ಸಾರಾಂಶ
ನನ್ನ ಜಮೀನಿಗೆ ಹೋಗೋ ರಸ್ತೆಯನ್ನು ಪ್ರಭಾವಿಯೋರ್ವರು ಮುಚ್ಚಿ ಹಾಕಿದ್ದಾರೆ. ಅದು ಸಾರ್ವಜನಿಕರು ಓಡಾಡುವ ರಸ್ತೆ ಮತ್ತು ನಕಾಶೆ ದಾರಿಯಾಗಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ನನ್ನ ಜಮೀನಿಗೆ ಹೋಗೋ ರಸ್ತೆಯನ್ನು ಪ್ರಭಾವಿಯೋರ್ವರು ಮುಚ್ಚಿ ಹಾಕಿದ್ದಾರೆ. ಅದು ಸಾರ್ವಜನಿಕರು ಓಡಾಡುವ ರಸ್ತೆ ಮತ್ತು ನಕಾಶೆ ದಾರಿಯಾಗಿದೆ. ಕಳೆದ ಮೂರ್‍ನಾಲ್ಕು ವರ್ಷದಿಂದ ದಾರಿ ಬಿಡಿಸಿಕೊಡುವಂತೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ರೈತ ಕೋಳಾಲದ ಚಂದ್ರಣ್ಣ ಅಳಲು ತೋಡಿಕೊಂಡರು.ತಾಲೂಕಿನ ಕೋಳಾಲ ಗ್ರಾಮದ ಸರ್ವೇ ನಂಬರ್ ೧೧೧/೫ ಎಚ್ ಮತ್ತು ಡಿನಲ್ಲಿ ಚಂದ್ರಣ್ಣಗೆ ಸುಮಾರು ೨.೨೦ ಗುಂಟೆ ಜಮೀನಿದೆ. ಈ ಜಮೀನು ಸೇರಿದಂತೆ ಹಲವಾರು ರೈತರ ಜಮೀನಿಗೆ ತೆರಳಲು ಹಲವಾರು ವರ್ಷಗಳಿಂದ ನಕಾಶೆ ರಸ್ತೆಯೂ ಇತ್ತು. ಆದರೆ ಕಳೆದ ೨೦೧೯ ರಲ್ಲಿ ಗ್ರಾಮದ ಓರ್ವ ರಾಜಕೀಯ ಮುಖಂಡ ನಕಾಶೆ ರಸ್ತೆಯನ್ನೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ಅಡಿಕೆ ಸಸಿ ನೆಟ್ಟಿದ್ದಾರೆ ಎಂದು ಆರೋಪಿಸಿದರು. ಇವರ ದುರ್ವತನೆಗೆ ಹಲವಾರು ರೈತರು ಹೆದರಿಕೊಂಡು ಸುಮ್ಮನಾಗಿದ್ಧಾರೆ. ಆದರೆ ನಮ್ಮ ಜಮೀನಿಗೆ ತೆರಳಲು ಇದೊಂದೇ ದಾರಿ ಇದೆ. ಅಕ್ರಮವಾಗಿ ಸರ್ಕಾರಿ ಜಮೀನು ಕಬಳಿಸಿರುವುದೇ ಅಲ್ಲದೇ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಪ್ರಭಾವಿ ಮುಖಂಡನಿಗೆ ರಾಜಕಾರಣಿಗಳ ಬೆಂಬಲವಿದೆ. ಆತನ ಅಕ್ರಮದ ಕುರಿತು ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜವಾಗಲಿಲ್ಲ ಎಂದರು.ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಕಚೇರಿ, ಸಚಿವರು ಬರೆದ ಪತ್ರಕ್ಕಿಲ್ಲ ಕಿಮ್ಮತ್ತು: ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವ ಕೃಷ್ಣಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಬರೆಯಲಾಗಿದೆ. ಎಲ್ಲರೂ ಜಿಲ್ಲಾಧಿಕಾರಿ, ಮತ್ತು ಸ್ಥಳೀಯ ತಹಸೀಲ್ದಾರ್‌ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಕಾರ್ಯಾಲಯ, ಕಂದಾಯ ಸಚಿವರ ಕಾರ್ಯಾಲಯ, ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಸೂಚನಾ ಪತ್ರಕ್ಕೆ ತಾಲೂಕು ಕಚೇರಿ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕುಟುಂಬದ ಸದಸ್ಯರೊಂದಿಗೆ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದರು
ಇನ್ನೂ ಮುಂದಾದರೂ ತಾಲೂಕು ಆಡಳಿತ ಅನ್ಯಾಯಕ್ಕೆ ಒಳಗಾಗಿರುವ ಕೋಳಾಲ ಚಂದ್ರಣ್ಣಗೆ ನ್ಯಾಯ ದೊರಕಿಸಿಕೊಡುವುದೇ?. ಅವರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಮುಕ್ತಿ ನೀಡುತ್ತದೇಯೇ ಎಂದು ಕಾದು ನೋಡಬೇಕು.೧೯ ಟಿವಿಕೆ ೧ -
ತುರುವೇಕೆರೆ ತಾಲೂಕು ಕೋಳಾಲದ ಚಂದ್ರಣ್ಣಗೆ ನ್ಯಾಯ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಕಚೇರಿಯಿಂದ ಬಂದಿರುವ ಪತ್ರ. ೧೯ ಟಿವಿಕೆ ೨ -ತುರುವೇಕೆರೆ ತಾಲೂಕು ಕೋಳಾಲದ ಚಂದ್ರಣ್ಣಗೆ ನ್ಯಾಯ ಒದಗಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲಾಧಿಕಾರಿಗೆ ಸೂಚಿಸಿರುವ ಪತ್ರ.