ಸಾರಾಂಶ
ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಅವರಣದ ಮಾರಿ ಗುಡಿ ಮುಂಭಾಗ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕನ್ನಡಪ್ರಭವಾರ್ತೆ, ಚಾಮರಾಜನಗರ
ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಅವರಣದ ಮಾರಿ ಗುಡಿ ಮುಂಭಾಗ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ. ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವುದರಿಂದ ನಾವು ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮುಖಂಡರು ತಿಳಿಸಿದರು .
ಹಿಂದೂಗಳಾದ ನಾವು ಆಚರಿಸುವ ಅತ್ಯಂತ ಸಂಭ್ರಮ ಮತ್ತು ಸಡಗರದ ಹಬ್ಬಗಳಲ್ಲಿ ಗಣೇಶ ಚತುರ್ಥಿ ಹಬ್ಬ ಕೂಡ ಒಂದಾಗಿದೆ. ಗಣೇಶ ಚತುರ್ಥಿ ಹಬ್ಬವನ್ನು ಸುಮಾರು ದಿನಗಳ ಕಾಲ ಆಚರಿಸುವಂತಹ ಒಂದು ಪ್ರಮುಖವಾದ ಹಬ್ಬವಾಗಿದೆ. ಗಣೇಶನನ್ನು ಶಕ್ತಿ ಮತ್ತು ಜ್ಞಾನದ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶನನ್ನು ಶಕ್ತಿಶಾಲಿ ಎನ್ನುತ್ತಾರೆ ಎಂದರು.ಯಾವುದೇ ಶುಭ ಕೆಲಸವನ್ನು ಪ್ರಾರಂಭಿಸುವ ಮುನ್ನ ಗಣೇಶನನ್ನು ಪೂಜಿಸುತ್ತೇವೆ. ಇದು ಆ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ನಮ್ಮಲ್ಲಿ ಧನಾತ್ಮಕ ಕಂಪನಗಳನ್ನು ಕೂಡ ಹೆಚ್ಚಾಗಿಸುತ್ತದೆ ಎನ್ನುವ ನಂಬಿಕೆಯಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಶ್ರೀಕಂಠಸ್ವಾಮಿ,, ಕೃಷ್ಣಕುಮಾರ್, ದರ್ಶನ್ ಸುರೇಶ್‌ನಾಯಕ, ಕೇಶವಮೂರ್ತಿ, ಮಂಜುನಾಥ್, ರಾಜೇಂದ್ರಕುಮಾರ್, ಜಗ್ಗ, ರವಿ, ಕುಮಾರ್, ರವಿ, ಬಸಪ್ಪ, ಇತರರು ಇದ್ದರು.