ಸಾರಾಂಶ
ಬ್ಯಾಡಗಿ: ಮಹಿಳೆ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಅವಕಾಶ ಸಿಕ್ಕಲ್ಲಿ ನಿಸ್ಸಂಶಯವಾಗಿ ಇತಿಹಾಸ ಸೃಷ್ಟಿಸಲಿದ್ದಾಳೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಗೀತಾ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಶಿವಾಜಿ ತಾಯಿ ಜೀಜಾಬಾಯಿ, ಇತ್ತೀಚಿನ ಸಾಲುಮರದ ತಿಮ್ಮಕ್ಕ, ಸುನಿತಾ ವಿಲಿಯಮ್ಸ್ ಇಂತಹ ನೂರಾರು ಅಪರೂಪದ ಮಹಿಳೆಯರು ನಾನಾ ಸಾಧನೆಗಳನ್ನು ಮಾಡಿದ್ದಾರೆ. ಇವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ರೂಪಾ ಫರ್ನಾಂಡೀಸ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸ್ವ- ಉದ್ಯೋಗ ತರಬೇತಿ ಕೇಂದ್ರದ ಸಂಯೋಜಕಿ ಮಂಜುಳಾ ಜಯಪ್ಪ ಮಾತನಾಡಿದರು.ವೇದಿಕೆಯಲ್ಲಿ ಫಾದರ್ ಫ್ರಾನ್ಸಿಸ್ ಡಿಸೋಜಾ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಮುಖ್ಯಸ್ಥರಾದ ಬಿ.ಕೆ. ಸುರೇಖಾ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಸುಪರಿಡೆಂಟ್ ಎಂ. ಅಂಬುಜ, ಕರಾಟೆ ತರಬೇತುದಾರಳಾದ ಮನಿಷಾ ಕಬ್ಬೂರು, ಮಂಗಳಾ ಪಾಪಕ್ಕ, ಸಿಸ್ಟರ್ ಅಮಿಲ್ಡಾ, ಸ್ನೇಹಸದನ ಸಂಸ್ಥೆಯ ಸಿಬ್ಬಂದಿಗಳಾದ ಸುವರ್ಣಾ, ಗಂಗಾ, ಅಂಜಲಿ, ಲಲಿತಾ, ಸವಿತಾ, ಶೈಲಾ, ಮಮತಾ, ದೀಪಾ, ರತ್ನಾ, ಈರಣ್ಣ, ಮಲ್ಲಿಕಾರ್ಜುನ ಹಾಗೂ ಮಹಿಳಾ ಸ್ವ- ಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಫಾತಿಮಾ ಬಡಿಗೇರ ಇವರು ಸ್ವಾಗತಿಸಿದರು. ಸರೋಜಾ ವಂದಿಸಿದರು. ರಹಿಮಾ ನಿರ್ವಹಿಸಿದರು.ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಮಹಿಳೆಯರು
ರಾಣಿಬೆನ್ನೂರು: ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮುಂತಾದವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಕುಮಾರಪಟ್ಟಣದ ಪಿಎಸ್‌ಐ ಸಂಗೀತಾ ದೊಡ್ಡಮನಿ ತಿಳಿಸಿದರು.ತಾಲೂಕಿನ ಚಳಗೇರಿಯ ಟೋಲ್‌ಗೇಟ್ ಬಳಿ ಇನ್‌ವೀಟ್ ಕಂಪನಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ದೇಶದಲ್ಲಿ ಮಹಿಳೆ ಪುರುಷರಿಗೆ ಸರಿಸಮನಾಗಿ ಎಲ್ಲ ರಂಗಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.ಟಿಬಿಆರ್ ಲೇಬರ್ ಕಂಟ್ರ್ಯಾಕ್ಟ್ ಕಂಪನಿಯ ಮ್ಯಾನೇಜರ್ ರಾಜಶೇಖರ ಮಾತನಾಡಿ, ನಮ್ಮ ಟೋಲ್ ಪ್ಲಾಜಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದೇವೆ ಎಂದರು.
ಇನ್‌ವಿಟ್ ಕಂಪನಿಯ ಎಚ್.ಆರ್. ಸುರೇಶಶಂಕರ ನಾರಾಯಣ, ಮ್ಯಾನೇಜರ್ ಕೇಶವರಡ್ಡಿ, ಜನರಲ್ ಮ್ಯಾನೇಜರ್ ಸುರೇಶ, ಎನ್‌ಎಚ್‌ಎಐ ಮುಖ್ಯಸ್ಥ ಮಂಗಳಾ ಜಿ., ನಾಗರತ್ನಾ ಆರ್.ಜಿ., ಗದಿಗೆಮ್ಮ ಗೋಣೆಪ್ಪನವರ, ರೇಣುಕಾ ಎಚ್.ವೈ. ಭಾಗ್ಯಾ ಎ.ಎನ್., ಜ್ಯೋತಿ ಎನ್.ಬಿ., ಅನುಪಮಾ, ಚಂದ್ರಿಕಾ, ಭಾಗ್ಯಶ್ರೀ, ನಾಗರತ್ನಾ ಬಿ.ಎನ್. ಮತ್ತಿತರರಿದ್ದರು.