ನಾಳೆ ಶಿರಹಟ್ಟಿಯಲ್ಲಿ ಹಿಂದೂ ಸಮಾವೇಶ, ಪ್ರಮೋದ ಮುತಾಲಿಕ, ಶಾಸಕ ಯತ್ನಾಳ ಭಾಗವಹಿಸುವ ನಿರೀಕ್ಷೆ

| Published : Nov 07 2025, 02:30 AM IST

ನಾಳೆ ಶಿರಹಟ್ಟಿಯಲ್ಲಿ ಹಿಂದೂ ಸಮಾವೇಶ, ಪ್ರಮೋದ ಮುತಾಲಿಕ, ಶಾಸಕ ಯತ್ನಾಳ ಭಾಗವಹಿಸುವ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾವೇಶ ಪಕ್ಷಾತೀತವಾಗಿದೆ. ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು. ಹಿಂದೂಗಳ ಅನ್ಯಾಯ ವಿರುದ್ಧ ನಡೆದಿರುವ ಷಡ್ಯಂತ್ರ ಬಗ್ಗೆ ಅರಿತು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು.

ಗದಗ: ಶಿರಹಟ್ಟಿ ಪಟ್ಟಣದಲ್ಲಿ ನ. 8ರಂದು ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಲಿದ್ದಾರೆ ಎಂದು ಶ್ರೀರಾಮಸೇನೆ ಬೆಳಗಾವಿ ವಿಭಾಗದ ಮುಖ್ಯಸ್ಥ ರಾಜು ಖಾನಪ್ಪನವರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಶಿರಹಟ್ಟಿಯಲ್ಲಿ ಹಿಂದೂ ಯುವಕನ ಮೇಲೆ ಎಸ್‌ಡಿಪಿಐ ಮುಖಂಡರು ಹಲ್ಲೆ ನಡೆಸಿದ್ದಾರೆ. ನೆಮ್ಮದಿಯಿಂದ ಇದ್ದ ಶಿರಹಟ್ಟಿ ಪಟ್ಟಣದಲ್ಲಿ ಕೋಮುಗಲಭೆ ಶುರುವಾಗಿದೆ. ಪ್ರಕರಣದಲ್ಲಿ ಎಸ್‌ಡಿಪಿಐ ಮುಖಂಡರು ಪೊಲೀಸ್ ಇಲಾಖೆ ಮೇಲೆ ಹಲ್ಲೆ ನಡೆಸಿದೆ.

ಹೀಗಿದ್ದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿದೆ. ಶಿರಹಟ್ಟಿ ಪ್ರಕರಣದಲ್ಲಿ ಹಿಂದೂಗಳ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು. ಆದರೆ, ಎಸ್‌ಡಿಪಿಐ ಕಾರ್ಯಕರ್ತರ ರಕ್ಷಣೆ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಶಿರಹಟ್ಟಿಯಲ್ಲಿ ಸ್ವಾಗತಿಸುತ್ತಾರೆ. ಹೀಗಾಗಿ ಹಿಂದೂಗಳ ರಕ್ಷಣೆಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಮಾವೇಶ ಪಕ್ಷಾತೀತವಾಗಿದೆ. ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು. ಹಿಂದೂಗಳ ಅನ್ಯಾಯ ವಿರುದ್ಧ ನಡೆದಿರುವ ಷಡ್ಯಂತ್ರ ಬಗ್ಗೆ ಅರಿತು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದರು.

ಶಿರಹಟ್ಟಿ, ಲಕ್ಷ್ಮೇಶ್ವರ ಮುಂಡರಗಿಯಲ್ಲಿ ಮರಳು ಮಾಫಿಯಾ ತಲೆ ಎತ್ತಿದೆ. ಇದಕ್ಕೆ ಕಾರಣವೇ ಪೊಲೀಸ್ ಇಲಾಖೆ. ಈ ಭಾಗದಲ್ಲಿ ರಾಜಾರೋಷವಾಗಿ ಇಸ್ಪಿಟ್ ಆಡಲಾಗುತ್ತಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲಾಗುತ್ತಿದೆ. ಎಸ್ಪಿ ರೋಹನ್ ಜಗದೀಶ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಈ ವೇಳೆ ಕುಮಾರ ನಡಗೇರಿ, ಪ್ರಕಾಶ ಬಡೆನ್ನವರ, ಸಂತೋಷ ಕುರಿ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಶಿವಯೋಗಿ ಹಿರೇಮಠ, ಶಂಕರ ಬಾವಿ ಇತರರು ಇದ್ದರು.