ಸಾರಾಂಶ
ಗುಬ್ಬಿ ಪ್ರಸ್ತುತ ಸಂಘದಲ್ಲಿ ಸುಮಾರು 11 ಲಕ್ಷದಷ್ಟು ಆದಾಯ ಹೊಂದಿದ್ದು ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ತಿಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರಸ್ತುತ ಸಂಘದಲ್ಲಿ ಸುಮಾರು 11 ಲಕ್ಷದಷ್ಟು ಆದಾಯ ಹೊಂದಿದ್ದು ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ತಿಳಿದರು.ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷ ಆಂಜನಪ್ಪ ಮಾತನಾಡಿ ರೈತರಿಗೆ ಅನುಕೂಲವಾಗುವಂತಹ ಗೊಬ್ಬರ, ಪಡಿತರ ವನ್ನು ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳುವ ಜೊತೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜನತಾ ಬಜಾರನ್ನು ಹೈಟೆಕ್ ಜನತಾ ಬಜಾರ್ ಮಾಡುವಂತಹ ಆಲೋಚನೆ ಇದೆ ಆಧುನಿಕತೆಗೆ ತಕ್ಕಂತೆ ಎಲ್ಲಾ ರೀತಿಯ ವಸ್ತುಗಳು ಒಂದೇ ಭಾಗದಲ್ಲಿ ಸಿಗುವಂತಹ ಹಾಗೂ ಸಗಟು ದರದಲ್ಲಿ ವಸ್ತುಗಳು ಸಾರ್ವಜನಿಕರಿಗೆ ಸಿಗುವಂತಹ ಕೆಲಸ ಕಾರ್ಯವನ್ನು ಮಾಡಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಾಕರ್, ರೈತ ಸದಸ್ಯ ನಂಜೇಗೌಡ, ಕಾರ್ಯದರ್ಶಿ ಎಸ್ ವಿ ಶ್ರೀ ನಾಥ್ , ಪಿ.ಎಸ್ .ಕಿಡಿಗಣ್ಣಪ್ಪ, ಎನ್. ಜಿ .ನಟರಾಜು ಬಿ.ಎಸ್. ರಮೇಶ್, ಬಿ. ಎಂ . ನಿರಂಜನಮೂರ್ತಿ, ವೈ. ಜಿ. ತ್ರಿನೇಶ್ , ಎಸ್ .ವಸಂತ ಮಾಲಮ್ಮ, ಬಿ.ಎಸ್ .ರೇಣುಕಾಪ್ರಸಾದ್ ಎ .ಏನ್. ಜಗದೀಶಯ್ಯ, ಬಿ .ಎಂ .ಪಂಚಾಕ್ಷರಿ, ಎನ್ .ಸಿ .ಗಿರೀಶ್ ಕುಮಾರ್ ಹಾಗೂ ಸಂಘದ ಸಿಬ್ಬಂದಿಗಳು, ಸರ್ವ ಸದಸ್ಯರು ಭಾಗಿಯಾಗಿದ್ದರು.