ಪೆಟ್ರೋಲ್‌ ಡಬ್ಬ ಹಿಡಿದು ಪ್ರತಿಭಟನೆ

| Published : Jan 22 2025, 12:34 AM IST

ಸಾರಾಂಶ

ನಿವೇಶನ ಹಂಚಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ದಂಪತಿಗಳಿಬ್ಬರು ಪೆಟ್ರೋಲ್ ಡಬ್ಬ ಹಿಡಿದು ಪಟ್ಟಣದ ತಾಪಂ ಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ನಿವೇಶನ ಹಂಚಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ದಂಪತಿಗಳಿಬ್ಬರು ಪೆಟ್ರೋಲ್ ಡಬ್ಬ ಹಿಡಿದು ಪಟ್ಟಣದ ತಾಪಂ ಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲೂಕಿನ ಕಡಬ ಹೋಬಳಿಯ ಮಾರ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಾಡೇನ ಹಳ್ಳಿ ವಾಸಿಗಳಾದ ರಾಘವೇಂದ್ರ ದಂಪತಿ 20 ವರ್ಷಗಳಿಂದಲೂ ನಿವೇಶದಲ್ಲಿ ಶೆಡ್ಡು ಕಟ್ಟಿಕೊಂಡು ವಾಸವಾಗಿದ್ದಾರೆ. 2022 ಸಾಲಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದು ಆದರೆ ಸಂಬಂಧಪಟ್ಟ ಅಧಿಕಾರಿಗಳು ಬಂದು ನೀನು 20 ವರ್ಷಗಳಿಂದ ಈ ಜಾಗದಲ್ಲಿ ವಾಸ ಮಾಡಿದ್ದಕ್ಕೆ ನಿನ್ನ ಹತ್ತಿರ ದಾಖಲೆ ಏನು ಇದೆ ಎಂದು ನಾನು ಕಟ್ಟಿದ ಮನೆ ಶೆಡ್ ಕಿತ್ತು ಹಾಕಿದ್ದಾರೆ.ನಾನು ನನ್ನ ಪತ್ನಿ ಹಾಗೂ ಮಕ್ಕಳಿಬ್ಬರು ಬೀದಿಗೆ ಬಿದ್ದಿದ್ದೇವೆ ಆದ್ದರಿಂದ ನಿವೇಶವನ್ನು ನನಗೆ ಕೊಡಿಸಬೇಕೆಂದು ದುಃಖ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಶಿವಪ್ರಕಾಶ್ ಮಾತನಾಡಿ ರಾಘವೇಂದ್ರ ಕುಟುಂಬಕ್ಕೆ ಸೂಕ್ತ ಪರಿಯಾಯ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ತಿಳಿಸಿದರು.

ಈ ಪ್ರತಿಭಟನಾ ಸಂದರ್ಭದಲ್ಲಿ ಸಿ.ಪಿ. ಐ. ಗೋಪಿನಾಥ್, ಪಿಎಸ್ಐ ಸುನಿಲ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ . ಆರ್. ವೆಂಕಟೇಶ್, ಮಾರಶೆಟ್ಟಿ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ತನುಜ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

ಫೋಟೋ : ನಿವೇಶನ ಹಂಚಿಕೆಯಲ್ಲಿ ಮೋಸ ಮಾಡಿದ್ದಾರೆ ಎಂದು ದಂಪತಿಗಳಿಬ್ಬರು ಪೆಟ್ರೋಲ್ ಡಬ್ಬ ಹಿಡಿದು ಗುಬ್ಬಿ ಪಟ್ಟಣದ ತಾಪಂ ಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.