ಸಾರಾಂಶ
ಹೊಳವನಹಳ್ಳಿ: ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಹೊಳವನಹಳ್ಳಿ: ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕಮನೀಯ ಕ್ಷೇತ್ರದಲ್ಲಿ ನೆಲೆಸಿರುವ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ರಾಮ, ಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯ ವಿಗ್ರಹವನ್ನ ಕೂರಿಸಿದ ಕ್ಷಣಾರ್ಧದಲ್ಲೇ ಆಕಾಶದಲ್ಲಿ ಗರುಡ ಪಕ್ಷಿ ಕಾಣಿಸಿಕೊಂಡಿತು. ಗರಡ ಪಕ್ಷಿ ನೋಡಿದ ಭಕ್ತರು ಜೈ ಶ್ರೀರಾಮ್ ಎಂದು ಕೂಗಿದರು.ತಹಸೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲೂಕು ಅಡಳಿತ, ದೇವಾಲಯ ಕಮಿಟಿ ಹಾಗೂ ವಿವಿಧ ಭಕ್ತಧಿಗಳಿಂದ ಬೆಳಿಗ್ಗೆಯಿಂದ ಸ್ವಾಮಿಗೆ ಹೋಮ, ಹೊವಿನ ಅಲಂಕಾರ, ವಿಶೇಷ ಪೂಜೆ, ಪ್ರಸಾದ ವ್ಯವಸ್ಥೆಯನ್ನ ಗ್ರಾಮಸ್ಥರು ಭಕ್ತರು ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಆರ್ಚಕ ರಾಮಾಚಾರ್ ಮಾತನಾಡಿ, ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಇತಿಹಾಸ ಪ್ರಸಿದ್ಧವಾದ ಪುಣ್ಯ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿದ್ದು, ಪ್ರತಿನಿತ್ಯ ಸಾಕಷ್ಟು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಬ್ರಹ್ಮ ರಥೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಿಗ್ಗೆಯಿಂದ ಹೋಮ ಅಭಿಷೇಕವನ್ನ ಮಾಡಲಾಗಿತ್ತು. ಬರುವ ಭಕ್ತರು ಸ್ವಾಮಿಯ ದರ್ಶನವನ್ನ ಪಡೆಯುತ್ತಿದ್ದಾರೆ.ಈ ಸಂದರ್ಭದಲ್ಲಿ ಸಿಪಿಐ ಅನಿಲ್, ಪಿಎಸ್‌ಐ ಮಂಜುನಾಥ್, ಇಒ ಅಪೂರ್ವಾ, ಮುಖಂಡರಾದ ಆಶ್ವಥ್‌ನಾರಾಯಣ್, ಪಿ.ಎನ್. ಕೃಷ್ಣಮೂರ್ತಿ, ಜಯರಾಮ್, ಕವಿತಮ್ಮ, ಕಂದಾಯ ಅಧಿಕಾರಿಗಳಾದ ಗ್ರೇಟ್ ೨ ತಹಸೀಲ್ದಾರ್ ನರಸಿಂಹಮೂರ್ತಿ, ಉಪತಹಸೀಲ್ದಾರ್ ಜಯಪ್ರಕಾಶ್, ಸಲ್ಮಾನ್, ಸತ್ಯನಾರಾಯಣ್, ಬಾಲರಾಜು, ಸೇರಿದಂತೆ ಇತರರು ಇದ್ದರು.