ದೇಶದ ಆರ್ಥಿಕ ಅಭಿವೃದ್ಧಿಗೆ ಚಾರಿತ್ರಿಕ ದಾಖಲೆಗಳು ಅಗತ್ಯ: ಪತ್ರಾಗಾರದ ಅಧಿಕಾರಿ ಎಚ್.ಎಲ್.ಮಂಜುನಾಥ್

| Published : Dec 10 2024, 12:32 AM IST

ದೇಶದ ಆರ್ಥಿಕ ಅಭಿವೃದ್ಧಿಗೆ ಚಾರಿತ್ರಿಕ ದಾಖಲೆಗಳು ಅಗತ್ಯ: ಪತ್ರಾಗಾರದ ಅಧಿಕಾರಿ ಎಚ್.ಎಲ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಐತಿಹಾಸಿಕ ದಾಖಲೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪತ್ರಾಗಾರದ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಹೇಳಿದರು. ಯಳಂದೂರಿನಲ್ಲಿ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಾರಿತ್ರಿಕ ದಾಖಲೆಗಳ ಮಹತ್ವ, ಉಪಯೋಗ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಳಂದೂರು

ದೇಶದ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಐತಿಹಾಸಿಕ ದಾಖಲೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪತ್ರಾಗಾರದ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗಿಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

1866ರಿಂದ 2019ರ ವರೆಗಿನ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಸಂರಕ್ಷಿಸಿದ್ದಾರೆ, ರಾಜ್ಯ ಏಕೀಕರಣ, ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹೋರಾಟಗಾರರ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ವರದಿಗಳು ಮತ್ತು ಆಡಿಯೊ ಟೇಪ್‌ಗಳ ರೂಪದಲ್ಲಿ ಒಳಗೊಂಡಿವೆ ಎಂದರು.

ಪತ್ರಾಗಾರ ಇಲಾಖೆಯು ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಧಾರವಾಡದಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿದೆ. 1984ರಲ್ಲಿ ಸ್ಥಾಪಿತವಾದ ಮೈಸೂರು ಕಚೇರಿಯು ಹಿಂದಿನ ಮೈಸೂರು ರಾಜಮನೆತನಕ್ಕೆ ಸಂಬಂಧಿಸಿದ 15,000ಕ್ಕೂ ಹೆಚ್ಚು ಫೈಲ್‌ಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವು 160 ವರ್ಷಗಳಿಗಿಂತ ಹಳೆಯವು ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಸಹ ಪ್ರಾಧ್ಯಾಪಕ ಪುರುಷೋತ್ತಮ್ ವೈಜ್ಞಾನಿಕ ಅಧ್ಯಯನಗಳು ಮತ್ತು ಇತಿಹಾಸದ ಅನ್ವೇಷಣೆಗಾಗಿ ಐತಿಹಾಸಿಕ ದಾಖಲೆಗಳ ಪ್ರಾಮುಖ್ಯತೆಯನ್ನು, ಅವುಗಳ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದರು. ಈ ನಿರ್ದಿಷ್ಟ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಪತ್ರಾಗಾರ ಇಲಾಖೆಯನ್ನು 1973ರಲ್ಲಿ ಸ್ಥಾಪಿಸಲಾಯಿತು. ಐತಿಹಾಸಿಕ ದಾಖಲೆಗಳು ಮತ್ತು ಅದರ ಪ್ರಸ್ತುತತೆಯನ್ನು ತಿಳಿಸಿದರು.

ಶ್ರೀವಿಜಯ ಮಾತನಾಡಿ, ಇತಿಹಾಸ ದಾಖಲೆಗಳನ್ನು ಅಧ್ಯಯನ ಮಾಡುವ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರಿ ಸಾಧನೆ ಮಾಡಲು ಕರೆ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಮಹಾಂತೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕರಾದ ಮುರಳಿ, ವಿಶ್ವನಾಥ್, ಶ್ವೇತಾ, ಗಿರಿಜಾ ಲಿಖಿತಾ ಎಸ್ ಅನುರಾಧ, ಪದ್ಮ ಮುಂತಾದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 9ಸಿಎಚ್‌ಎನ್51

ಯಳಂದೂರಲ್ಲಿ ಹಮ್ಮಿಕೊಂಡಿದ್ದ ಚಾರಿತ್ರಿಕ ದಾಖಲೆಗಳ ಮಹತ್ವ, ಉಪಯೋಗ ಎಂಬ ಕಾರ್ಯಕ್ರಮವನ್ನು ಪತ್ರಗಾರದ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ್ ಉದ್ಘಾಟಿಸಿದರು.