ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ, ವಿವಿಧ ಕಲಾ ತಂಡಗಳು ಹಾಗೂ ಡಿಜೆಯೊಂದಿಗೆ ಬೃಹತ್ ಶೋಭಾಯಾತ್ರೆಯ ಮೂಲಕ ಶಾಂತಿಯುತವಾಗಿ ಗುರುವಾರ ರಾತ್ರಿ ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ರಟ್ಟೀಹಳ್ಳಿ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ, ವಿವಿಧ ಕಲಾ ತಂಡಗಳು ಹಾಗೂ ಡಿಜೆಯೊಂದಿಗೆ ಬೃಹತ್ ಶೋಭಾಯಾತ್ರೆಯ ಮೂಲಕ ಶಾಂತಿಯುತವಾಗಿ ಗುರುವಾರ ರಾತ್ರಿ ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಅ.1ರ ಮುಂಜಾನೆ ವಿಘ್ನ ವಿನಾಯಕನಿಗೆ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ನಂತರ ಮಧ್ಯಾನ್ಹ 12.30ರಿಂದ ಸಾವಿರಾರು ಭಕ್ತರು ಅನ್ನ ಸಂತರ್ಪಣೆ ಜರುಗಿತು, ಸಂಜೆ 6 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಕೃಷಿ ಸಚಿವ ಬಿ. .ಪಾಟೀಲ್ ಹಾಗೂ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬ್ರಿಟಿಷರ ಧಾಸ್ಯದಿಂದ ಬಿಡಿಸಲು ಬಾಲಗಂಗಾಧರ ತಿಲಕರು ಮನೆಗಳಿಗೆ ಸೀಮಿತವಾಗಿದ್ದ ಗಣೋಶೋತ್ಸವವನ್ನು ಬೀದಿಗಳಲ್ಲಿ ಇಡುವ ಮೂಲಕ ಯುವ ಸಮುದಾಯ ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಒಗ್ಗೂಡಿಸು ಸಲುವಾಗಿ ಆರಂಭವಾದ ಗಣೇಶೋತ್ಸವ ಇಂದು 133 ವರ್ಷಗಳು ಗತಿಸಿವೆ. ಇಂದು ನಮ್ಮ ಹಬ್ಬ ಹರಿದಿನಗಳನ್ನು ಆಚರಿಸಬೇಕಾದರೆ ನೂರೆಂಟು ಕಟ್ಟು ಪಾಡುಗಳನ್ನು ಸರಕಾರ ನಮ್ಮ ಮೇಲೆ ಹೇರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಧರ್ಮ ಧರ್ಮಗಳ ಮಧ್ಯ ವಿಷಬೀಜ ಬಿತ್ತಿ ತಮ್ಮ ಓಟಿನ ಚಟಕ್ಕಾಗಿ ದೇಶದ್ರೋಹಿ ಕಸಬ್‌ನನ್ನು ದೇಶ ಪ್ರೇಮಿ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕರ ದೇಶಪ್ರೇಮವನ್ನು ದೇಶದ ಜನ ಗಮನಿಸುತ್ತಿದ್ದಾರೆ. ಆದ್ದರಿಂದ ಇಂಥ ಕೀಳು ರಾಜಕಾರಣ ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಹಬ್ಬ ಹರಿದಿನಗಳನ್ನು ಆಚರಿಸುವ ಸ್ವಾತಂತ್ರ್ಯವಿದ್ದು ಅದಕ್ಕೆ ಕಡಿವಾಣ ಹಾಕದೆ ಎಲ್ಲ ಜಾತಿ ಧರ್ಮಗಳು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಲು ಮುಕ್ತಗೊಳಿಸಬೇಕು ಎಂದರು.

ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್, ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾಯಾತ್ರೆ ಮಹಾಲಕ್ಷ್ಮೀ ಸರ್ಕಲ್‌, ಭಗತ್‌ಸಿಂಗ ಸರ್ಕಲ್, ಐ.ಬಿ. ಸರ್ಕಲ್, ಶಿವಾಜಿ ನಗರ, ಒಕ್ಕಲಗೇರಿ ಓಣಿ, ಹಳೇ ಬಸ್ಟ್ಯಾಂಡ್ ಸರ್ಕಲ್‌ಗೆ ರಾತ್ರಿ 9.30ಕ್ಕೆ ಬಂದು ತಲುಪಿತು ನಂತರ ನೆರೆದ ಸಾವಿರಾರು ಗಣೇಶ ಭಕ್ತರ ಮಧ್ಯ ಭಾರಿ ಸಿಡಿ ಮದ್ದುಗಳನ್ನು ಸಿಡಿಸಲಾಯಿತು ನಂತರ ಕೋಟೆ ಓಣಿಯ ಮೂಲಕ ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೊಡಿ, ಹೆಚ್ಚುವರಿ ಎಸ್.ಪಿ. ಶಿರಕೋಳ, ರಾಣಿಬೆನ್ನೂರ ಡಿವೈಎಸ್ಪಿ ಜಿ. ಲೋಕೇಶಕುಮಾರ, ಸಿಪಿಐ ಮಂಜುನಾಥ ಪಂಡಿತ್, ರಟ್ಟೀಹಳ್ಳಿ ಠಾಣೆ ಪಿಎಸ್‌ಐ ಚಂದ್ರಶೇಖರ ನಾಯ್ಕ ಸೇರಿದಂತೆ ನೂರಾರು ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದರು.

ಗಣೇಶ ಮಂಡಳಿ ಅಧ್ಯಕ್ಷ ಮಂಜು ಅಂಗರಗಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಆಡಿನವರ, ಪ.ಪಂ. ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್, ಮಾಲತೇಶಗೌಡ ಗಂಗೋಳ್, ದೇವರಾಜ ನಾಗಣ್ಣನವರ, ಸುನೀಲ್ ಸರಶೆಟ್ಟರ್, ಹಾಲನಗೌಡ ಪ್ಯಾಟಿಗೌಡ್ರ, ಅರುಣ ಗುಬ್ಬಿ, ರಾಮು ದೇವರಮನಿ, ಮಾಲತೇಶ ಸಾಳುಂಕೆ, ಸುನೀಲ್ ಹರವಿಶೆಟ್ಟರ್, ಭರತ್ ಬೈರೋಜಿಯವರ, ಕಿರಣ ಆಡಿನವರ, ರವಿ ಹದಡೇರ, ಬಸವರಾಜ ಕಟ್ಟಿಮನಿ, ರಾಮನಗೌಡ ದೊಡ್ಡಗೌಡ್ರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಇದ್ದರು.