ಹೊನ್ನಾಳಿ ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮಿತಿ ವತಿಯಿಂದ ಅಕ್ಟೋಬರ್ 3ರಂದು ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಅಕ್ಟೋಬರ್ 4ರಂದು ಶೋಭಾಯಾತ್ರೆ ಮೂಲಕ ಗೌರಿ-ಗಣೇಶ ವಿಸರ್ಜನಾ ಮೆರವಣಿಗೆ, ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್ ತಿಳಿಸಿದ್ದಾರೆ.

- ಇಂದು ಬೃಹತ್‌ ಬೈಕ್ ರ್ಯಾಲಿ: ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮಿತಿ ವತಿಯಿಂದ ಅಕ್ಟೋಬರ್ 3ರಂದು ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಅಕ್ಟೋಬರ್ 4ರಂದು ಶೋಭಾಯಾತ್ರೆ ಮೂಲಕ ಗೌರಿ-ಗಣೇಶ ವಿಸರ್ಜನಾ ಮೆರವಣಿಗೆ, ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್ ತಿಳಿಸಿದರು.

ಶುಕ್ರವಾರ ಸಂಜೆ ಸೇವಾ ಸಮಿತಿ ಸದಸ್ಯರೊಂದಿಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಛತ್ರಪತಿ ಶಿವಾಜಿ ಹಾಗೂ ಭಾರತಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅವರು ಮಾತನಾಡಿದರು.

ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮತಿ ವತಿಯಿಂದ ಈ ಬಾರಿ 50ನೇ ವರ್ಷದ ಆಚರಣೆ ಮಾಡಲಾಗುತ್ತಿದೆ. ಸಮಿತಿ ವತಿಯಿಂದ ಅ.4ರಂದು ಗೌರಿ-ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳಗ್ಗೆ 11 ಗಂಟೆಯಿಂದ ಪುರುಷರಿಗೆ 2 ಡಿ.ಜೆ., ಮಹಿಳೆಯರಿಗೆ ಪ್ರತ್ಯೇಕ ಡಿ.ಜೆ. ವ್ಯವಸ್ಥೆಯೊಂದಿಗೆ ಡೊಳ್ಳು, ಚಂಡೆ, ಕೇರಳದ ವಾಯಿಲಿನ್ ವಾದ್ಯ ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ ಎಂದರು.

ಹಳದಮ್ಮ ದೇವಿ ದೇವಸ್ಥಾನದಿಂದ ಉತ್ಸವ ಹೊರಟು ದುರ್ಗಿಗುಡಿ ಸರ್ಕಲ್‌ನಿಂದ ಹಿರೇಮಠ ಸರ್ಕಲ್ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಲಿದೆ. ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಭಾರತಮಾತಾ ಮೂರ್ತಿಗಳಿಗೆ ಮಾಲಾರ್ಪಣೆ ಬಳಿಕ ಕೆನರಾ ಬ್ಯಾಂಕ್ ರಸ್ತೆ ಮೂಲಕ ಪೇಟೆ ರಸ್ತೆಗೆ ಮೆರವಣಿಗೆ ಆಗಮಿಸಿ, ತುಮ್ಮಿನಕಟ್ಟೆ (ಚಾಂದಿನಿ ಚೌಕ್) ಸರ್ಕಲ್‌ಗೆ ಆಗಮಿಸಿ ಅಲ್ಲಿಂದ ಮುಂದೆ ತುಂಗಭದ್ರಾ ನದಿಗೆ ತೆರಳಿ ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುವುದು. ಎಲ್ಲರೂ ಸೇರಿ 50ನೇ ವರ್ಷದ ಗೌರಿ-ಗಣೇಶ ಮಹೋತ್ಸವದ ಮುೂರ್ತಿಗಳನ್ನು ಶಾಂತಿ, ಸೌಹಾರ್ದಯುತವಾಗಿ ವಿಸರ್ಜನಾ ಕಾರ್ಯಕ್ರಮ ನಡೆಸಲು ಸಹಕರಿಸಲು ಸಾರ್ಜಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಗೌರವ ಅಧ್ಯಕ್ಷ ಪೇಟೆ ಪ್ರಶಾಂತ್, ಗುರುಪಾದಯ್ಯ ಮಠದ್, ಗಣೇಶ್ ಟೈಲರ್, ಪ್ರಧಾನ ಕಾರ್ಯದರ್ಶಿ ಪೇಟೆ ಹರ್ಷ, ಉಪಾಧ್ಯಕ್ಷ ವಿನಯ್ ಎಂ. ವಗ್ಗರ್, ನಾಗರಾಜ್ ಬಾಡಿ ಬಿಲ್ಡರ್, ಕಾರ್ಯದರ್ಶಿ ಮಂಜುನಾಥ, ಸ್ವರೂರ್, ಸಮಿತಿಯ ಪದಾಧಿಕಾರಿಗಳು ಇದ್ದರು.

- - -

-2ಎಚ್‌ಎಲ್ಐ3:

ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಸಂಜೆ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್‌ ಅವರು ಸೇವಾ ಸಮಿತಿ ಸದಸ್ಯರೊಂದಿಗೆ ಛತ್ರಪತಿ ಶಿವಾಜಿ ಹಾಗೂ ಭಾರತಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗೌರಿ-ಗಣೇಶ ವಿಸರ್ಜನಾ ಕಾರ್ಯಕ್ರಮದ ಕುರಿತು ಮಾಹಿತಿ ಮಾತನಾಡಿದರು.