ಹಿಂದೂ ಯುವಕನ ಹತ್ಯೆ ಪ್ರಕರಣ ಎನ್‌ಐಎಗೆ ವಹಿಸಿ

| Published : Aug 12 2025, 12:30 AM IST

ಸಾರಾಂಶ

ತ್ರಿಕೋನ ಪ್ರೇಮ ಪ್ರಕರಣದಲ್ಲಿ ಹತ್ಯೆಯಾಗಿರುವ ಗವಿಸಿದ್ದಪ್ಪ ನಾಯಕ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿ ಸೋಮವಾರ ಕೊಪ್ಪಳ ನಗರದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಕೊಪ್ಪಳ:

ತ್ರಿಕೋನ ಪ್ರೇಮ ಪ್ರಕರಣದಲ್ಲಿ ಹತ್ಯೆಯಾಗಿರುವ ಗವಿಸಿದ್ದಪ್ಪ ನಾಯಕ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿ ಸೋಮವಾರ ನಗರದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ಕೊಲೆ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು. ಇಡೀ ಪ್ರಕರಣದ ಸಮಗ್ರ ತನಿಖೆಗಾಗಿ ಎನ್‌ಐಎಗೆ ವಹಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಲಾಯಿತು.

ಪ್ರತಿಭಟನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ವಾಲ್ಮೀಕಿ ನಾಯಕ ಮಹಾಸಭಾ ಪ್ರತಿಭಟನೆಗೆ ಕರೆ ನೀಡಿದ್ದರೂ ಇಡೀ ನಗರವನ್ನೇ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಹೋರಾಟ ಬೆಂಬಲಿಸಲಾಯಿತು. ನಗರದ ಮೂಲೆ ಮೂಲೆಯಲ್ಲೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು. ಮಧ್ಯಾಹ್ನ ಪ್ರಮುಖ ರಸ್ತೆಯಲ್ಲಿ ಸಂಚಾರವೂ ಸ್ತಬ್ಧವಾಗಿತ್ತು. ಆದರೆ, ಎಂದಿನಂತೆ ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಪ್ರತಿಭಟನಾ ಮೆರವಣಿಗೆ ಸಾಗುವ ಮಾರ್ಗ ಬದಲಾಯಿಸಿಕೊಂಡು ಸಂಚರಿಸಿದವು.

ನಗರದ ಗಡಿಯಾರ ಕಂಬದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಲಾಯಿತು. ನಗರದ ಹೃದಯ ಭಾಗವಾಗಿರುವ ಜವಾಹರ್‌ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ಪ್ರತಿಭಟನಾ ಮೆರವಣಿಗೆ ಇದ್ದಿದ್ದರಿಂದ ಪೊಲೀಸರು ಹರಸಾಹಸ ಪಡಬೇಕಾಯಿತು. ಅಲ್ಲಲ್ಲಿ ಘೋಷಣೆಗಳ ಭರಾಟೆ ಜೋರಾಗಿ ಪರಿಸ್ಥಿತಿ ಕೈಮೀರುತ್ತದೆ ಎನ್ನುವ ಹಂತ ತಲುಪಿದಾಗ ಪೊಲೀಸರು ಮಧ್ಯಪ್ರವೇಶಿಸಿ ಮೆರವಣಿಗೆಯನ್ನು ಮುಂದೆ ಸಾಗಿಸಿದರು.

ಮಸೀದಿ ಬಳಿ ಖುದ್ದು ಐಜಿ ವರ್ತಿಕಾ ಕಟರಿಯಾ ಹಾಗೂ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಮೊಕ್ಕಾಂ ಹೂಡಿ ಬಿಗಿಭದ್ರತೆಯ ಉಸ್ತುವಾರಿ ವಹಿಸಿದ್ದರು.

ಈ ವೇಳೆ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್, ಮುಖಂಡರಾದ ರಾಜು ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಿಂಗೇಶ ಕಲ್ಗುಡಿ, ಮಂಗಳೇಶ ಮಂಗಳೂರು, ಜ್ಯೋತಿ ಗೊಂಡಬಾಳ, ಯಮನೂರಪ್ಪ ನಾಯಕ, ಮುತ್ತು ಕುಷ್ಟಗಿ, ಮಲ್ಲು ಪೂಜಾರ, ವೀರಭದ್ರಪ್ಪ ನಾಯಕ, ಸುರೇಶ ಡೊಣ್ಣಿ, ನಾಗರಾಜ ಬಿಲ್ಗಾರ, ರಾಮಣ್ಣ ಚೌಡ್ಕಿ ಇದ್ದರು.ಪ್ರತಿಭಟನೆಯಲ್ಲಿ ಶಾಸಕ ಹಿಟ್ನಾಳ...

ಪ್ರತಿಭಟನೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಹ ಭಾಗವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ ಕೇಸರಿ ಶಾಲು ಹಾಕಿ ಪ್ರತಿಭಟನಾ ಮೆರವಣಿಗೆಯ ವಾಹನದಲ್ಲಿ ನಿಂತಿದ್ದರು. ಗವಿಸಿದ್ದಪ್ಪ ಕುಟುಂಬಕ್ಕಾಗಿ ಹೋರಾಟ ಮಾಡೋಣ ಎಂದರು. ಆದರೆ, ಇಡೀ ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧವೇ ನಡೆದಿದ್ದರಿಂದ ಹಿಟ್ನಾಳ ಭಾಗವಹಿಸುವಿಕೆ ಅಚ್ಚರಿಗೊಳಿಸಿತು. ಆದರೆ, ಮಾರ್ಗಮಧ್ಯದಲ್ಲಿಯೇ ಅವರು ನಿರ್ಗಮಿಸಿದರು. ಬಳಿಕ ಬಿಜೆಪಿ-ಜೆಡಿಎಸ್ ಮುಖಂಡರು ರಾಜ್ಯ ಸರ್ಕಾರ, ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಜೈಶ್ರೀರಾಮ ಘೋಷಣೆ

ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. ಹಿಂದೂ ಧರ್ಮದ ಜೈಕಾರವು ಕೇಳಿಬಂದವು. ಮೆರವಣಿಗೆಯುದ್ದಕ್ಕೂ ಕೇಸರಿ ಶಾಲುಗಳೇ ಕಂಡು ಬಂದವು.

ಆಗ್ರಹ:

ಪ್ರತಿಭಟನೆಯುದ್ದಕ್ಕೂ ಎನ್‌ಐಎಗೆ ವಹಿಸಬೇಕು ಹಾಗೂ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು. ಕೊಲೆಯಾದ ಗವಿಸಿದ್ದಪ್ಪ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಮತ್ತು ಅವರ ಮನೆಯವರಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಯಿತು.ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ಇದರಿಂದಲೇ ಇಂತಹ ಘಟನೆಗಳು ನಡೆಯುತ್ತವೆ. ಘಟನೆಯಲ್ಲಿ ಪಿಎಫ್‌ಐ ಸಂಘಟನೆ ಕೈವಾಡವಿರುವ ಶಂಕೆಯಿದೆ.

ಬಂಗಾರು ಹನುಮಂತಪ್ಪ, ಸಂಡೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಹಾಗೂ ಪಿಎಫ್‌ಐ ಸಂಘಟನೆಯ ಕೈವಾಡವಿರುವ ಸಾಧ್ಯತೆ ಇರುವುದರಿಂದ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿ ತನಿಖೆ ನಡೆಸಬೇಕು.

ಶರಣು ತಳ್ಳಿಕೇರಿ, ರಾಜ್ಯ ಕಾರ್ಯದರ್ಶಿ ಬಿಜೆಪಿಕೊಪ್ಪಳ ಶಾಂತವಾಗಿತ್ತು. ಆದರೆ, ಈ ಕೊಲೆಯಿಂದ ಕಿಲ್ಲರ್ ಕೊಪ್ಪಳವಾದಂತೆ ಆಗಿದೆ. ಆದ್ದರಿಂದ ಪ್ರಕರಣದಲ್ಲಿ ಕೊಲೆಯಾದ ಗವಿಸಿದ್ದಪ್ಪ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಶಾಂತಿ ನೆಲೆಸುವಂತಾಗಬೇಕು.

ಸಿ.ವಿ. ಚಂದ್ರಶೇಖರ, ಜೆಡಿಎಸ್‌ ರಾಜ್ಯ ಕೋರ್ ಕಮಿಟಿ ಸದಸ್ಯ ಎಸ್ಸಿ, ಎಸ್ಟಿ ಜನಾಂಗ ಸುಡುವ ಬೆಂಕಿ ಇದ್ದಂತೆ. ಅವರ ತಂಟೆಗೆ ಬಂದರೆ ಸುಮ್ಮನೇ ಬಿಡಲು ಆಗುವುದಿಲ್ಲ. ಪ್ರೀತಿ ಮಾಡಿದ್ದಕ್ಕೆ ಕೊಲೆ ಮಾಡಿದರೆ ಹೇಗೆ? ಹಿಂದೆ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿಯೂ ನ್ಯಾಯ ಸಿಗುವವರೆಗೂ ಹೋರಾಡಿದ್ದೇವೆ. ಈಗಲೂ ಬಿಡುವುದಿಲ್ಲ.

ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷರಾಜ್ಯ ಸರ್ಕಾರದ ವೈಫಲ್ಯದಿಂದ ರಾಜ್ಯಾದ್ಯಂತ ಹಿಂದೂಗಳ ಹತ್ಯೆಯಾಗುತ್ತಿದೆ. ಹುಬ್ಬಳ್ಳಿಯ ನೇಹಾ ಪ್ರಕರಣ, ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆ ಪ್ರಕರಣವೇ ಸಾಕ್ಷಿಯಾಗಿದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತೆ ಆಗಿದೆ.

ಡಾ. ಬಸವರಾಜ ಕ್ಯಾವಟರ್‌, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರು ಮುಸ್ಲಿಂ ಹುಡುಗಿ ಪ್ರೀತಿಸಿದ ಎನ್ನುವ ಕಾರಣಕ್ಕಾಗಿಯೇ ಗವಿಸಿದ್ದಪ್ಪ ಕೊಲೆಯಾಗಿದೆ ಎನ್ನುವುದಾದರೆ ಇನ್ಮುಂದೆ ಹಿಂದೂ ಹುಡುಗಿಯನ್ನು ಯಾರಾದರೂ ಮುಸ್ಲಿಂ ಹುಡುಗು ಕರೆದುಕೊಂಡು ಹೋದರೆ ಅಟ್ಟಾಡಿಸಿ ಹೊಡೆಯೋಣ. ಇದುವೆ ಗವಿಸಿದ್ದಪ್ಪ ಕೊಲೆ ಪ್ರತ್ಯುತ್ತರ.

ಶ್ರೀಕಾಂತ ಹೊಸಕೇರೆ, ವಿಎಚ್‌ಪಿ ಮುಖಂಡ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದರೆ ಹಿಂದೂ ಹುಡುಗನ ಹತ್ಯೆ ಮಾಡುತ್ತಾರೆ ಎಂದರೆ ಹೇಗೆ? ಸಮಗ್ರ ತನಿಖೆ ಮಾಡಬೇಕು.

ರಾಜೂಗೌಡ ಮಾಜಿ ಶಾಸಕಪ್ರಕರಣದಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಇದನ್ನು ಇಷ್ಟಕ್ಕೆ ಬಿಡುವ ಪ್ರಶ್ನೆಯೇ ಇಲ್ಲ.

ಶಿವನಗೌಡ ನಾಯಕ ಮಾಜಿ ಸಚಿವರುನೀವು ಕೊಡುವ ಪರಿಹಾರ ನನಗೆ ಬೇಕಾಗಿಲ್ಲ. ಆ ಹಣ ಸುರಿದು ನನ್ನನ್ನು ಬೇಕಾದರೂ ಸುಟ್ಟುಬಿಡಿ, ನನಗೆ ಇದರಿಂದ ಪ್ರಯೋಜನ ಇಲ್ಲ. ನನ್ನ ಮಗನೇ ಇಲ್ಲದಿರುವಾಗ ಇದನ್ನು ತೆಗೆದುಕೊಂಡು ಏನು ಮಾಡಲಿ? ನನ್ನ ಮಗನಿಗೆ ನ್ಯಾಯ ಸಿಗಬೇಕು ಮತ್ತು ಇಂಥ ಘಟನೆ ಇನ್ನೆಂದೂ ಆಗಬಾರದು. ನನ್ನ ಮಗನ ಪ್ರೀತಿಸಿದವಳನ್ನು ಬಂಧಿಸಿ.

ದೇವಪ್ಪ ಕೊಲೆಯಾದ ಗವಿಸಿದ್ದಪ್ಪನ ತಾಯಿ