ಸಾರಾಂಶ
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಸಮಾಜದ ಪರವಾಗಿ ಕೆಲಸ ಮಾಡುವ ಮುಖಂಡರನ್ನು ಹತ್ಯೆ ಮಾಡುವ ಮೂಲಕ ಹಿಂದೂಗಳನ್ನು ಹೆದರಿಸಬಹುದು ಎನ್ನುವ ಭ್ರಮೆಯಲ್ಲಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್- ೨ ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಪತ್ರ ಸಲ್ಲಿಸಿದರು.ಹಿಂದೂ ಸಂಘಟನೆ ಮುಖಂಡ ನಟರಾಜ್ ಬಾಳೆಕಾಯಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಸಮಾಜದ ಪರವಾಗಿ ಕೆಲಸ ಮಾಡುವ ಮುಖಂಡರನ್ನು ಹತ್ಯೆ ಮಾಡುವ ಮೂಲಕ ಹಿಂದೂಗಳನ್ನು ಹೆದರಿಸಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ಸಾವಿರಾರು ಜನ ಜಿಹಾದಿ ಮುಸಲ್ಮಾನಿಗಳು ಬಂದರೂ ಹಿಂದೂ ಸಮಾಜ ಹೆದರುವುದಿಲ್ಲ. ಪ್ರತಿ ಬಾರಿ ಹಿಂದೂ ಮುಖಂಡರ ಹತ್ಯೆಯಾದಾಗಲೂ ಹಿಂದೂ ಸಮಾಜ ಕೈಕಟ್ಟಿ ಕುಳಿತಿಲ್ಲ, ಪ್ರತೀಕಾರ ತೀರಿಸಿಕೊಂಡಿದೆ. ಸರ್ಕಾರ ಹಾಗೂ ಗೃಹ ಸಚಿವರು ಹಿಂದೂಪರ ಕೆಲಸ ಮಾಡುವವರನ್ನು ರೌಡಿ ಶೀಟರ್ ಹತ್ಯೆ ಎನ್ನುತ್ತಾರೆ ಇದು ಖಂಡನೀಯ. ಕೂಡಲೇ ಸರ್ಕಾರ ಸುಹಾಸ್‌ನ ಹತ್ಯೆ ಮಾಡಿದವರನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡ ವಿನಯ್ ಮಡೇನೂರು ಮಾತನಾಡಿ, ಹಿಂದೂಗಳ ಮೇಲೆ ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸುಹಾಸ್ ಶೆಟ್ಟಿ ಹತ್ಯೆಯಾಗಿ ಒಂದು ದಿನ ಕಳೆದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಗೃಹ ಸಚಿವರು ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ನಾಗೇಶ್, ಕಾರ್ತಿಕ್, ಕಿರಣ್, ಗಾಡಿ ಮಂಜಣ್ಣ, ರಘುನಂದನ್, ಸುರೇಶ್ ಮತ್ತಿತರರಿದ್ದರು.