ಹಿರೇಕೆರೂರು ರೈತರು ಗೊಬ್ಬರಕ್ಕಾಗಿ ಎಂದೂ ಪರದಾಡಬಾರದು--ಎಸ್‌.ಎಸ್‌. ಪಾಟೀಲ

| Published : May 19 2024, 01:48 AM IST

ಹಿರೇಕೆರೂರು ರೈತರು ಗೊಬ್ಬರಕ್ಕಾಗಿ ಎಂದೂ ಪರದಾಡಬಾರದು--ಎಸ್‌.ಎಸ್‌. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರು ತಾಲೂಕಿನ ರೈತರು ಗೊಬ್ಬರಕ್ಕಾಗಿ ಎಂದೂ ಪರದಾಡಬಾರದು. ಅವರಿಗೆ ಅವಶ್ಯಕತೆ ಬಿದ್ದಾಗ ಗೊಬ್ಬರ ಸಿಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ ರೈತ ಸ್ನೇಹಿ ಸಂಘವನ್ನಾಗಿಸುವದು ನನ್ನ ಗುರಿಯಾಗಿದೆ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಪಾಟೀಲ ಹೇಳಿದರು.

ಹಿರೇಕೆರೂರು: ತಾಲೂಕಿನ ರೈತರು ಗೊಬ್ಬರಕ್ಕಾಗಿ ಎಂದೂ ಪರದಾಡಬಾರದು. ಅವರಿಗೆ ಅವಶ್ಯಕತೆ ಬಿದ್ದಾಗ ಗೊಬ್ಬರ ಸಿಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ ರೈತ ಸ್ನೇಹಿ ಸಂಘವನ್ನಾಗಿಸುವದು ನನ್ನ ಗುರಿಯಾಗಿದೆ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದರು.

ಹಿರೇಕೆರೂರು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರಿ ಸಂಘ ೬೦ ವರ್ಷಗಳಿಂದ ರೈತ ಪರವಾಗಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಇದು ಹೆಮ್ಮೆಯ ವಿಷಯ. ತಾಲೂಕಿನ ರೈತರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ ಸಂಘ ಹಗಲಿರುಳು ಶ್ರಮಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತರಿಗೆ ಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ೫೦೦೦ ಟನ್ ಗೊಬ್ಬರ ದಾಸ್ತಾನು ಇದೆ. ಇನ್ನೆರಡು ದಿನದಲ್ಲಿ ಡಿಎಪಿ ಮತ್ತು ಯುರಿಯಾ ಗೊಬ್ಬರ ಬರಲಿದ್ದು, ರಾಜ್ಯದಲ್ಲಿ ಗೊಬ್ಬರದ ಕೊರತೆ ಕಂಡು ಬಂದಾಗಲೂ ನಮ್ಮ ತಾಲೂಕಿನಲ್ಲಿ ಕೊರತೆಯಾಗಿಲ್ಲ. ಇದು ನಮ್ಮ ಹೆಮ್ಮೆಯ ವಿಷಯ. ರೈತರಿಗೆ ಕಾಲಕಾಲಕ್ಕೆ ರಿಯಾಯತಿ ದರದಲ್ಲಿ ಗೊಬ್ಬರ ಸರಬರಾಜು ಮಾಡುವ ಮೂಲಕ ತಾಲೂಕಿನ ರೈತರ ಮೊಗದಲ್ಲಿ ಸಂತಸ ತಂದಿದೆ. ಸಂಘದ ವ್ಯಾಪ್ತಿಯನ್ನು ಇನ್ನೂ ಹೆಚ್ಚು ಮಾಡಬೇಕು. ತಾಲೂಕಿನ ರೈತರು ಗೊಬ್ಬರಕ್ಕಾಗಿ ಎಂದೂ ಪರದಾಡಬಾರದು. ಅವರಿಗೆ ಅವಶ್ಯಕತೆ ಬಿದ್ದಾಗ ಗೊಬ್ಬರ ಸಿಗಬೇಕು. ಆ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವ ಮೂಲಕ ರೈತ ಸ್ನೇಹಿ ಸಂಘವನ್ನಾಗಿಸುವದು ನನ್ನ ಗುರಿಯಾಗಿದೆ ಎಂದರು.

ಹಿರೇಕೆರೂರ ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್.ಎಸ್. ಪಾಟೀಲ ಅವರ ೮೩ನೇ ಹುಟ್ಟು ಹಬ್ಬದ ನಿಮಿತ್ತ ಸಂಘದ ನಿರ್ದೇಶಕರು ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಶುಭಾಶಯ ಕೋರಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಬಿ. ತಿಪ್ಪಣ್ಣನವರ, ಮಹೇಶ ಗುಬ್ಬಿ, ಯು.ಎಸ್. ಕಳಗೊಂಡ, ಏಕೇಶಣ್ಣ ಬಣಕಾರ, ಎಂ.ಬಿ. ಹೊಂಬರಡಿ, ಬಿ.ಜಿ. ಬಣಕಾರ, ಡಾ ಎಸ್.ಬಿ. ಚನ್ನಗೌಡ್ರ, ರಂಜಿತ್ ಕುಮಾರ, ಎಸ್. ವೀರಭದ್ರಯ್ಯ, ಮಂಜುಳಾ ಬಾಳಿಕಾಯಿ, ಶೇಖಪ್ಪ ಹೊಂಡದ, ಎಕೇಶಣ್ಣ ಬಣಕಾರ, ಬಸನಗೌಡ ಬಂಗೇರ, ಹೂವಪ್ಪ ಕವಲಿ, ರಾಮನಗೌಡ ಪಾಟೀಲ, ಸಿದ್ದನಗೌಡ್ರ ನರೇಗೌಡ್ರ, ಮಂಜು ತಂಬಾಕದ, ದುರಗಪ್ಪ ನೀರಲಗಿ, ಆನಂದಪ್ಪ ಹಾದಿಮನಿ, ಶೋಭಾ ಅಂಗಡಿ, ಜಯಮ್ಮ ಸಣ್ಣೇರ, ಭೀಮಪ್ಪ ಯತ್ತಿನಹಳ್ಳಿ, ಲಿಂಗಪ್ಪ ಲೆಕ್ಕಪ್ಪಳವರ, ಹನುಂತಗೌಡ ಶಂಕರನಹಳ್ಳಿ ಹಾಗೂ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.