ಹಿಟ್ ಅಂಡ್ ರನ್: ಹೊಸ ಸೆಕ್ಷನ್ ರದ್ದುಪಡಿಸಲು ಲಾರಿ ಚಾಲಕ-ಮಾಲೀಕರ ಮುಷ್ಕರ

| Published : Jan 18 2024, 02:06 AM IST

ಹಿಟ್ ಅಂಡ್ ರನ್: ಹೊಸ ಸೆಕ್ಷನ್ ರದ್ದುಪಡಿಸಲು ಲಾರಿ ಚಾಲಕ-ಮಾಲೀಕರ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಜಾರಿಗೆ ತರಲಾದ ಕಠಿಣ ಸೆಕ್ಷನ್ ಗಳಿಂದ ಲಾರಿ ಮಾಲೀಕರು ಮತ್ತು ಚಾಲಕರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಚಾಲಕರ ಕ್ಷೇಮಾಭಿವೃದ್ಧಿ ಸಂಘ ಅಭಿಪ್ರಾಯಪಟ್ಟಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆಹೊಸದಾಗಿ ಆದೇಶಿಸಿದ ಭಾರತೀಯ ನ್ಯಾಯ ಸಂಹಿತೆ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್‌ಗಳನ್ನು ರದ್ದುಪಡಿಸಿ, ಇಲ್ಲವೇ ತಿದ್ದುಪಡಿ ಮಾಡಿ, ಹೊಸದಾಗಿ ಕಾಯ್ದೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜ.17ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಲಾರಿ ಮುಷ್ಕರ ದಾವಣಗೆರೆ ಲಾರಿ ಮಾಲೀಕರ ಸಂಘ, ಲಾರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಮಿನಿ ಕ್ಯಾಂಟರ್ ಲಾರಿ ಮಾಲೀಕರ ಸಂಘ, ತುಂಗಭದ್ರಾ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಆರಂಭಿಸ ಲಾಗಿದೆ.ಐಸಿಪಿ ಹಿಟ್ ಅಂಡ್ ರನ್ ಕೇಸ್‌ನ ಹೊಸ ಸೆಕ್ಷನ್ ರದ್ದು ಪಡಿಸಲು ಜ.17ರವರೆಗೆ ಕಾಲಾವಕಾಶ ನೀಡಲಾಗಿತ್ತು. ಸೆಕ್ಷನ್ 106/1, 106/2 ಸೆಕ್ಷನ್ ಕಾಯ್ದೆ ವಾಪಾಸ್ಸು ಪಡೆಯದ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾಧಿವರೆಗೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಮಿತಿ 106/1 ಮತ್ತು 106/2ರ ಪ್ರಕಾರ ಅಪಘಾತದಲ್ಲಿ ಮೃತಪಟ್ಟರೆ ಚಾಲಕನಿಗೆ 5 ರಿಂದ 10 ವರ್ಷದವರೆಗೆ ಸೆರೆವಾಸ, 7 ಲಕ್ಷ ರು. ದಂಡ ಕಟ್ಟಬೇಕು. ಇಂತಹ ಕಾಯ್ದೆ ಕೈಬಿಡಲು ಒತ್ತಾಯಿಸಿ ಮುಷ್ಕರಕ್ಕೆ ದಿ ದಾವಣಗೆರೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜ ನಾಯ್ಕ, ಕಾರ್ಯದರ್ಶಿ ಸಿ.ಪವನ ಕುಮಾರ, ಪಾಧ್ಯಕ್ಷರಾದ ಸಿದ್ದೇಶಗೌಡ್ರು, ಲಾರಿ ಚಾಲಕರ ಸಂಘದ ಬಸವರಾಜ ಇತರರ ನೇತೃತ್ವದಲ್ಲಿ ಮಷ್ಕರ ಆರಂಭಿಸಲಾಗಿದೆ.ಹಳೆಯ ಐಪಿಸಿ ಸೆಕ್ಷನ್ 304ಎ ಪ್ರಕಾರ ಚಾಲಕರಿಗೆ ಇದೇ ರೀತಿ ಅಪಘಾತ ಸಂಭವಿಸಿದರೆ, ಮೃತಪಟ್ಟರೆ 2 ವರ್ಷದವರೆಗೆ ಮಾತ್ರ ಸೆರೆವಾಸವಿದೆ. ಈ ಕಾರಣಕ್ಕೆ ಹೊಸದಾಗಿ ಜಾರಿಗೆ ತರಲಾದ ಸೆಕ್ಷನ್ ಗಳನ್ನು ರದ್ದುಪಡಿಸಬೇಕು. ನಮ್ಮ ದೇಶದ ಶೇ.70 ಜೀವನ ನಡೆಯುತ್ತಿರುವುದು ಲಾರಿ ಚಾಲಕರು, ಮಾಲೀಕರಿಂದ. ಪ್ರಸ್ತುತ ಶೇ.27ರಷ್ಟು ಚಾಲಕರ ಕೊರತೆಯನ್ನು ದೇಶವು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ದಿಢೀರನೇ ಹೊಸ ಕಾನೂನು ಜಾರಿಗೊಳಿಸಿ ದರೆ, ಲಾರಿ ಮಾಲೀಕರು ಮತ್ತು ಚಾಲಕರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಒಂದು ವೇಳೆ ಹೊಸ ಕಾಯ್ದೆ ಹಿಂಪಡೆಯದಿದ್ದರೆ ಮತ್ತಷ್ಟು ತೀವ್ರ ಹೋರಾಟ ನಿಶ್ಚಿತ ಎಂದು ಅವರು ಎಚ್ಚರಿಸಿದ್ದಾರೆ.