ಹಾನಗಲ್ಲಿನಲ್ಲಿ ಹಿಂದು ಮಹಾ ಶಕ್ತಿ ಪ್ರದರ್ಶನ

| Published : Nov 07 2023, 01:30 AM IST

ಹಾನಗಲ್ಲಿನಲ್ಲಿ ಹಿಂದು ಮಹಾ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯದಶಮಿಯಂದು ಹಾನಗಲ್ಲ ತಾರಕೇಶ್ವರ ಪಲ್ಲಕ್ಕಿಗೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಹಿಂದು ಹಿತರಕ್ಷಕ ವೇದಿಕೆ ವತಿಯಿಂದ ಪಲ್ಲಕ್ಕಿ ಉತ್ಸವ- ಶೋಭಾಯಾತ್ರೆ ನಡೆಸಿ ಶಾಂತವಾಗಿ ಪ್ರತಿಭಟನೆ ನಡೆಸಲಾಯಿತು.

ತಾರಕೇಶ್ವರ ಪಲ್ಲಕ್ಕಿ ಮರವಣಿಗೆಗೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಬೃಹತ್ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ವಿಜಯದಶಮಿಯಂದು ಹಾನಗಲ್ಲ ತಾರಕೇಶ್ವರ ಪಲ್ಲಕ್ಕಿಗೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಹಿಂದು ಹಿತರಕ್ಷಕ ವೇದಿಕೆ ವತಿಯಿಂದ ಪಲ್ಲಕ್ಕಿ ಉತ್ಸವ- ಶೋಭಾಯಾತ್ರೆ ನಡೆಸಿ ಶಾಂತವಾಗಿ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ಇಲ್ಲಿನ ವಿರಕ್ತಮಠದ ಆವರಣದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಾರಕೇಶ್ವರ ಪಲ್ಲಕ್ಕಿಉತ್ಸವ- ಶೋಭಾಯಾತ್ರೆಗೆ ಚಾಲನೆ ನೀಡಿದರು. ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಮುಖ್ಯ ರಸ್ತೆಯ ಮೂಲಕ ಗ್ರಾಮದೇವಿ ಪಾದಗಟ್ಟಿ, ಗಜಾನನ ಭವನ ವೃತ್ತ, ಚಾವಡಿ ಕತ್ರಿ, ಸೋಮವಾರಪೇಟೆ, ಕಲ್ಲಭಾವಿ ಮೂಲಕ ಮಹಾತ್ಮಾಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಯಿತು. ಅಲ್ಲಿ ಸಭೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮೆರವಣಿಗೆಯಲ್ಲಿ ಅಕ್ಕಿಆಲೂರು ಚನ್ನವೀರೇಶ್ವರ ಮಠದ ಶಿವಬಸವ ಮಹಾಸ್ವಾಮಿಗಳು, ಕೂಡಲದ ಗುರು ನಂಜೇಶ್ವರ ಮಠದ ಗುರುಮಹೇಶ್ವರ ಮಹಾಸ್ವಾಮಿಗಳು, ಕುಮಾರಪಟ್ಟಣದ ಪುಣ್ಯಕೋಟಿ ಮಹಾಸ್ವಾಮಿಗಳು, ಹಿಂದೂ ಹಿತರಕ್ಷಕ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಗೌರವಾಧ್ಯಕ್ಷ ಎಂ.ಬಿ. ಕಲಾಲ, ಮುಖಂಡರಾದ ಬಿ.ಎಸ್. ಅಕ್ಕಿವಳ್ಳಿ, ಭೋಜರಾಜ ಕರೂದಿ, ಯಲ್ಲಪ್ಪ ಕಿತ್ತೂರ, ಶಿವರಾಜ ಸಜ್ಜನರ, ಪದ್ಮನಾಭ ಕುಂದಾಪೂರ, ಕೃಷ್ಣ ಈಳಿಗೇರ, ಮಾಲತೇಶ ಸೊಪ್ಪಿನ, ರಾಜಶೇಖರಗೌಡ ಕಟ್ಟೇಗೌಡರ, ದೇವೇಂದ್ರಪ್ಪ ಮೂಡ್ಲಿ, ಹನುಮಂತಪ್ಪ ಯಳ್ಳೂರ, ಅನಂತವಿಕಾಸ ನಿಂಗೋಜಿ, ರವಿ ಪುರೋಹಿತ, ಎಸ್.ಎಂ. ಕೋತಂಬರಿ, ಮಹೇಶ ಪವಾಡಿ, ಮಲ್ಲಿಕಾರ್ಜುನ ಅಗಡಿ, ಹನುಮಂತಪ್ಪ ಹುಡೇದ, ಮನೋಜ ಕಲಾಲ, ಚೇತನ ಬೆಂಡಿಗೇರಿ, ಪ್ರಶಾಂತ ಕಂಕಾಳೆ, ಬಸವರಾಜ ಹಾದಿಮನಿ, ಸುರೇಶ ರಾಯ್ಕರ, ಹನುಮಂತಪ್ಪ ಮಲಗುಂದ, ನಾಗೇಂದ್ರ ತುಮರಿಕೊಪ್ಪ, ನಾಗೇಂದ್ರ ಬಂಕಾಪೂರ, ಗಣೇಶ ಮೂಡ್ಲಿ, ರೇಖಾ ಶೆಟ್ಟರ, ಮಧುಮತಿ ಪೂಜಾರ, ಸವಿತಾ ಉದಾಸಿ, ಮಮತಾ ಆರೇಗೊಪ್ಪ, ಶೋಭಾ ಉಗ್ರಣ್ಣನವರ, ರಾಧಿಕಾ ಪರಾಂಡೆ, ಸುಜಾತಾ ನಂದಿಶೆಟ್ಟರ ಮೊದಲಾದವರ ನೇತೃತ್ವದಲ್ಲಿ ಶೋಭಾಯಾತ್ರೆ ಹಾಗೂ ಪ್ರತಿಭಟನೆ ಶಾಂತಯುತವಾಗಿ ಮುಕ್ತಾಯಗೊಂಡಿತು.

ಸವಣೂರು ಉಪವಿಭಾಗಾಧಿಕಾರಿ ಮಹ್ಮದ ಖೀಜರ್, ತಹಸೀಲ್ದಾರ ರವಿಕುಮಾರ, ಕೊರವರ ಎಸ್‌ಪಿ ಡಾ. ಶಿವಕುಮಾರ ಗಣಾರಿ, ಎಎಸ್‌ಪಿ ಸಿ. ಗೋಪಾಲ, ಸಿಪಿಐ ಎಸ್.ಆರ್. ಶ್ರೀಧರ ಸೇರಿದಂತೆ ವಿವಿಧ ೩೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯಲ್ಲಿದ್ದರು.

ಮಾರುಕಟ್ಟೆ ಬಂದ್‌:

ಶೋಭಾಯಾತ್ರೆ ಅಂಗವಾಗಿ ಹಾನಗಲ್ಲ ಸ್ವಯಂ ಪ್ರೇರಿತ ಬಂದ್‌ ಆಗಿತ್ತು. ಬಹುತೇಕ ವ್ಯಾಪಾರಸ್ಥರು ಅಂಗಡಿ ಬಂದ್‌ ಮಾಡಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ-ಕಾಲೇಜುಗಳು, ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.ಅನಗತ್ಯವಾಗಿ ಹಿಂದುಗಳನ್ನು ಕೆಣಕಿದವರಿಗೆ ಪಾಠ:ದುಷ್ಕರ್ಮಿಗಳ ಅಟ್ಟಹಾಸಕ್ಕೆ ಅಡಗಿ ಕುಳಿತುಕೊಳ್ಳುವವನು ಹಿಂದು ಅಲ್ಲ. ದೇಶಭಕ್ತಿ ಧರ್ಮನಿಷ್ಠೆ, ಧಾರ್ಮಿಕ ನಂಬಿಕೆಯನ್ನು ಉಳ್ಳವನಾಗಿ ಪರಮತ ಸಹಿಷ್ಣುತೆಯಿಂದ ಹಿಂದು ಬದುಕುತ್ತಾನೆ ಎಂದು ಹಿಂದೂ ಜಾಗರಣಾ ವೇದಿಕೆ ಉತ್ತರ ಪ್ರಾಂತ ಸಹ ಸಂಯೋಜನೆ ಶ್ರೀಕಾಂತ ಹೊಸಕೆರೆ ತಿಳಿಸಿದರು.ಶೋಭಾಯಾತ್ರೆ ನಂತರ ಮಹಾತ್ಮಾಗಾಂಧಿ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಾಂಧರಿಗೆ ಬೆನ್ನು ಚಪ್ಪರಿಸುವ ಅಧಿಕಾರಿಗಳ ಅವಶ್ಯಕತೆ ನಮಗಿಲ್ಲ. ಧರ್ಮದಿಂದಲೇ ಉತ್ತರ ಕೊಡುವ ಶಕ್ತಿ ಹಿಂದುಗಳಿಗಿದೆ. ನಮ್ಮ ಶಾಂತಿಯ ದುರುಪಯೋಗ ಬೇಡ. ನಮ್ಮ ಸಂಸ್ಕೃತಿಗೆ ಧಕ್ಕೆ ಬಂದರೆ ಸಹಿಸುವುದಿಲ್ಲ. ಹಾನಗಲ್ಲಿನಲ್ಲಿ ಅನಗತ್ಯವಾಗಿ ಹಿಂದೂಗಳನ್ನು ಕೆಣಕಿದವರಿಗೆ ಸರಿಯಾದ ಪಾಠ ಕಲಿಸುತ್ತೇವೆ. ಎಂಥದೇ ಸಂದರ್ಭದಲ್ಲಿ ಹಿಂದುವಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.ವೇದಿಕೆಯ ಗೌರವಾಧ್ಯಕ್ಷ ಎಂ.ಬಿ. ಕಲಾಲ ಮಾತನಾಡಿ, ಶಾಂತವಾಗಿದ್ದ ಹಾನಗಲ್ಲನ್ನು ಕೆಲವರು ಕದಡಿರಬಹುದು. ಇದು ಸರಿಯಲ್ಲ. ಹಾನಗಲ್ಲ ತಾರಕೇಶ್ವರ ದೇವಸ್ಥಾನಕ್ಕೆ ಶತ ಶತಮಾನಗಳ ಶ್ರದ್ಧಾಭಕ್ತಿ ಇದೆ. ಇದಕ್ಕೆ ಚ್ಯುತಿ ಉಂಟು ಮಾಡುವುದನ್ನು ಸಹಿಸುವುದಿಲ್ಲ. ಧಾರ್ಮಿಕ ನಂಬಿಕೆಗಳಿಗೆ ಆತಂಕ ತರುವುದು ಒಳ್ಳೆಯದಲ್ಲ ಎಂದರು.ಪುರಸಭಾ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಹಿಂದೂ ಹಿತರಕ್ಷಕ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು.ಈ ಸಂದರ್ಭದಲ್ಲಿ ಕುಮಾರಪಟ್ಟಣದ ಪುಣ್ಯಕೋಟಿ ಮಹಾಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಮಹಾಸ್ವಾಮಿಗಳು ಕೂಡಲದ ಗುರು ಮಹೇಶ್ವರ ಸ್ವಾಮಿಗಳು ಹಾಗೂ ಹಿಂದೂ ಧರ್ಮದ ವಿವಿಧ ಸಮಾಜದ ಮುಖಂಡರು ಇದ್ದರು.