ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡದಂತೆ ಸಕ್ಕರೆಗೆ ಈಗಿರುವ 31 ರು. ಎಂಎಸ್‌ಪಿಯನ್ನು 60 ರು.ಗೆ ಹೆಚ್ಚಳ ಮಾಡಲೇಬೇಕು

ಹಾವೇರಿ: ಪ್ರತಿ ಕೆಜಿ ಸಕ್ಕರೆಗೆ 60 ರು. ಎಂ.ಎಸ್.ಪಿ ದರ ನಿಗದಿ ಹಾಗೂ ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ಮಾಡಬೇಕೆಂಬ ಎರಡು ಮುಖ್ಯ ಬೇಡಿಕೆಯೊಂದಿಗೆ ಹೊಸದಿಲ್ಲಿಯಲ್ಲಿ ಅ.12ರಂದು ನಡೆಯುವ ಸಭೆಯಲ್ಲಿ ಭಾಗವಹಿಸಲಾಗುತ್ತಿದ್ದು, ಒಂದುವೇಳೆ ಬೇಡಿಕೆ ಈಡೇರಿಸದಿದ್ದರೆ ಅ.13ರಂದು ರಾಷ್ಟಿçÃಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕರೆಡ್ಡಿ ಮರಚರಡ್ಡೇರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಂಎಸ್‌ಪಿಯನ್ನು 2018-19ರಿಂದಲೇ ಕಡಿಮೆ ಮಾಡಿ ಅವೈಜ್ಞಾನಿಕ ಎಂಎಸ್‌ಪಿ ದರ ನಿಗದಿ ಮಾಡಿದ್ದಾರೆ. ಗೋವಿನಜೋಳ, ಸೋಯಾಬಿನ್, ಭತ್ತö, ರಾಗಿ ಸೇರಿದಂತೆ ಇತರೆ ಬೆಳೆಗಳಿಗೂ ಎಂಎಸ್‌ಪಿ ದರ ಬಹಳ ಕಡಿಮೆ ಇದೆ. ಅನುಭವ ಇಲ್ಲದ ಮಂತ್ರಿಗಳು ಕೃಷಿ ಖಾತೆ ನಿಭಾಯಿಸುತ್ತಿದ್ದುö, ಇದು ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶದ ರೈತರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಬಹಳ ವಿಶ್ವಾಸವನ್ನಿಟ್ಟಿದ್ದಾರೆ. ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡದಂತೆ ಸಕ್ಕರೆಗೆ ಈಗಿರುವ 31 ರು. ಎಂಎಸ್‌ಪಿಯನ್ನು 60 ರು.ಗೆ ಹೆಚ್ಚಳ ಮಾಡಲೇಬೇಕು ಎಂದು ಒತ್ತಾಯಿಸಿದರು.

ಎಂಎಸ್‌ಪಿ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅ.12ರಂದು ನಿಯೋಗವನ್ನು ಕರೆಸಿಕೊಂಡು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಹಳ ಮುಖ್ಯವಾದ ಸಕ್ಕರೆ ಕೆಜಿಗೆ 60 ರು. ದರ ಎಂಎಸ್‌ಪಿ ನಿಗದಿ ಮಾಡಬೇಕು. ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂಬ ಬೇಡಿಕೆಗಳನ್ನು ನಿಯೋಗ ಮಂಡಿಸಲಿದೆ. ಉಳಿದಂತೆ ಎಥೆನಾಲ್‌ನಲ್ಲಿ ಶೇ.100ರಷ್ಟು ಖರೀದಿ ಮಾಡಬೇಕು. ಎಥೆನಾಲ್ ದರವನ್ನು ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಪ್ರಲ್ಹಾದ ಜೋಶಿ, ಪೆಟ್ರೋಲಿಯಂ ಸಚಿವರು, ಕೃಷಿ ಸಚಿವರು ಹೀಗೆ ಸಂಬAಧಿಸಿದವರ ಜತೆಗೆ ಕ್ಯಾಬಿನೆಟ್ ಸಭೆ ನಡೆಸಿ ಎಂಎಸ್‌ಪಿಯಲ್ಲಾದ ಅನ್ಯಾಯವನ್ನು ಸರಿಪಡಿಸಬೇಕು ಎಂದರು.

ರಾಜ್ಯ ಸರ್ಕಾರ ಕೂಡ ಏಳು ತಾಸು ವಿದ್ಯುತ್ ಪೂರೈಸುತ್ತಿಲ್ಲö. ವಿದ್ಯುತ್ ಕಣ್ಣಾಮುಚ್ಚಾಲೆ ಸರಿಪಡಿಸಿ, ಹಗಲು ಹೊತ್ತಿನಲ್ಲಿ ನಿರಂತರ ಏಳು ತಾಸು ಕರೆಂಟ್ ಪೂರೈಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ, ಕಬ್ಬು ಬೆಳೆಗಾರರ ಸಂಘ ರಾಜ್ಯ ಸಮಿತಿ ಕೈಗೊಳ್ಳುವ ನಿರ್ಧಾರಗಳಿಗೆ ಬದ್ದರಾಗಿ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅ.13ರಂದು ಹೆದ್ದಾರಿ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಭೀಕರ ಬರಗಾಲ ಎದುರಿಸುತ್ತಿರುವ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜತೆಗೂಡಿ ಮನ್ನಾ ಮಾಡಬೇಕು. ಆಹಾರ ಭದ್ರತೆ ಹೆಚ್ಚಾಗಬೇಕಾದರೆ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ವಿಮಾ ಸೌಲಭ್ಯ ಇರದ ಕಬ್ಬು ಬೆಳೆಯನ್ನು ಬೆಳೆ ವಿಮಾ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು

ಸುದ್ದಿಗೋಷ್ಠಿಯಲ್ಲಿ ದಾನೇಶಪ್ಪ ಕೆಂಗೊಂಡ, ದೇವರಾಜ ದೊಡ್ಡಮನಿ, ಶಿವಾನಂದ ಜಡಿಮಠ, ಬಸವರಾಜ ಕನವಳ್ಳಿ, ಮುತ್ತಪ್ಪ ಸಣ್ಣಿಂಗಮ್ಮನವರ, ಹರೀಶ ಕೆಂಚರೆಡ್ಡಿ, ವಿರೂಪಾಕ್ಷಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಂಕರ ಮುದ್ದಿö, ಗಂಗಾಧರ ಲಂಗೋಟಿ, ಮುತ್ತಪ್ಪ ವೀರಾಪುರ, ಶ್ರೀನಿವಾಸ ಶಿವಪೂಜೆ ಇದ್ದರು.