ಅಥಣಿ: ಅಥಣಿ- ಜಮಖಂಡಿಯ ರಾಜ್ಯ ಹೆದ್ದಾರಿಯಲ್ಲಿರುವ ಹಿಪ್ಪರಗಿ ಅಣೆಕಟ್ಟು ಗೇಟ್‌ನಲ್ಲಿ ಮತ್ತೆ ತಾಂತ್ರಿಕ ದೋಷ ಕಂಡು ಬಂದಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅಥಣಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.

ಅಥಣಿ: ಅಥಣಿ- ಜಮಖಂಡಿಯ ರಾಜ್ಯ ಹೆದ್ದಾರಿಯಲ್ಲಿರುವ ಹಿಪ್ಪರಗಿ ಅಣೆಕಟ್ಟು ಗೇಟ್‌ನಲ್ಲಿ ಮತ್ತೆ ತಾಂತ್ರಿಕ ದೋಷ ಕಂಡು ಬಂದಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅಥಣಿ - ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.ನೀರಾವರಿ ಇಲಾಖೆಯ ಮತ್ತು ತಾಲೂಕ ಆಡಳಿತ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಗೇಟ್ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಹೀಗಾಗಿ, ಸೇತುವೆ ಮೇಲೆ ಸಂಚಾರ ಬಂದ್‌ ಆಗಿರುವುದರಿಂದ ಸಾವಿರಾರು ವಾಹನ ಸವಾರರು ಪರದಾಡುವಂತಾಯಿತು.ಅಥಣಿಯಿಂದ ಜಮಖಂಡಿಗೆ ಹೋಗುವವರು ಮತ್ತು ಜಮಖಂಡಿಯಿಂದ ಅಥಣಿಗೆ ಬರುವವರು ಪರದಾಡುವಂತಾಗಿದ್ದು, ಹಾರೂಗೇರಿ ಕ್ರಾಸ್, ತೇರದಾಳ ರಬಕವಿ- ಬನಹಟ್ಟಿ ಮಾರ್ಗವಾಗಿ ಸಂಚರಿಸುವಂತಾಗಿದೆ.ಕಳೆದ ಕೆಲವು ದಿನಗಳಿಂದ ಹಿಪ್ಪರಗಿ ಡ್ಯಾಂ ಗೇಟ್ ರಿಪೇರಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. 22ನೇ ಗೇಟ್ ಸರಿಯಾಗಿ ರಿಪೇರಿ ಆಗದೆ ಇರುವುದರಿಂದ ಡ್ಯಾಂ ಕೆಳಭಾಗಕ್ಕೆ ನೀರು ಹರಿದು ಹೋಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಕೃಷ್ಣ ನದಿಯಲ್ಲಿನ ನೀರು ಕಡಿಮೆಯಾಗಿ ತಾಲೂಕಿನ ರೈತರು ಆತಂಕ ಪಡುತ್ತಿದ್ದಾರೆ.