ಸಾರಾಂಶ
ಸದೃಢ ಆರೋಗ್ಯ ಮತ್ತು ಮನಸ್ಸನ್ನು ಹೊಂದಲು ಕ್ರೀಡೆ, ಓದುಗಳಂತಹ ಉತ್ತಮ ಹವ್ಯಾಸಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ಒಳಗೊಂಡ ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಶ್ಯಾಮ್ ವರ್ಗೀಸ್ ಹೇಳಿದ್ದಾರೆ.
- ಹೊನ್ನಾಳಿ ಕುರಿ ಸಂತೆ ಮೈದಾನದಲ್ಲಿ ಬಯಲು ಜಂಗೀಕುಸ್ತಿ ಪಂದ್ಯಾವಳಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸದೃಢ ಆರೋಗ್ಯ ಮತ್ತು ಮನಸ್ಸನ್ನು ಹೊಂದಲು ಕ್ರೀಡೆ, ಓದುಗಳಂತಹ ಉತ್ತಮ ಹವ್ಯಾಸಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ಒಳಗೊಂಡ ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಶ್ಯಾಮ್ ವರ್ಗೀಸ್ ಹೇಳಿದರು.ಪಟ್ಟಣದಲ್ಲಿ ಬೀರಲಿಂಗೇಶ್ವ ಟ್ರಸ್ಟ್ ಕಮಿಟಿಯಿಂದ ಡಿ.11ರಿಂದ ಡಿ.13ರರೆಗೆ ಪಟ್ಟಣದ ಕುರಿ ಸಂತೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಬಯಲು ಖಾಟಾ ಜಂಗೀಕುಸ್ತಿ ಪಂದ್ಯಾವಳಿಯ ಮೂರನೇ ಹಾಗೂ ಕೊನೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಸ್ತಿಯು ರಾಜ ಮಹಾರಾಜರ ಕಾಲದಿಂದಲೂ ಅತ್ಯಂತ ರೋಚಕ ಹಾಗೂ ಶಕ್ತಿಶಾಲಿ ಗ್ರಾಮೀಣ ಕ್ರೀಡೆಯಾಗಿ ಗಮನ ಸೆಳೆದಿದೆ. ಇಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸಮರ್ಥವಾಗಿ ಇರುವವರು ಜಯಶಾಲಿಗಳಾಗುತ್ತಾರೆ. ಸೋಲು -ಗೆಲವು ಮುಖ್ಯವಲ್ಲ, ಕ್ರೀಡಾ ಮನೋಭಾವನೆಯಿಂದ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.ಸಿಪಿಐ ಸುನೀಲ್ ಕುಮಾರ್ ಮಾತನಾಡಿ, ಇಂದಿನ ಯುವಪೀಳಿಗೆ ಟಿ.ವಿ. ಮೊಬೈಲ್‌ಗಳಲ್ಲಿಯೇ ಮುಳುಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಶ್ರೀ ಬೀರಲಿಂಗೇಶ್ವ ಟ್ರಸ್ಟ್ ಕಮಿಟಿ ಬೀರಲಿಂಗೇಶ್ವರ ಕಾರ್ತಿಕೋತ್ಸವ ಗುಗ್ಗಳ ಮಹೋತ್ಸವ ನಡೆಸುತ್ತಿರುವುದು ಮಾದರಿ ಸೇವೆಯಾಗಿದೆ ಎಂದರು.
ಮುಖಂಡ ಎಚ್.ಬಿ.ಮಂಜಪ್ಪ, ಯುವ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ ಗೌಡ, ಅರಕೆರೆ ಮಧುಗೌಡ, ಎಚ್.ಎ. ಉಮಾಪತಿ, ಬಿಜೆಪಿ ಮುಖಂಡ ಎಂ.ಆರ್. ಮಹೇಶ್, ಕುಸ್ತಿ ಕಮಿಟಿ ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ಅಧ್ಯಕ್ಷ ಎಚ್.ಬಿ. ಅಣ್ಣಪ್ಪ, ಹಿರಿಯ ಮಾಜಿ ಪೈಲ್ವಾನ್ ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗಾಳಿ ರವಿ, ಗಾಳಿ ನಾಗರಾಜ್, ಬೀರಲಿಂಗೇಶ್ವರ ಟ್ರಸ್ಟ್ ಕಮಿಟಿ ಹಾಗೂ ಉತ್ಸವ ಸಮಿತಿ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.ನಾಡಿನ ನಾನಾ ಭಾಗಗಳಿಂದ 70ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
- - - -13ಎಚ್.ಎಲ್.ಐ3.ಜೆಪಿಜಿ:ಕುಸ್ತಿ ಪಂದ್ಯಾವಳಿಯ ಶುಕ್ರವಾರದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶ್ಯಾಮ್ ವರ್ಗೀಸ್ ಪಾಲ್ಗೊಂಡು ಪೈಲ್ವಾನರಿಗೆ ಶುಭ ಕೋರಿದರು.