ನಿರಂತರ ಪ್ರಯತ್ನದಿಂದ ಉನ್ನತ ಸಾಧನೆ ಸಾಧ್ಯ

| Published : Feb 02 2024, 01:05 AM IST

ಸಾರಾಂಶ

ವಿದ್ಯಾರ್ಥಿಗಳಾದ ನೀವು ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಮಾರ್ಗದರ್ಶನಪಡೆಯಿರಿ. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಮ್ಮ ಭಾಗದವಿದ್ಯಾರ್ಥಿಗಳು ನಮ್ಮಿಂದ ಅಸಾಧ್ಯವೆಂಬ ತಮ್ಮಲ್ಲಿನ ಕೀಳರಿಮೆ ತೊರೆದು ನಿರಂತರವಾದ ಪ್ರಯತ್ನ ಮಾಡಬೇಕು. ಇಂದು ತೀವ್ರ ಸ್ಪರ್ಧಾತ್ಮಕತೆಯನ್ನುಎದುರಿಸಬೇಕಾಗಿರುವುದರಿಂದ ನಿರಂತರವಾದ ಅಧ್ಯಯನ ಮಾಡಿದರೆ, ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಎಂದು ಸಿಬಿಸಿ ಉಪಾಧ್ಯಕ್ಷರ ವೀಂದ್ರಕುಮಾರ ವೈ.ಕೋಳಕೂರ ಹೇಳಿದರು.

ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರಸ ಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಬಸವರಾಜ ಬಿರಾಜಾದಾರ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಮಾರ್ಗದರ್ಶನಪಡೆಯಿರಿ. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರ ವೀಂದ್ರಕುಮಾರ ಬಟಗೇರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀಶೈಲ್ ಮತ್ತು ಮುಸ್ಕಾನ್‍ ಅವರಿಗೆ ಸತ್ಕರಿಸಲಾಯಿತು. ಎನ್.ಎಸ್.ಎಸ್‍. ಅಧಿಕಾರಿ ಎಚ್.ಬಿ. ಪಾಟೀಲ ಮಾತನಾಡಿ, ವಾರ್ಷಿಕ ವರದಿ ಮಂಡಿಸಿದರು.

ಉದ್ಯಮಿ ಪ್ರೇಮಾನಂದ ಸಾಹು ಶೆಟಗಾರ, ಪ್ರಾಚಾರ್ಯ ಶಿವಶರಣಪ್ಪ ಮಸ್ಕನಳ್ಳಿ, ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಮಲ್ಲಿಕಾರ್ಜುನದೊಡ್ಡಮನಿ, ಮಲ್ಲಪ್ಪರಂಜಣಗಿ, ಶಂಕ್ರೆಪ ಹೊಸದೊಡ್ಡಿ, ಪ್ರಕಾಶ ಪಾಟೀಲ,ರೇಣುಕಾಚಿಕ್ಕಮೇಟಿ, ಸಾಹೇಬಗೌಡ್ ಪಾಟೀಲ, ನಾಗಮ್ಮ ಹಾದಿಮನಿ, ಪ್ರ.ದ.ಸ. ನೇಸರ ಎಂ.ಬೀಳಗಿಮಠ, ದ್ವಿ.ದ.ಸ ರಾಮಚಂದ್ರಚವ್ಹಾಣ, ಸೇವಕ ಭಾಗಣ್ಣ ಹರನೂರ್ ಇದ್ದರು.