ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ತಾಲೂಕಿನ ಎಲ್ಲ ಕೂಸಿನ ಮನೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಸಲಹೆ, ಸೂಚನೆ ನೀಡಬೇಕು ಎಂದು ತಾಪಂ ಇಒ ಸುಭಾಸ ಸಂಪಗಾಂವಿ ಹೇಳಿದರು. ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸೋಮವಾರ ನಡೆದ ಕೂಸಿನ ಮನೆ ಪಾಲಕರ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರು ತಮ್ಮ 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆ ಕೇಂದ್ರಕ್ಕೆ ನಿರ್ಭಿತಿಯಿಂದ ಸೇರಿಸಿ, ಗಂಡ-ಹೆಂಡತಿ ಉದ್ಯೋಗ ಖಾತ್ರಿ ಕೆಲಸವನ್ನು ವರ್ಷದಲ್ಲಿ 100 ದಿನ ಪೂರ್ಣಗೊಳಿಸಿ ಪ್ರತಿ ದಿನ ಕೂಲಿ ₹349 ಪಡೆದು ಸಂಜೆ ಮನೆಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗಬಹುದು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಎಲ್ಲ ಕೂಸಿನ ಮನೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಸಲಹೆ, ಸೂಚನೆ ನೀಡಬೇಕು ಎಂದು ತಾಪಂ ಇಒ ಸುಭಾಸ ಸಂಪಗಾಂವಿ ಹೇಳಿದರು. ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸೋಮವಾರ ನಡೆದ ಕೂಸಿನ ಮನೆ ಪಾಲಕರ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರು ತಮ್ಮ 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆ ಕೇಂದ್ರಕ್ಕೆ ನಿರ್ಭಿತಿಯಿಂದ ಸೇರಿಸಿ, ಗಂಡ-ಹೆಂಡತಿ ಉದ್ಯೋಗ ಖಾತ್ರಿ ಕೆಲಸವನ್ನು ವರ್ಷದಲ್ಲಿ 100 ದಿನ ಪೂರ್ಣಗೊಳಿಸಿ ಪ್ರತಿ ದಿನ ಕೂಲಿ ₹349 ಪಡೆದು ಸಂಜೆ ಮನೆಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗಬಹುದು. ಕೆಲಸ ಮಾಡಿ ಬರುವವರೆಗೆ ಕೂಸಿನ ಮನೆ ಕೇರ ಟೇಕರ್ಸ್‌ಗಳು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ದಿನ ನಿತ್ಯ 3 ಹೊತ್ತು ಉತ್ತಮ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತದೆ ಎಂದರು.ತಾಪಂ ಸಹಾಯಕ ನಿರ್ದೇಶಕ ರಘು ಬಿ.ಎನ್.ಮಾತನಾಡಿ, ಕೂಸಿನ ಮನೆ ಕೇಂದ್ರಗಳಲ್ಲಿ ಉತ್ತಮ ಆಹಾರ ವಿತರಣೆ, ಆರೋಗ್ಯ ಕಾಳಜಿ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದ್ದು, ನರೇಗಾ ಕೂಲಿಕಾರರು ಮಕ್ಕಳನ್ನುಈ ಕೇಂದ್ರದಲ್ಲಿ ಬಿಟ್ಟು ಕೆಲಸಕ್ಕೆ ಹೋಗಬಹುದು ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷ ಶ್ರೀಕಾಂತ ಹಲಕಿ, ಪಿಡಿಒ ಜ್ಯೋತಿ ಉಪ್ಪಿನ, ಐಒಸಿ ಸಂಯೋಜಕ ಎಸ್.ವಿ.ಹಿರೇಮಠ, ಗ್ರಾಪಂ ಸದಸ್ಯೆ ಕಾಶವ್ವ ಕುರುಬರ, ಆರೋಗ್ಯ ಇಲಾಖೆಯ ಜಾನ್ವಿ ಸಣ್ಣಕ್ಕಿ, ಆಶಾ ಗುರುಪುತ್ರ ಹಾಗೂ ಕೂಸಿನ ಮನೆ ಪಾಲಕರು, ಗ್ರಾಪಂ ಸಿಬ್ಬಂದಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))