Hindu Mahaganapati enters the 'Vande Mataram' controversy.
-ಪೂರ್ಣ ಗೀತೆ ಹಾಡುವ ಕುರಿತು ಹಿಂದೂ ಮಹಾಗಣಪತಿ ಸಂಘದಿಂದ ಜನಾಭಿಪ್ರಾಯ ಸಂಗ್ರಹ
--ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಹೊರಡಿಸಿರುವ ಆದೇಶ ಇದೀಗ ಚಿಕ್ಕಮಗಳೂರಿನಲ್ಲೂ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಗರದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪೂರ್ಣ ‘ವಂದೇ ಮಾತರಂ’ ಗೀತೆ ಹಾಡುವ ಕುರಿತು ಹಿಂದೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಸೆ.10ರಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಆದೇಶಿಸಿತ್ತು. ಈ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕೀಯ ವಾಗ್ವಾದವೂ ನಡೆಯುತ್ತಿದೆ.ಇದೀಗ ಚಿಕ್ಕಮಗಳೂರಿನಲ್ಲಿ ಶನಿವಾರ ನಡೆವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪೂರ್ಣ ಗೀತೆ ಹಾಡುವ ಕುರಿತು ಹಿಂದೂ ಮಹಾ ಗಣಪತಿ ಸೇವಾ ಸಂಘ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ.
ನಗರದ ಏಳು ಪ್ರಮುಖ ವೃತ್ತಗಳಲ್ಲಿ ಯಾವ ವೃತ್ತದಲ್ಲಿ ಪೂರ್ಣ ‘ವಂದೇ ಮಾತರಂ’ ಹಾಡಬೇಕು ಎಂಬುದರ ಕುರಿತು ಸಂಘವು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಅಭಿಪ್ರಾಯ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ಒಂದೇ ವೃತ್ತದ ಬದಲು ನಗರದ ಎಲ್ಲ ವೃತ್ತಗಳಲ್ಲೂ ಗೀತೆ ಹಾಡುವಂತೆ ಸಲಹೆ ನೀಡಿದ್ದಾರೆ......ಬಾಕ್ಸ್.....
ಆಯ್ಕೆ ಮಾಡಿಕೊಂಡ ಏಳು ವೃತ್ತಗಳುಅಶಿರ್ವಾದ ಸರ್ಕಲ್, ಮಲ್ಲಂದೂರು ಸರ್ಕಲ್, ಜೆವಿಎಸ್ ಸರ್ಕಲ್, ಹನುಮಂತಪ್ಪ ಸರ್ಕಲ್, ಶ್ರೀಕಂಠಪ್ಪ ಸರ್ಕಲ್, ಅಂಡೇ ಛತ್ರ ಸರ್ಕಲ್ ಹಾಗೂ ಚಂದ್ರಶೇಖರ್ ಅಜಾದ್ ವೃತ್ತ ಆಯ್ಕೆ ಮಾಡಿಕೊಳ್ಳಲಾಗಿದೆ.
