ಅತೀ ಹೆಚ್ಚು ತೆರಿಗೆ ಸಂಗ್ರಹ: ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿ ಮೈಸೂರಿನಲ್ಲಿ ತರಬೇತಿಗೆ ಆಯ್ಕೆ

| Published : Jul 21 2025, 01:30 AM IST

ಅತೀ ಹೆಚ್ಚು ತೆರಿಗೆ ಸಂಗ್ರಹ: ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿ ಮೈಸೂರಿನಲ್ಲಿ ತರಬೇತಿಗೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತರಬೇತಿಯು ಜು. 21 ರಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆಯ ವಸತಿ ನಿಲಯ ಮೈಸೂರುನಲ್ಲಿ ನಡೆಯಲಿದ್ದು ತರಬೇತಿಯಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶಶಿಕಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ, ಕಾರ್ಯದರ್ಶಿ ಮಂಜುನಾಥ ಭಾಗವಹಿಸಲಿದ್ದಾರೆ. ಮೂಲ್ಕಿ ತಾಲೂಕಿನಿಂದ ಕೆಮ್ರಾಲ್ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಗಳನ್ನು 2024-25ನೇ ಸಾಲಿನ ತೆರಿಗೆ ಸಂಗ್ರಹಣಾ ವರದಿಯಂತೆ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಆರ್.ಜಿ.ಎಸ್.ಎ ಯೋಜನೆಯಡಿ ರಾಜ್ಯ ಗ್ರಾಮ ಪಂಚಾಯತ್‌ಗಳಿಗೆ ಐಎಸ್‌ಒ ಪ್ರಮಾಣೀಕರಣವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಒಂದು ದಿನದ ತರಬೇತಿಗೆ ಸ್ವಂತ ಸಂಪನ್ಮೂಲ ಸಂಗ್ರಹಣೆಯಲ್ಲಿ ಅತೀ ಹೆಚ್ಚು ಸಂಗ್ರಹಣೆ ಮಾಡಿದ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ ಮತ್ತು ಕಾರ್ಯದರ್ಶಿಗಳನ್ನು ನಿಯೋಜಿಸುವಂತೆ ಪಂಚಾಯತ್‌ರಾಜ್ ಆಯುಕ್ತಾಲಯ ಬೆಂಗಳೂರು ಸೂಚಿಸಿದ್ದಾರೆ.

ತರಬೇತಿಯು ಜು. 21 ರಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆಯ ವಸತಿ ನಿಲಯ ಮೈಸೂರುನಲ್ಲಿ ನಡೆಯಲಿದ್ದು ತರಬೇತಿಯಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶಶಿಕಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ, ಕಾರ್ಯದರ್ಶಿ ಮಂಜುನಾಥ ಭಾಗವಹಿಸಲಿದ್ದಾರೆ. ಮೂಲ್ಕಿ ತಾಲೂಕಿನಿಂದ ಕೆಮ್ರಾಲ್ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಗಳನ್ನು 2024-25ನೇ ಸಾಲಿನ ತೆರಿಗೆ ಸಂಗ್ರಹಣಾ ವರದಿಯಂತೆ ಆಯ್ಕೆ ಮಾಡಲಾಗಿದೆ.

2024-25ನೇ ಸಾಲಿನಲ್ಲಿ ತೆರಿಗೆ ಸಂಗ್ರಹಣೆಯ ಒಟ್ಟು ಬೇಡಿಕೆಯಲ್ಲಿ ಶೇ. 74.52 ಮತ್ತು ಚಾಲ್ತಿ ಬೇಡಿಕೆಯಲ್ಲಿ 100 ಪ್ರಗತಿಯನ್ನು ಸಾಧಿಸಿದ ಅತಿಕಾರಿಬೆಟ್ಟು ಗ್ರಾ.ಪಂ. ಮೂಲ್ಕಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಸ್ವಂತ ಸಂಪನ್ಮೂಲ ಸಂಗ್ರಹಣೆಯಲ್ಲಿ ಅತೀ ಹೆಚ್ಚು ಸಂಗ್ರಹಣೆ ಮಾಡಿದ ಕ್ರಿಯಾಶೀಲ ಪಂಚಾಯತ್ ಎಂಬ ಹೆಗ್ಗಳಿಕೆಗೆ ಗ್ರಾಮ ಪಂಚಾಯಿತಿ ಪಾತ್ರವಾಗಿದೆ. ಇದಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದವನ್ನು ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಸಲ್ಲಿಸಿದ್ದಾರೆ.