ಸಾರಾಂಶ
ಬಿ.ವಿ.ವಿ.ಎಸ್ ಸಂಘದ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ವತಿಯಿಂದ ವಿಶ್ವ ಅಧಿಕ ರಕ್ತದೊತ್ತಡ ದಿನ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಬಾಗಲಕೋಟೆ
ಬಿ.ವಿ.ವಿ.ಎಸ್ ಸಂಘದ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ವತಿಯಿಂದ ವಿಶ್ವ ಅಧಿಕ ರಕ್ತದೊತ್ತಡ ದಿನ ಆಚರಿಸಲಾಯಿತು.ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಯಶ್ರೀ ಇಟ್ಟಿ ಮಾರ್ಗದರ್ಶನದಲ್ಲಿ ನಗರದ ಕೌಲಪೇಟದಲ್ಲಿ ಜಿ.ಎನ್.ಎಂ ಹಾಗೂ ಬಿ.ಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಅಂಶಗಳು, ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಪಥಸಂಚಲನ ಮತ್ತು ಕಿರುನಾಟಕ ಪ್ರದರ್ಶಿಸಿದರು.
ಎಂ.ಎಸ್.ಎನ್ ವಿಭಾಗದ ಉಪನ್ಯಾಸಕಿ ದೀಪಿಕಾ ದಾಸರ ಅವರು, ರಕ್ತದೊತ್ತಡಕ್ಕೆ ಕಾರಣವಾಗುವ ಅಂಶಗಳು, ನಿಯಮಿತ ಆರೋಗ್ಯ ತಪಾಸಣೆ, ಒತ್ತಡ ನಿವಾರಣೆ, ಉತ್ತಮ ಜೀವನ ಶೈಲಿಯ ಅಳವಡಿಕೆ ಬಗ್ಗೆ ವಿವರಿಸಿ, ಅಧಿಕ ರಕ್ತದೊತ್ತಡ ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ 15-49ರ ನಡುವಿನ ವಯಸ್ಸಿನ ವ್ಯಕ್ತಿಗಳಲ್ಲಿ ಶೇ.11.3 ಪತ್ತೆಯಾಗಿದ್ದು, ಅನಿಯಂತ್ರಿತ ರಕ್ತದೊತ್ತಡ ವಾರ್ಷಿಕವಾಗಿ ಹತ್ತು ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುತ್ತದೆ ಎಂದು ಮಾಹಿತಿ ನೀಡಿದರು.