ಸಾರಾಂಶ
ಮಂಗಳೂರಿನ ಲಿಟ್ ಫೆಸ್ಟ್‌ನಲ್ಲಿ ಭಾನುವಾರ ಹಿಮಾಲಯನ್ ಜಿಯೋಪಾಲಿಟಿಕ್ಸ್ ಬಗ್ಗೆ ಫ್ರೆಂಚ್ ಮೂಲದ ಪತ್ರಕರ್ತ ಡಾ.ಕ್ಲಾಡ್ ಅರ್ಪಿ ವಿಚಾರ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಮಾಲಯ ಭಾರತದ ಮತ್ತು ಜಗತ್ತಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಹಿಮಾಲಯ ಶಾಂತಿಯ ಪ್ರತೀಕವಾಗಿದ್ದು, ಅದು ಪರಿಸರದ ದೃಷ್ಟಿಯಿಂದ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಫ್ರೆಂಚ್ ಮೂಲದ ಪತ್ರಕರ್ತ ಡಾ.ಕ್ಲಾಡ್ ಅರ್ಪಿ ಹೇಳಿದ್ದಾರೆ.ಮಂಗಳೂರಿನ ಲಿಟ್ ಫೆಸ್ಟ್‌ನಲ್ಲಿ ಭಾನುವಾರ ಹಿಮಾಲಯನ್ ಜಿಯೋಪಾಲಿಟಿಕ್ಸ್ ಬಗ್ಗೆ ಅವರು ವಿಚಾರ ಮಂಡಿಸಿದರು.
ರಾಯಭಾರಿ ದಿಲಿಪ್ ಸಿನ್ಹಾ ಮಾತನಾಡಿ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಆಸಕ್ತಿ ಇಟ್ಟುಕೊಂಡು ಅದರಲ್ಲಿ ತೊಡಗಿಸಿಕೊಳ್ಳಬೇಕು. ಭಾರತೀಯ ರಾಜತಾಂತ್ರಿಕರಿಗೆ ಭಾರತ-ಚೀನಾ ಸಂಬಂಧಗಳು ಯೋಚನೆಯ ಮುಖ್ಯ ಭಾಗವಾಗುತ್ತವೆ. ಭಾರತ-ಚೀನಾ ಗಡಿವಿವಾದದ ಬಗ್ಗೆ ಬರೆದ ಪುಸ್ತಕಗಳು ಚೀನಾದ ಹಕ್ಕನ್ನು ಒಪ್ಪಿ, ಭಾರತದ ಹಕ್ಕನ್ನು ದುರ್ಬಲ ಎಂದು ತೋರಿಸುವುದು ಸರಿಯಲ್ಲ ಎಂದರು.ಅಂತಾರಾಷ್ಟ್ರೀಯ ಬೌದ್ಧ ಸಮೂಹದ ಉಪಪ್ರಧಾನ ಕಾರ್ಯದರ್ಶಿ ಶಾಸ್ತೆ ಕೇನ್ಸೋ ರಿಂಪೋಚೆ ಜಾಂಗಚುಪ್ ಚೊಡನ್,
ಜಿಯೋಪಾಲಿಟಿಕ್ಸ್‌ನಲ್ಲಿ ಪ್ರತಿಯೊಂದು ರಾಷ್ಟ್ರವೂ ತನ್ನ ವಿಶಿಷ್ಟ ಸಂಪತ್ತುಗಳನ್ನು ಬಳಸಿಕೊಂಡು ತಾನು ಬಲವಾಗಲು ಪ್ರಯತ್ನಿಸುತ್ತಿದೆ. ಚೀನಾಕ್ಕೆ ಬಹುಸಂಖ್ಯೆಯ ಬೌದ್ಧ ಅನುಯಾಯಿಗಳು ಇದ್ದರೂ, ಭಾರತದ ಬಳಿ ಬೌದ್ಧ ಧರ್ಮದ ಉಗಮ ಮತ್ತು ಐತಿಹಾಸಿಕ ಪರಂಪರೆ ಇದೆ. ಬೌದ್ಧ ಧರ್ಮ ಭಾರತದಲ್ಲಿ ಹುಟ್ಟಿದ್ದು, ಬೆಳೆಯಿದ್ದು, ನಂತರ ಜಗತ್ತಿಗೆ ಹರಡಿತು. ಹಿಮಾಲಯದ ಜಿಯೋಪಾಲಿಟಿಕ್ಸ್‌ನಲ್ಲಿ ಬೌದ್ಧ ಧರ್ಮದ ಪ್ರಭಾವ ಭಾರತಕ್ಕೇ ಹೆಚ್ಚಾಗಿದೆ. ಚೀನಾ ಮತ್ತು ಭಾರತದ ಆಖ್ಯಾನಗಳಲ್ಲಿ ವೈರುಧ್ಯ ಸಾಮಾನ್ಯ ಎಂದರು.ಈ ಸಂವಾದವನ್ನು ಬಿಪೀಂದ್ರ ನಡೆಸಿಕೊಟ್ಟರು.