ಕನ್ನಡಪ್ರಭ ವಾರ್ತೆ ಇಳಕಲ್ಲಹಿಂದು-ಮುಸ್ಲಿಂ ಬಾಂಧವರು ಪರಸ್ಪರ ಶಲ್ಯ ಬದಲಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಈದ್ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಹಿಂದು-ಮುಸ್ಲಿಂ ಬಾಂಧವರು ಪರಸ್ಪರ ಶಲ್ಯ ಬದಲಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಈದ್ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.ಎಲ್ಲೆಡೆ ಹಿಂದು-ಮುಸ್ಲಿಂ ಬಾಂಧವರ ಗಲಾಟೆಗಳ ಮಧ್ಯೆ ಇಳಕಲ್ಲ ನಗರದಲ್ಲಿ ಆಚರಿಸಿದ ಈದ್ ಆಚರಣೆ ವಿಶಿಷ್ಠವಾಗಿದೆ. ಇದಕ್ಕೆ ಶರಣರಾದ ಲಿಂಗೈಕ್ಯ ವಿಜಯಮಹಾಂತ ಶಿವಯೋಗಿಗಳು ಹಾಗೂ ಸೈಯದ್ ಮುರ್ತುಜಾ ಖಾದರಿ ಅವರು ಪ್ರಮುಖ ಕಾರಣರಾಗಿದ್ದಾರೆ.
ಉಸ್ಮಾನಗಣಿ ಹುಮನಾಬಾದ, ಅಬ್ದುಲ್‌ರಜಾಕ ತಟಗಾರ ಅವರ ನೇತೃತ್ವದಲ್ಲಿ ಈದಗಾದಿಂದ ಆರಂಭಗೊಂಡ ಮೇರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಮುಖಂಡರಾದ ಮಹಾಂತೇಶ ಅಂಗಡಿ, ಅಶೋಕ ಚಲವಾದಿ, ಸತೀಶ ಸಪ್ಪರದ, ಸವಿತಾ ಚಲವಾದಿ ಹಾಗೂ ಇತರರು ಮೇರವಣಿಗೆಯನ್ನು ಸ್ವಾಗತಿಸಿದರು. ಮೇರವಣಿಗೆ ಉದ್ದಕ್ಕೂ ಎಲ್ಲರಿಗೂ ತಂಪು ಪಾನಿಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.ಬಳಿಕ ಮುರ್ತುಜಾ ದರ್ಗಾದತ್ತ ಮೇರವಣಿಗೆ ಸಾಗಿತು. ನೂರಾರು ಸಾರ್ವಜನಿಕರು ಹಿಂದು-ಮುಸ್ಲಿಂ ಸಹೋದರತೆಗೆ ಸಾಕ್ಷಿಯಾದರು.