ಜನವರಿ 18ರಿಂದ ಫೆಬ್ರವರಿ 8ರವರೆಗೆ ಹಿಂದೂ ಸಮಾಜೋತ್ಸವ ಅಭಿಯಾನವನ್ನು ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೂ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಬೆಟ್ಟದಳ್ಳಿ ಗವಿಮಠ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಜನವರಿ 18ರಿಂದ ಫೆಬ್ರವರಿ 8ರವರೆಗೆ ಹಿಂದೂ ಸಮಾಜೋತ್ಸವ ಅಭಿಯಾನವನ್ನು ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೂ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದು ಬೆಟ್ಟದಳ್ಳಿ ಗವಿಮಠ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ತಿಳಿಸಿದರು. ಗುಬ್ಬಿ ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿಂದೂ ರಾಷ್ಟ್ರದಲ್ಲಿ ಎಲ್ಲರನ್ನೂ ಒಳಗೊಂಡಂತೆ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಂತ ರಾಷ್ಟ್ರ ನಮ್ಮದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲರೂ ಒಗ್ಗೂಡಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿದೆ. ಆದ್ದರಿಂದ ನಿಮ್ಮ ಗ್ರಾಮಗಳಲ್ಲಿ ಸ್ವಯಂ ಪ್ರೇರಿತರಾಗಿ ಇಂದು ಸಮಾಜವನ್ನು ಕಟ್ಟಿ ಬೆಳೆಸಬೇಕಾಗಿದೆ ಅದರಿಂದ ಎಲ್ಲರೂ ಕೂಡ ಈ ಒಂದು ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಕೋಡಿಮಠದ ಬಸವ ಬೃಂಗೇಶ್ವರ ಸ್ವಾಮಿಗಳು ಹಿಂದೂ ಸಮಾಜದ ಉಪಾಧ್ಯಕ್ಷ ದವಡೆಹಳ್ಳಿ ದಕ್ಷಿಣ ಮೂರ್ತಿ, ಸಂಘದ ಅಧ್ಯಕ್ಷರು ರುದ್ರೇಶ್, ಸಂಘದ ಪದಾಧಿಕಾರಿಗಳಾದ ಶಿವಕುಮಾರ್ ನಂಜೇಗೌಡರು ಪ್ರೊ. ದಾಸಪ್ಪ, ಹುಚ್ಚರೇ ಗೌಡರು, ಹೇಮಂತ್, ರಜಿನಿ ಸುರೇಶ್, ಪಲ್ಲವಿ, ಲತಾ, ಕವಿತಾ ಹಾಗೂ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.