ಸಾರಾಂಶ
ಬಾಳೆಹೊನ್ನೂರು ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹15.78 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ನಾರಾಯಣಗೌಡ ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ವ ಸದಸ್ಯರ ಮಹಾಸಭೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹15.78 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ನಾರಾಯಣಗೌಡ ತಿಳಿಸಿದರು.
ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ೪೯ ವರ್ಷ ಪೂರೈಸಿರುವ ಸಂಘ ಸದಸ್ಯರ, ಷೇರುದಾರರ ಸತತ ಪರಿಶ್ರಮದಿಂದ ಲಾಭದಲ್ಲಿ ಮುನ್ನಡೆಯುತ್ತಿದೆ. ರೈತರಿಗೆ ಅಗತ್ಯವುಳ್ಳ ಎಲ್ಲಾ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದು, ಬೆಳೆ ಸಾಲ, ದಾಸ್ತಾನು ಸಾಲ, ಗೊಬ್ಬರ ಸಾಲ ಕಾಲ ಕಾಲಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.ವಾಹನ, ಗೃಹ ನಿರ್ಮಾಣ ಮುಂತಾದ ಸಾಲಗಳನ್ನು ಸಹ ನೀಡಲಾಗುತ್ತಿದ್ದು, ಷೇರುದಾರರು, ಗ್ರಾಹಕರು ಇದರ ಸದುಪ ಯೋಗಪಡಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಗೆ ಷೇರುದಾರರು, ಗ್ರಾಹಕರು ಕೈ ಜೋಡಿಸಿದರೆ ಮಾತ್ರ ಅಭಿವೃದ್ಧಿಪಥದಲ್ಲಿ ಮುನ್ನಡೆಯಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ರೈತರಿಗೆ ಇನ್ನೂ ಹಲವಾರು ಯೋಜನೆ ಕಾರ್ಯಗತ ಗೊಳಿಸುವ ಯೋಜನೆಯೂ ನಮ್ಮ ಮುಂದಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್ ಹೂವಿನಹಕ್ಲು ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಎಸ್.ಸುಧಾಕರ್, ನಿರ್ದೇಶಕರಾದ ಎಚ್.ಎನ್.ಶ್ವೇತ, ಕೆ.ಸಿ.ರವೀಂದ್ರ, ಟಿ.ಎಚ್.ವಿಜಯಕುಮಾರ್, ಬಿ.ಡಿ.ವಿಕ್ರಮ್, ಕೆ.ಎಂ.ಪ್ರಭಾಕರ್, ಎಚ್.ಕೆ.ಪ್ರಶಾಂತ್, ಎಂ.ಆರ್.ರಾಜುಪೂಜಾರಿ, ಕೆ.ಸಿ.ಗೀತಾ, ಗುರುವಪ್ಪ, ಕೆ.ಜಿ. ಪದ್ಮ ನಾಭ, ಸಿಇಓ ಜಿ.ಆರ್.ಸಂತೋಷ್‌ಕುಮಾರ್, ಸಿಬ್ಬಂದಿ ನಂದನ್, ಕೆ.ಎಸ್.ಆದರ್ಶ್, ಸದಾನಂದ, ಕೆ.ಆರ್.ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.೦೪ಬಿಹೆಚ್‌ಆರ್ ೨:ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಗತಿಪರ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್ ಅವರನ್ನು ಸನ್ಮಾನಿಸಲಾಯಿತು.