ಸಾರಾಂಶ
ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಕುಟುಂಬದ ವಿರುದ್ಧ ಅನಗತ್ಯವಾಗಿ ಅಪಪ್ರಚಾರ
ಕನ್ನಡಪ್ರಭ ವಾರ್ತೆ ಮೈಸೂರು
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಜೆಡಿಎಸ್ ಮುಖಂಡರು ಸೋಮವಾರ ಮುಂಜಾನೆ ಕಾರುಗಳ ಮೂಲಕ ಧರ್ಮಸ್ಥಳ ಯಾತ್ರೆ ಹೊರಟರು.ನಗರದ ಸಾ.ರಾ. ಕನ್ವೆನ್ಷನ್ ಹಾಲ್ ಮುಂಭಾಗದಿಂದ ಮಾಜಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ಜಿಲ್ಲೆಯ ಜೆಡಿಎಸ್ ಮುಖಂಡರು ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ದರ್ಶನ ಪಡೆದರು.ಪ್ರಯಾಣಕ್ಕೂ ಮುನ್ನ ಸಾ.ರಾ. ಮಹೇಶ್ ಮಾತನಾಡಿ, ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಕುಟುಂಬದ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಆರೋಪಿಸಿದರು.ಇಲವಾಲದ ಬಳಿ ಮಂಡ್ಯದಿಂದ ಆಗಮಿಸಿದ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಹೊರಟ ಕಾರುಗಳೂ ಸೇರಿಕೊಂಡವು. ಮೈಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ಟಿ. ನರಸೀಪುರದಿಂದಲೂ ಅನೇಕ ಜೆಡಿಎಸ್ ಮುಖಂಡರು ಭಾಗವಹಿಸಿದರು.ವಿಧಾನಪರಿಷತ್ತು ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಮಾಜಿ ಶಾಸಕ ಕೆ. ಮಹದೇವ್, ಮುಖಂಡರಾದ ಕೃಷ್ಣನಾಯಕ, ಅಮಿತ್ ದೇವರಹಟ್ಟಿ, ಎಂ.ಜೆ. ರವಿಕುಮಾರ್, ಆರ್. ಲಿಂಗಪ್ಪ, ಬೆಳವಾಡಿ ಶಿವಮೂರ್ತಿ, ಕ್ಯಾತನಹಳ್ಳಿ ಶಿವಶಂಕರ ಗೌಡ, ಕೃಷ್ಣ, ಶೋಭಾ, ಅಶ್ವಿನಿ ಮೊದಲಾದವರು ಇದ್ದರು.