ಇಂದು ಹಿಂದೂ ಏಕತಾ ಗಣಪತಿ ಉತ್ಸವ: ಭದ್ರತೆ

| Published : Sep 04 2025, 01:00 AM IST

ಸಾರಾಂಶ

ಪಟ್ಟಣದ ಹಿಂದೂ ಏಕತಾ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನಾ ಮೆರವಣಿಗೆ ಸೆ.4ರಂದು ನಡೆಯಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ಸ್ಥಳೀಯ ಆರಕ್ಷಕ ವೃತ್ತ ನಿರೀಕ್ಷಕ ರವೀಶ್ ಚನ್ನಗಿರಿಯಲ್ಲಿ ತಿಳಿಸಿದ್ದಾರೆ.

ಚನ್ನಗಿರಿ: ಪಟ್ಟಣದ ಹಿಂದೂ ಏಕತಾ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನಾ ಮೆರವಣಿಗೆ ಸೆ.4ರಂದು ನಡೆಯಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ಸ್ಥಳೀಯ ಆರಕ್ಷಕ ವೃತ್ತ ನಿರೀಕ್ಷಕ ರವೀಶ್ ತಿಳಿಸಿದ್ದಾರೆ.

ಮೂವರು ಡಿವೈಎಸ್‌ಪಿ, ಆರು ಜನ ವೃತ್ತ ನಿರೀಕ್ಷಕರು, 11 ಜನ ಸಬ್ ಇನ್‌ಸ್ಪೆಕ್ಟರ್, 12 ಜನ ಸಹಾಯಕ ಸಬ್ ಇನ್‌ಸ್ಪೆಕ್ಟರ್, 1 ಜಿಲ್ಲಾ ರಿಸರ್ವ ಪೊಲೀಸ್ ಪಡೆ, 2 ಕೆ.ಎಸ್.ಆರ್.ಪಿ. ಪಡೆ, ಪೊಲೀಸ್ ಮತ್ತು ದಫೇದಾರ್ ಸೇರಿದಂತೆ 161 ಸಿಬ್ಬಂದಿ, 144 ಗೃಹ ರಕ್ಷಕದಳ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಪಟ್ಟಣದ ಎಲ್ಲ ಕಡೆಗಳಲ್ಲಿಯೋ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದು, ಒಂದು ಮೆರವಣಿಗೆ ವೇಳೆ ನಿಗಾ ವಹಿಸಲು ಡ್ರೋಣ್ ಕ್ಯಾಮರಾ ಬಳಸಿಕೊಳ್ಳಲಾಗುತ್ತಿದೆ. ಮೆರವಣಿಗೆಯು ತಾಲೂಕು ಕ್ರೀಡಾಂಗಣದಿಂದ ಹೊರಟು ಮುಖ್ಯ ಬಸ್ ನಿಲ್ದಾಣ, ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ಕೋಟೆ ವೃತ್ತದಿಂದ ಅಂತರಘಟ್ಟಮ್ಮ ದೇವಾಲಯದ ಮುಂಭಾಗದಿಂದ ಸಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಲೇಜ್ ರಸ್ತೆ, ನೃಪತುಂಗಾ ರಸ್ತೆಯ ಮೂಲಕಸಾಗಿ ಬಸ್ ನಿಲ್ದಾಣದ ಬಳಿ ಇರುವ ಗಣಪತಿ ಪುಷ್ಕರಣಿಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ. ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್‌ ಬದಲು ಜಾನಪದ ಕಲಾತಂಡಗಳ ಬಳಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

- - -

-3ಕೆಸಿಎನ್ಜಿ1: ಹಿಂದೂ ಏಕತಾ ಗಣಪತಿ ಮೂರ್ತಿ.