ನಗರದ ಮಹಾತ್ಮ ಗಾಂಧಿ ಮೆಮೊರಿಯಲ್ ಸಂಧ್ಯಾ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ”ಹಿಂದಿ ದಿವಸ್” ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್. ಬಾಯಾರ್ ಅವರು ಆಗಮಿಸಿದ್ದರು. ಡಾ. ಬಾಯಾರ್ ಅವರು “ಹಿಂದಿ ಬಹಳ ಪ್ರಾಚೀನ ಭಾಷೆ ಮತ್ತು ಭಾವೈಕ್ಯದ ಭಾಷೆಯಾಗಿದೆ, ಇದು ಎಲ್ಲಾ ಬಗೆಯ ಜನರನ್ನು ಒಗ್ಗೂಡಿಸುವ ಭಾಷೆಯಾಗಿದೆ” ಎಂದರು.
ಉಡುಪಿ : ನಗರದ ಮಹಾತ್ಮ ಗಾಂಧಿ ಮೆಮೊರಿಯಲ್ ಸಂಧ್ಯಾ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ”ಹಿಂದಿ ದಿವಸ್” ಆಚರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್. ಬಾಯಾರ್ ಅವರು ಆಗಮಿಸಿದ್ದರು. ಡಾ. ಬಾಯಾರ್ ಅವರು “ಹಿಂದಿ ಬಹಳ ಪ್ರಾಚೀನ ಭಾಷೆ ಮತ್ತು ಭಾವೈಕ್ಯದ ಭಾಷೆಯಾಗಿದೆ, ಇದು ಎಲ್ಲಾ ಬಗೆಯ ಜನರನ್ನು ಒಗ್ಗೂಡಿಸುವ ಭಾಷೆಯಾಗಿದೆ” ಎಂದರು. ಹಿಂದಿ ದಿವಸ್ ಅಂಗವಾಗಿ ಕಾಲೇಜಿನಲ್ಲಿ ಹಿಂದಿಯಲ್ಲಿ ಆಶುಭಾಷಣವೇ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿಕಾಲೇಜಿನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. “ಡಿಜಿಟಲ್ ಯುಗ್ ಮೇ ಹಿಂದಿ” ವಿಷಯಕವಾದ ಭಿತ್ತಿಪತ್ರ ಪ್ರದರ್ಶನ ಮತ್ತು ರಂಗೋಲಿಗಳೊಂದಿಗೆ ವಿದ್ಯಾರ್ಥಿಗಳು ಸಭೆಯನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ದೇವಿದಾಸ್ ಎಸ್. ನಾಯ್ಕ್ ಅವರು ವಹಿಸಿದ್ದರು. ಹಿಂದಿ ಉಪನ್ಯಾಸಕಿ ಕೃತ್ತಿಕಾ ಪಿ. ಶೆಣೈ ಅವರು “ಹಿಂದಿ ದಿವಸ್” ನ ಔಚಿತ್ಯ, ಹಿಂದಿಯ ಹಿರಿಮೆಯ ಬಗಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೋರ್ವ ಹಿಂದಿ ಉಪನ್ಯಾಸಕಿ ಕು. ಸುನೀತಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕು. ಸ್ವಾತಿ ಎಸ್. ಶೆಟ್ಟಿ ಕಾರ್ಯಕ್ರಮವನ್ನುನಿರೂಪಿಸಿದರೆ, ಕು. ಮಿತಾಲಿ ವಿನಾಯಕ್ ಪೈ ಅತಿಥಿ ಪರಿಚಯವನ್ನು ಮತ್ತು ವಿದ್ಯಾರ್ಥಿ ಯಥಾರ್ಥ್ ಸುವರ್ಣ ಸ್ಪರ್ಧಾ ವಿಜೇತರ ಪಟ್ಟಿಯನ್ನು ಓದಿದರು. ಕು. ಅನ್ಸು ಕುಮಾರಿ ಧನ್ಯವಾದ ಸಮರ್ಪಣೆ ಮಾಡಿದರು.