ ಕಮ್ ಬ್ಯಾರೇಜ್ 0.07 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥವ್ಯ ಉಳ್ಳ ಬ್ಯಾರೇಜ್‌ ಗೆ ಹಿಡಕಲ್ ಜಲಾಶಯದಿಂದ ಬಿಟ್ಟ ನೀರು ಬಂದು ತಲುಪಿದ್ದು, ಗುರುವಾರ ರಾತ್ರಿ ನೀರು ಬ್ಯಾರೇಜ್ ತುಂಬಿ ಹೊರ ಹರಿಯಲಾರಂಭಿಸಿದೆ. ಮಾ.27ರಂದು ಗೋಕಾಕ ಸಮೀಪದ ಹಿಡಕಲ್ ಅಣೆಕಟ್ಟೆಯಿಂದ 2 ಟಿಎಂಸಿ ನೀರನ್ನು ಘಟಪ್ರಭಾ ನದಿಗೆ ಹರಿ ಬಿಡಲಾಗಿತ್ತು, 134 ಕಿಮೀ ನೀರು ಹರಿದು ಬಂದು ಕಲಾದಗಿ ಕಾತರಕಿ ಬ್ಯಾರೇಜ್‌ ತಲುಪಿದೆ, ಕಲಾದಗಿ ಬ್ಯಾರೇಜ್‌ನ 74 ನಾಲಾಗಳಲ್ಲಿ 5 ಲೇಯರ್ ಗೇಟ್‌ ಹಾಕಲಾಗಿದ್ದು, ಐದು ಲೇಯರ್‌ ನೀರು ತುಂಬಿ ಹರಿಯುತ್ತಿದೆ. ಘಟಪ್ರಭಾ ನದಿಯಲ್ಲಿ ನೀರು ಬತ್ತಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಿತ್ತು. ನದಿಗೆ ಹಿಡಕಲ್ ಜಲಾಶಯದ ನೀರು ಬಂದು ತುಂಬಿಕೊಳ್ಳುತ್ತಿರುವುದರಿಂದ ರೈತರಲ್ಲಿ ಹರ್ಷ ತರಿಸಿದೆ.