ಸಂಘಕ್ಕೆ 11 ಲಕ್ಷದ 14 ಸಾವಿರ ರು.ಗಳ ಲಾಭ ಬಂದಿದ್ದು, ಅದರಲ್ಲಿ 4,72, 499 ರು.ಗಳನ್ನು ಬೋನಸ್ ಆಗಿ ಹಾಲು ಉತ್ಪಾದಕರಿಗೆ ಶೀಘ್ರ ಕೊಡಬೇಕೆಂದು ಕಾರ್ಯದರ್ಶಿಗೆ ಆದೇಶಿಸಿದರು. ಪ್ರತಿಯೊಬ್ಬರೂ ನಿಮ್ಮ ರಾಸುಗಳಿಗೆ ವಿಮೆ ಮಾಡಿಸಿ, ಗೆಜ್ಜಲಗೆರೆ ಹಾಲು ಒಕ್ಕೂಟದಿಂದ ನಿಮಗೆ ಮ್ಯಾಟ್‌ಗಳನ್ನು ಕೊಡಿಸಲಾಗುತ್ತದೆ ಪ್ರಯೋಜನ ಪಡೆಯಿರಿ.

ಕನ್ನಡಪ್ರಭ ವಾರ್ತೆ ಹಲಗೂರು

ಅಂತರವಳ್ಳಿಯ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಗೆ ಸುಮಾರು ವರ್ಷಗಳಿಂದ ಚುನಾವಣೆಯ ನಡೆದಿಲ್ಲ. ಒಂದು ತಿಂಗಳೊಳಗೆ ಚುನಾವಣೆ ನಡೆಸುವಂತೆ ಡೇರಿ ಕಾರ್ಯದರ್ಶಿಗೆ ಒಕ್ಕೂಟದ ನಿರ್ದೇಶಕ ಕೃಷ್ಣೇಗೌಡ ಸೂಚನೆ ನೀಡಿದರು.

ಗ್ರಾಮದ ಡೇರಿಯಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘಕ್ಕೆ ಚುನಾವಣೆ ಮಾಡುವಂತೆ ಹಾಲು ಉತ್ಪಾದಕರು ಒತ್ತಾಯಿಸಿದಾಗ ಕೃಷ್ಣೇಗೌಡರು ಮಾತನಾಡಿ, ಕಾರ್ಯದರ್ಶಿಗೆ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಉತ್ತಮ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ಡೇರಿ ಮತ್ತು ಹಾಲು ಒಕ್ಕೂಟವನ್ನು ಅಭಿವೃದ್ಧಿಪಡಿಸಲು ಕೈ ಜೋಡಿಸುವಂತೆ ಕೋರಿದರು.

ಸಂಘಕ್ಕೆ 11 ಲಕ್ಷದ 14 ಸಾವಿರ ರು.ಗಳ ಲಾಭ ಬಂದಿದ್ದು, ಅದರಲ್ಲಿ 4,72, 499 ರು.ಗಳನ್ನು ಬೋನಸ್ ಆಗಿ ಹಾಲು ಉತ್ಪಾದಕರಿಗೆ ಶೀಘ್ರ ಕೊಡಬೇಕೆಂದು ಕಾರ್ಯದರ್ಶಿಗೆ ಆದೇಶಿಸಿದರು. ಪ್ರತಿಯೊಬ್ಬರೂ ನಿಮ್ಮ ರಾಸುಗಳಿಗೆ ವಿಮೆ ಮಾಡಿಸಿ, ಗೆಜ್ಜಲಗೆರೆ ಹಾಲು ಒಕ್ಕೂಟದಿಂದ ನಿಮಗೆ ಮ್ಯಾಟ್‌ಗಳನ್ನು ಕೊಡಿಸಲಾಗುತ್ತದೆ ಪ್ರಯೋಜನ ಪಡೆಯಿರಿ. ಸಂಘಕ್ಕೆ 15 ಯಂತ್ರಗಳು ಬೇಕು ಎಂದು ಬೇಡಿಕೆ ಇಟ್ಟಿದ್ದೀರಿ. ಎಲ್ಲವನ್ನು ಹಂತ ಹಂತವಾಗಿ ಈಡೇರಿಸುವುದಾಗಿ ತಿಳಿಸಿದರು.

ಚುನಾವಣೆಯಲ್ಲಿ ನನ್ನ ಕೈ ಬಲಪಡಿಸಿದರೆ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಕ್ಷೇತ್ರದ ರೈತರ ಕಷ್ಟ ಸುಖಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಒಕ್ಕೂಟಕ್ಕೆ ಹೆಚ್ಚು ಅನುದಾನ ನೀಡಿ ಎಂದು ಮನವಿ ಮಾಡುತ್ತೇನೆ. ಅದರಿಂದ ನಾನು ನಿಮಗೆ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಕೊಡಿಸಲು ಸಹಾಯವಾಗುತ್ತದೆ ಎಂದರು.

ಇದೇ ವೇಳೆ ಮನ್ಮುಲ್ ನಿರ್ದೇಶಕರಾದ ಕೃಷ್ಣೆಗೌಡರಿಗೆ, ಮನ್ಮುಲ್ ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ದಿವ್ಯಶ್ರೀ ಮತ್ತು ಹಾಲು ಒಕ್ಕೂಟದ ತಾಲೂಕು ಮುಖ್ಯಸ್ಥರಾದ ಡಾ. ಸದಾಶಿವ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಚಿಕ್ಕಸ್ವಾಮಿ, ಎನ್.ಸತೀಶ್, ಶಿವಲಿಂಗೇಗೌಡ, ಪುಟ್ಟಸ್ವಾಮಿಗೌಡ, ಕೆಂಚೇಗೌಡ, ಡೇರಿ ಸಿಇಒ ಎಂ.ಆರ್ ರಮೇಶ್, ಹಾಲು ಪರೀಕ್ಷಕ ಸ್ವಾಮಿ, ಸಹಾಯಕ ಎ.ಆರ್.ಶಿವಕುಮಾರ್ ಮತ್ತು ಕಾರ್ಯದರ್ಶಿಗಳಾದ ಎನ್.ಕೋಡಿಹಳ್ಳಿ ಪ್ರಕಾಶ್, ಕೊನ್ನಾಪುರ ನಾಗರಾಜು, ಶಂಕ್ರ ಸೇರಿದಂತೆ ಇತರರು ಇದ್ದರು.