ಸಾರಾಂಶ
ಬರದ ಕುರಿತು ಮಾತನಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ರಾಜ್ಯವೇ ಬರದಿಂದ ತತ್ತರಿಸಿದರೂ ಕೇಂದ್ರ ನೈಯಾಪೈಸೆ ನೀಡುತ್ತಿಲ್ಲ. ಆದರೂ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ತೊಂದರೆ ಆಗಬಾರದೆಂದು ಮಧ್ಯಂತರ ಪರಿಹಾರ ನೀಡಿದೆ.
ಕೊಪ್ಪಳ: ಹಿಜಾಬ್ ವಿಷಯವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಪಡೆದಿರುವುದು ಸರಿಯಾಗಿಯೇ ಇದೆ ಎಂದು ಸಿಎಂ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪು ಮತ್ತು ಊಟ ಪ್ರತಿಯೊಬ್ಬರ ಹಕ್ಕು. ಅದರಲ್ಲಿ ಹಸ್ತಕ್ಷೇಪ ಸರಿಯಲ್ಲ. ಧರ್ಮ ಎಳೆದು ತಂದು ಶಾಂತಿ ಕದುಡುವುದು ಸರಿಯಲ್ಲ. ಅದು ಅವರವರ ಹಕ್ಕು ಎನ್ನುವುದನ್ನು ಸಿಎಂ ಹೇಳಿದ್ದಾರೆ ಎಂದರು.ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಹಾಕುತ್ತಿದ್ದಾರೆ. ಅದ್ಯಾವುದನ್ನೂ ನಾವು ಪ್ರಶ್ನಿಸುವುದಿಲ್ಲ. ಉಡುಪು ಅವರವರ ಹಕ್ಕಾಗಿರುವುದರಿಂದ ಅದನ್ನು ವಿವಾದ ಮಾಡಿ, ರಾಜಕಾರಣ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಬರದ ಕುರಿತು ಮಾತನಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ರಾಜ್ಯವೇ ಬರದಿಂದ ತತ್ತರಿಸಿದರೂ ಕೇಂದ್ರ ನೈಯಾಪೈಸೆ ನೀಡುತ್ತಿಲ್ಲ. ಆದರೂ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ತೊಂದರೆ ಆಗಬಾರದೆಂದು ಮಧ್ಯಂತರ ಪರಿಹಾರ ನೀಡಿದೆ. ರಾಜ್ಯದ ಬರ ಕುರಿತು ಸ್ಪಂದಿಸುವುದಕ್ಕೆ ಕೇಂದ್ರಕ್ಕೆ ಮನಸ್ಸೇ ಇಲ್ಲ ಎಂದರು.ರಾಜ್ಯದ ಕೃಷಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ನರೇಗಾ ಯೋಜನೆಯಲ್ಲಿ ಮಾನವ ದಿನಗಳ ನಿಗದಿಯನ್ನು 150ಕ್ಕೆ ಹೆಚ್ಚಳ ಮಾಡವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಎಂ ಸಿದ್ದರಾಮಯ್ಯ ವಿಮಾನದಲ್ಲಿ ಸುತ್ತಾಡುವುದನ್ನು ಬಿಜೆಪಿ ವಿವಾದ ಮಾಡುತ್ತಿದೆ. ಇದರಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.