ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಪ್ರತೀ ವರ್ಷ ಪಟ್ಟಣದ ಮರವಂಜಿ ವೃತ್ತದಲ್ಲಿ ಪ್ರತಿಷ್ಠಾಪನೆಯಾಗುವ ಶ್ರೀ ಹಿಂದೂ ಮಹಾ ಗಣಪತಿ ಸಮಿತಿಯ ಶ್ರೀ ಗಣಪತಿ ಖಡ್ಗವು ಈ ಬಾರಿ ₹1.45 ಲಕ್ಷಕ್ಕೆ ಹರಾಜು ನಡೆದಿದೆ ಎಂದು ಮಹಾಸಭಾದ ಗಣಪತಿ ಸಮಿತಿ ಅಧ್ಯಕ್ಷ ಪೃಥ್ವಿಕ್ ದೇವರಾಜ್ ತಿಳಿಸಿದರು.ಈ ಬಾರಿ 9ನೇ ವರ್ಷದ ಗಣಪತಿ ಉತ್ಸವವು ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಗಣಪತಿ ವಿಸರ್ಜನೆ ವೇಳೆ ಈ ಬಾರಿ ಶ್ರೀಯವರ ಖಡ್ಗದ ಹರಾಜು ಪ್ರಕ್ರಿಯೆ ನಡೆದು ಪಟ್ಟಣದ ತಾಲೂಕು ಪಂಚಾಯಿತಿ ಸಮೀಪದ ಆಶೀರ್ವಾದ ಹೋಟೆಲ್ ಮಾಲೀಕರಾದ ಕಿರಣ್ ಅಂಬಿ ಮತ್ತು ಕಾರ್ತಿಕ್ ಸಹೋದರರು ₹1.45 ಲಕ್ಷಕ್ಕೆ ಶ್ರೀಯವರ ಖಡ್ಗವನ್ನು ಹರಾಜು ಕೂಗುವ ಮೂಲಕ ಪಡೆದು ಗಣೇಶನ ಕೃಪೆಗೆ ಪಾತ್ರರಾದರು. ಮುಂದುವರೆದ ಹರಾಜು ಪ್ರಕ್ರಿಯೆಯಲ್ಲಿ ಬೆಳ್ಳಿ ಸೇನೆ ಅಧ್ಯಕ್ಷ ಹಾಗೂ ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷರಾದ ಷಡಾಕ್ಷರಿ ಅವರು ಗಣೇಶನ ಖಡ್ಗದಾರಿಗೆ ಕುದುರೆಯನ್ನು ಮೆರವಣಿಗೆಗೆ ನೀಡಲು ಹಾಗೂ ವೈಯುಕ್ತಿಕವಾಗಿ ಹಿಂದೂ ಮಹಾ ಸಭಾ ಗಣಪತಿ ಸಮಿತಿಗೆ 10 ಗ್ರಾಂ ಚಿನ್ನವನ್ನು ದಾನವಾಗಿ ನೀಡುತ್ತೇನೆ ಎಂದು ಘೋಷಿಸಿದರು. ಅಲ್ಲದೆ ಪಟ್ಟಣದ ಟಿಂಬರ್ ಉದ್ಯಮಿ ಭೀಮ್‍ಲಾಲ್ ಕೊಠಾರಿ ಅವರು 10ನೇ ಗಣೇಶೋತ್ಸವಕ್ಕೆ ತಾವು ಅನ್ನದಾಸೋಹಕ್ಕೆ ₹51 ಸಾವಿರ ನೀಡುವುದಾಗಿ ಘೋಷಿಸಿದರು.
ವಿವಿಧ ಸಮಾಜಗಳ ಅಧ್ಯಕ್ಷರು ಹಾಗೂ ಮುಖಂಡರು ಮಹಿಳೆಯರಿಗೆ ಪ್ರತ್ಯೇಕ ಡಿ.ಜೆ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು ಮುಂದಿನ ಬಾರಿ ಭಕ್ತರ ಕೋರಿಕೆಯಂತೆ ವ್ಯವಸ್ಥೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಸಮಿತಿಯ ಮುಖ್ಯಸ್ಥರಾದ ಕೋಟೆ ಆನಂದ್,ಪುರಸಭೆ ಸದಸ್ಯ ಯತಿರಾಜ್, ಮಂಜುನಾಥ ಜೈನ್,ವಿನಯ್ ವಳ್ಳು,ಪಂಗ್ಲಿ ಮಂಜು, ಭದ್ರಿಸ್ವಾಮಿ, ಅಗ್ನಿನಾಗೇಂದ್ರ, ಚೇತನ್,ಅಭಿಷೇಕ್,ಯಶ್ವಂತ್,ಆಸ್ತಿಕ್ ,ನವೀನ್‍ಅರಸ್,ಕಿರಣ್‍ರಾಜ್, ಗುರುಸೋಮೆಶ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಇದ್ದರು.