ಬೀದರ್ ವಿಶ್ವವಿದ್ಯಾಲಯ ವತಿಯಿಂದ ತಾಲೂಕಿನ ಕೊಳಾರ (ಕೆ) ಗ್ರಾಮದಿಂದ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಸಮೀಪದ ವಿಶ್ವವಿದ್ಯಾಲಯ ಆವರಣದ ವರೆಗೆ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ವಿಶ್ವವಿದ್ಯಾಲಯ ವತಿಯಿಂದ ತಾಲೂಕಿನ ಕೊಳಾರ (ಕೆ) ಗ್ರಾಮದಿಂದ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಸಮೀಪದ ವಿಶ್ವವಿದ್ಯಾಲಯ ಆವರಣದ ವರೆಗೆ ಅಂತರ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು.ವಿಶ್ವವಿದ್ಯಾಲಯ ಅಧೀನದ 16 ಕಾಲೇಜುಗಳ 88 ವಿದ್ಯಾರ್ಥಿಗಳು 10ಕಿಮೀ ಉದ್ದದ ಓಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಉಮೇಶ (ಪ್ರಥಮ), ಆದಿತ್ಯ (ದ್ವಿತೀಯ), ಅಮರ (ತೃತೀಯ) ಸ್ಥಾನ ಪಡೆದರೆ ಮಹಿಳೆಯರ ವಿಭಾಗದಲ್ಲಿ ಅಂಜಲಿ (ಪ್ರಥಮ), ಭಾಗ್ಯಶ್ರೀ (ದ್ವಿತೀಯ) ಹಾಗೂ ಆರುತಿ (ತೃತೀಯ) ಸ್ಥಾನ ಗಳಿಸಿದರು.
ಪುರುಷರ ಗುಂಪು ಸ್ಪರ್ಧೆಯಲ್ಲಿ ಬೀದರ್ನ ಕರ್ನಾಟಕ ಕಾಲೇಜು (ಪ್ರಥಮ), ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಾಲ್ಕಿ (ತೃತೀಯ), ಮಹಿಳೆಯರ ಗುಂಪು ಸ್ಪರ್ಧೆಯಲ್ಲಿ ಸಿ.ಬಿ ಪದವಿ ಕಾಲೇಜು (ಪ್ರಥಮ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ನಳ್ಳಿ (ದ್ವಿತೀಯ) ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಾಲ್ಕಿ (ತೃತೀಯ) ಸ್ಥಾನ ಪಡೆದವು.ಇದೇ ವೇಳೆ ಗುಡ್ಡಗಾಡು ಓಟದ ಸ್ಪರ್ಧೆಯ ವಿಶ್ವವಿದ್ಯಾಲಯದ ತಂಡವನ್ನು ಆಯ್ಕೆ ಮಾಡಲಾ ಯಿತು. ಇದಕ್ಕೂ ಮುನ್ನ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಸ್ಪರ್ಧೆಗೆ ಚಾಲನೆ ನೀಡಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬಹುದು. ವಿದ್ಯಾರ್ಥಿಗಳು ವ್ಯಾಸಾಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪರಮೇಶ್ವರ್ ಟಿ. ನಾಯಕ್, ಹಣಕಾಸು ಅಧಿಕಾರಿ ಡಾ. ರವೀಂದ್ರನಾಥ ಗಬಾಡೆ, ಕ್ರೀಡಾ ಸಂಯೋಜಕ ಓಂಕಾರ ಮಾಶೆಟ್ಟಿ, ವಿಶ್ವವಿದ್ಯಾಲಯದ ಅತಿಥಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎನ್.ಎಸ್.ಕುಲಕರ್ಣಿ, ಡಾ.ಸಿದ್ಧರಾಮ ನೆಂಗಾ, ಡಾ. ಮಂಜುನಾಥ, ಡಾ.ಪುನೀತ್ ಆರ್., ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಇತರರು ಇದ್ದರು.