ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಮಂಗಳವಾರ ‘ಹಿಂದಿ ದಿವಸ್’ ಕಾರ್ಯಕ್ರಮ ನಡೆಯಿತು.

ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಮಂಗಳವಾರ ‘ಹಿಂದಿ ದಿವಸ್’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಹತ್ತನೇ ತರಗತಿಯ ಹಿಂದಿ ವಿದ್ಯಾರ್ಥಿಗಳು ವಿಶೇಷ ಲಘು ನಾಟಕ ಪ್ರದರ್ಶಿಸಿದರು. ಹಿಂದಿಯ ಪ್ರಸಿದ್ಧ ಸಂತರಾದ ರಹೀಮ್ ಹಾಗೂ ಕಬೀರ್ ಅವರು ಆಧುನಿಕ ಗಣಕಯಂತ್ರ ಯುಗದ ಶಾಲಾ ವಾತಾವರಣಕ್ಕೆ ಪಾದಾರ್ಪಣೆ ಮಾಡಿದರೆ ಪರಿಸ್ಥಿತಿ ಹೇಗಿರುತ್ತದೆ ಎಂಬುದರ ನಾಟಕವನ್ನು ರೂಪಿಸಲಾಗಿತ್ತು.. ಒಂಬತ್ತನೇ ತರಗತಿಯ ವಿದ್ಯಾರ್ಥಿಯಾದ ಆದಿತ್ಯ ಕುಮಾರ್ ಹಿಂದಿ ಭಾಷೆಯ ಸೌಂದರ್ಯವನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆದ್ಯಾ ಶೆಣೈ ಸ್ವಾಗತಿಸಿದರು. ರುತುರಾಜ್ ವಂದಿಸಿದರು. ವಿದ್ಯಾರ್ಥಿನಿ ಮಾನ್ಯಲಕ್ಷ್ಮೀ ಎನ್ ಪಿ ಕಾರ್ಯಕ್ರಮ ನಿರ್ವಹಿಸಿದರು.