ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪ್ರಸಕ್ತ 2024-25ನೇ ಸಾಲಿನಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ 12 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಶಾಸಕರೂ ಆದ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ ಹೇಳಿದರು.ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 64ನೇ ಕಬ್ಬು ಅರೆಯುವ ಹಂಗಾಮಿನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಬಾಯಲರ್ ಪ್ರದೀಪನ ಸಮಾರಂಭದಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಬ್ಬು ಬೆಳೆಯಲ್ಲಿ ಇಳುವರಿಯೂ ಕೂಡ ಹೆಚ್ಚಾಗುವ ವಿಶ್ವಾಸವಿದ್ದು, 12 ಲಕ್ಷ ಮೆ. ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದರು.ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುನ್ನೂರ ವಿಠ್ಠರಾಯದೇವರ ಪೂಜಾರಿ ಬಾಗಪ್ಪ ಬಿಜ್ಜುಪೂಜೇರಿ ದಂಪತಿ ಪೂಜೆ ಸಲ್ಲಿಸಿದರು. ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಮುಖಂಡರಾದ ಸತ್ಯಪ್ಪ ನಾಯಿಕ, ರಾಚಯ್ಯ ಹಿರೇಮಠ, ಗುರು ಕುಲಕರ್ಣಿ, ಬಿ.ಬಿ. ಪಾಟೀಲ, ಬಸಗೌಡ ಮಗೆನ್ನವರ, ಕೆಂಪಣ್ಣ ದೇಸಾಯಿ, ಮುಕುಂದ ಮಠದ, ಅಪ್ಪಾಸಾಹೇಬ ಸಾರಾಪುರೆ, ಶ್ರೀಕಾಂತ ಹತನೂರೆ, ಅಮರ ನಲವಡೆ, ಸುನೀಲ ಪರ್ವತರಾವ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ ಸನದಿ, ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಪ್ರಶಾಂತ ಪಾಟೀಲ, ಶೀತಲ ಬ್ಯಾಳಿ, ಮಲ್ಲಪ್ಪ ಘಸ್ತಿ, ನಾಗೇಶ ಸಂಕನ್ನವರ, ಬಸವಂತ ರೆಡ್ಡಿ ಇತರರು ಇದ್ದರು.ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ ನಿರೂಪಿಸಿದರು. ನಿರ್ದೇಶಕ ಬಾಬಾಸಾಹೇಬ ಅರಬೋಳೆ ವಂದಿಸಿದರು.
ಈ ಭಾಗದ ರೈತರ ಜೀವನಾಡಿ ಎಂದು ಗುರುತಿಸಿಕೊಂಡಿರುವ ಹಿರಣ್ಯಕೇಶಿ ಕಾರ್ಖಾನೆಗೆ ತಾಲೂಕು ಸೇರಿದಂತೆ ಅಕ್ಕಪಕ್ಕದ ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬನ್ನು ಪೂರೈಸಬೇಕು. ಕಾರ್ಖಾನೆ ನೌಕರರು, ಸಿಬ್ಬಂದಿ ಮತ್ತು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಆಡಳಿತ ಮಂಡಳಿ ಸದಾ ಸಿದ್ಧವಿದೆ. ಪ್ರಸಕ್ತ ಹಂಗಾಮಿನಲ್ಲಿ ಹೆಚ್ಚಿನ ಕಬ್ಬು ಅರೆಯುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆಯನ್ನಾಗಿ ರೂಪಿಸಲು ರೈತರು ಸಹಕಾರ ನೀಡಬೇಕು.-ನಿಖಿಲ್ ಕತ್ತಿ ಹಿರಣ್ಯಕೇಶಿ ಕಾರ್ಖಾನೆ ಅಧ್ಯಕ್ಷರು.