ಸಾರಾಂಶ
ಯಾರೇ ಆದರೂ ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಸಾಧನೆಗೈಯಲು ಸಾಧ್ಯ. ಎಲ್ಲರೂ ತಮ್ಮ ಅಲ್ಪ ಸಮಯವನ್ನು ಕ್ರೀಡೆಗಾಗಿ ಮೀಸಲಿಡಬೇಕು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ನೀಡುತ್ತಿರುವ ಹಾಕಿ ಬೇಸಿಗೆ ಶಿಬಿರಕ್ಕೆ ಭಾನುವಾರ ಅಂತಾರಾಷ್ಟ್ರೀಯ ಹಾಕಿ ಪಟು ಎಸ್.ವಿ. ಸುನೀಲ್ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಯಾರೇ ಆದರೂ, ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಸಾಧನೆಗೈಯಲು ಸಾಧ್ಯ. ಇಲ್ಲಿನ ಮೈದಾನದಲ್ಲಿ ಆಟವಾಡಿದ ಸಾಕಷ್ಟು ಆಟಗಾರರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ಎಲ್ಲರೂ ತಮ್ಮ ಅಲ್ಪ ಸಮಯವನ್ನು ಕ್ರೀಡೆಗಾಗಿ ಮೀಸಲಿಟ್ಟಲ್ಲಿ ಮುಂದಿನ ಜೀವನ ರೂಪಿಸಿಕೊಳ್ಳಲು ಅವಕಾಶವಾಗುವುದು ಎಂದು ತಿಳಿಸಿದರು.ಈ ಸಂದರ್ಭ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಂ.ಇ. ಮಹೇಶ್, ಗೌರವಾಧ್ಯಕ್ಷ ಎಚ್.ಎನ್. ಅಶೋಕ, ಖಜಾಂಚಿ ಕೆ.ಜೆ. ಗಿರೀಶ್, ಸಹಕಾರ್ಯದರ್ಶಿ ಮಹೇಶ್, ಸದಸ್ಯ ವಿನಾಯಕ ಇದ್ದರು.