ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ರಾತ್ರಿ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಬಳಿ ಗುಡ್ಡಕುಸಿದು ಸಂಪರ್ಕ ಬಂದ್ ಆಗಿದೆ.
ಶೃಂಗೇರಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶನಿವಾರ ರಾತ್ರಿ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಬಳಿ ಗುಡ್ಡಕುಸಿದು ಸಂಪರ್ಕ ಬಂದ್ ಆಗಿದೆ.
ಸಂಜೆಯಿಂದ ಒಂದೇ ಸಮನೆ ಸುರಿದ ಸತತ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದೆ. ರಾತ್ರಿಯಿಂದಲೇ ವಾಹನ ಸಂಚಾರ ಬಂದ್ ಆಗಿದ್ದು ಲಾರಿ, ಖಾಸಗಿ ವಾಹನ, ಬಸ್ ಗಳು ಸೇರಿದಂತೆ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಳೆ ನಡುವೆಯೂ ಜೆಸಿಬಿ ಮೂಲಕ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದೆ.ಹೆದ್ದಾರಿ ಅಗಲೀಕರಣ ವೇಳೆಯಲ್ಲಿ ಗುಡ್ಡದ ಮಣ್ಣು ಅಗೆದಿದ್ದರಿಂದ ಕೆಲ ತಿಂಗಳುಗಳಿಂದ ನಿರಂತರ ಗುಡ್ಡಕುಸಿಯುತ್ತಿದ್ದು ಮಳೆ ಬಂದಾಗ ಆಗಾಗ ಕುಸಿತ ಉಂಟಾಗಿ ಹಲವು ಬಾರಿ ರಸ್ತೆ ಸಂಚಾರ ಬಂದ್ ಕೂಡ ಆಗಿತ್ತು. ಇದೀಗ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.ಗಾಂಧಿ ಮೈದಾನ, ಕುರುಬಗೇರಿಗೆ ತುಂಗೆಯ ಪ್ರವಾಹ-ಸಂಜೆಯಿಂದ ಸುರಿದ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಗಾ ನದಿಯ ಪ್ರವಾಹ ಗಾಂಧಿ ಮೈದಾನಕ್ಕೂ ನುಗ್ಗಿ ಮತ್ತೆ ಗಾಂಧಿ ಮೈದಾನ ಜಲಾವೃತಗೊಂಡಿದೆ. ಕೆವಿಆರ್ ವೃತ್ತ ಭಾರತೀ ಬೀದಿ ಸಂಪರ್ಕ ಬೈಪಾಸ್ ರಸ್ತೆ, ಕುರುಬಗೇರಿಗೂ ತುಂಗಾ ನದಿ ಪ್ರವಾಹದ ನೀರು ನುಗ್ಗಿ ಜಲಾವೃತಗೊಂಡಿದೆ.
26 ಶ್ರೀ ಚಿತ್ರ 5-ಶೃಂಗೇರಿ ಮಂಗಳೂರು ರಾ.ಹೆ.169 ರ ನೆಮ್ಮಾರು ಬಳಿ ರಸ್ತೆ ಮೇಲೆ ಗುಡ್ಡಕುಸಿದಿರುವುದು.26 ಶ್ರೀ ಚಿತ್ರ 6-ಶೃಂಗೇರಿ ಗಾಂದಿ ಮೈದಾನಕ್ಕೆ ತುಂಗಾ ನದಿ ಪ್ರವಾಹ ನುಗ್ಗಿರುವುದು.