ಸಾರಾಂಶ
ನುಗ್ಗೇಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಮಿನಿ ಹೈ ಮಾಸ್ಟ್ ವಿದ್ಯುತ್ ದೀಪವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.
ಹಾಸನ: ನುಗ್ಗೇಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಮಿನಿ ಹೈ ಮಾಸ್ಟ್ ವಿದ್ಯುತ್ ದೀಪವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. ಮುಖಂಡರಾದ ತೋಟಿ ನಾಗರಾಜ್, ಬಿ. ಆರ್. ದೊರೆಸ್ವಾಮಿ, ಉದ್ಯಮಿ ಜಗದೀಶ್, ಎನ್ಎಸ್ ಗಿರೀಶ್, ಜಯ ಕೀರ್ತಿ, ಗ್ರಾಪಂ ಸದಸ್ಯರಾದ ಎನ್. ಎಸ್. ಮಂಜುನಾಥ್, ಶಿವಕುಮಾರ್, ಜಬೀನ್ ತಾಜ್, ಸಾಧಿಕ್ ಪಾಷ, ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಗಂಗಾಧರ್, ಉಪಾಧ್ಯಕ್ಷ ದೇವರಾಜ್, ಅರ್ಚಕ ರಘು ದೀಕ್ಷಿತ್ ಸೇರಿ ಇತರರು ಹಾಜರಿದ್ದರು.