ಸಾರಾಂಶ
ಮಲ್ಪೆ ಕಡಲ ಕಿನಾರೆಯ ಗಾಂಧಿ ಪ್ರತಿಮೆ ಎದುರು ಗಣರಾಜೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಕಾರ್ಯಕ್ರಮ ಆಯೋಜಿಸಿತು. ಕಾರ್ಯಕ್ರಮದಲ್ಲಿ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಲ್ಪೆ
ಆರೆಸ್ಸೆಸ್, ಬಿಜೆಪಿ ಮತ್ತವುಗಳ ಸಹಸಂಘಟನೆಗಳ ಧೋರಣೆಯಾದ ಹಿಂದೂರಾಷ್ಟ್ರದ ಕಲ್ಪನೆ ಭಾರತದಲ್ಲಿ ಸಂವಿಧಾನ ಇರುವವರೆಗೆ ಅಸಾಧ್ಯ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.ಅವರು ಮಲ್ಪೆ ಕಡಲ ಕಿನಾರೆಯ ಗಾಂಧಿ ಪ್ರತಿಮೆ ಎದುರು ಗಣರಾಜೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಮಾನತೆ, ಸ್ವಾತಂತ್ರ್ಯ, ಸಹೋದರತೆಯನ್ನು ಬೋಧಿಸುವ ಭಾರತದ ಜಾತ್ಯತೀತ ಸಂವಿಧಾನವನ್ನು ಬುಡಮೇಲು ಮಾಡುವ ಸಂಘಪರಿವಾರದ ಹಿಂದುತ್ವದ ವಿರುದ್ಧ ದಲಿತತ್ವ ಹೋರಾಟ ನಡೆಸುವುದು ಅನಿವಾರ್ಯ ಎಂದರು.ಮಲ್ಪೆ ಬಂಜಾರು ಮೀನುಗಾರರ ಸಂಘ ಅಧ್ಯಕ್ಷ ಮಂಜುನಾಥ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಹಾರ ಹಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ಎಂಜಿನಿಯರ್ ರಮೇಶ್ ಪಾಲ್, ದಲಿತ ಮುಖಂಡ ಲೋಕೇಶ್ ಪಡುಬಿದ್ರಿ, ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು.ಮೀನುಗಾರ ನಾಯಕ ಸುದರ್ಶನ್ ಪಡುಕರೆ, ದಲಿತ ಮುಖಂಡ ಹರೀಶ್ ಸಲ್ಯಾನ್, ದಯಾಕರ್ ಮಲ್ಪೆ, ಸಂತೋಷ್ ಕಪ್ಪೆಟ್ಟು, ಗುಣವಂತ, ಸುಮಿತ್ ನೆರ್ಗಿ ಮುಂತಾದವರು ಭಾಗವಹಿಸಿದ್ದರು. ಪ್ರಸಾದ್ ನೆರ್ಗಿ ಸ್ವಾಗತಿಸಿ, ಕೃಷ್ಣ ಶ್ರೀಯಾನ್ ವಂದಿಸಿದರು.