ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದೆಲ್ಲೆಡೆ ಮಂಗಳವಾರ ಸಂಭ್ರಮದ ಹೋಳಿ ಹಬ್ಬ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಉತ್ಸವಗಳು ನಡೆದವು.
ಇಲ್ಲಿನ ಡಿಕ್ರಾಸ್ ಸಮೀಪ ಇರುವ ಇತಿಹಾಸ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹೋಳಿ ಹುಣ್ಣಿಮೆ ಅಂಗವಾಗಿ ಬ್ರಹ್ಮರಥೋತ್ಸವ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀಸ್ವಾಮಿಯ ರಥಕ್ಕೆ ಹಣ್ಣು-ಧವನ ಅರ್ಪಿಸಿ ಭಕ್ತಿ-ಭಾವ ಮೆರೆದರು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ರಥೋತ್ಸವ ಬಳಿಕ ಚಂದ್ರಗ್ರಹಣದ ಅಂಗವಾಗಿ ದೇವಾಲಯವನ್ನು ಮುಚ್ಚಲಾಯಿತು.ಇಲ್ಲಿನ ವಡ್ಡರಪೇಟೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕದರಿ ಹುಣ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರ ರಾಜಬೀದಿ ಉತ್ಸವ ಆಯೋಜಿಸಲಾಗಿತ್ತು.
ಬಣ್ಣದೋಕುಳಿ ಸಂಭ್ರಮ:ಸಂಭ್ರಮದ ಸಂಕೇತವಾಗಿರುವ ಹೋಳಿ ಬದುಕಿನಲ್ಲಿ ಹೊಸ ಆಶಯಗಳಿಗೆ ಪೂರಕವಾಗಿ ಉನ್ನತ ಚಿಂತನೆಗಳು ಮೂಡುವಂತೆ ಮಾಡಲಿ ಎಂಬ ಆಶಯದೊಂದಿಗೆ ಬಣ್ಣದೋಕುಳಿ ಎರಚಿ ಸಂಭ್ರಮಿಸಿದರು. ಜಗತ್ತಿನ ಜನ ಪರಸ್ಪರ ಭ್ರಾತೖತ್ವ ಧೋರಣೆಯಿಂದ ಸುಖ-ಶಾಂತಿ-ನೆಮ್ಮದಿಯಿಂದ ಬಾಳುವಂತಾಗಲಿ ಎಂಬ ಮಹತ್ವಾಕಾಂಕ್ಷೆ ಈ ಹೋಳಿ ಹಬ್ಬದ್ದು. ಕಾಲೇಜು ವಿದ್ಯಾಥಿ೯-ವಿದ್ಯಾಥಿ೯ನಿಯರು, ಕಾಮಿ೯ಕರು, ಸಾವ೯ಜನಿಕರು, ವಿಶೇಷವಾಗಿ ಪುಟಾಣಿ ಮಕ್ಕಳು ಕೂಡಾ ಹೋಳಿ ಬಣ್ಣದಾಟದಲ್ಲಿ ತೊಡಗಿದ್ದ ದೖಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ರಸ್ತೆಗಳಲ್ಲಿ ಬಣ್ಣ ಮೆತ್ತಿಕೊಂಡು ಸುತ್ತಾಡುತ್ತಿದ್ದ ಯುವಕರು ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಹಲವೆಡೆ ಆಚರಣೆಗೊಂಡ ಹೋಳಿ ಹಬ್ಬದಲ್ಲಿ ಭ್ರಾತೖತ್ವದ ಸಂದೇಶವನ್ನು ಸಾರಿದರು. ಹಬ್ಬ ಹರಿದಿನಗಳು ಸಡಗರ ಮತ್ತು ವೈಭವದ, ನೆಮ್ಮದಿಯ ಸಂಕೇತಗಳಾಗಿ ನಮ್ಮ ಪರಂಪರೆಯಲ್ಲಿ ಆಚರಣೆಗೆ ಬಂದಿದ್ದು ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಏಕರೂಪಿ ಸಂಸ್ಕೖತಿಯ ಪ್ರಭಾವದಿಂದಾಗಿ ಈ ಬಗೆಯ ಹಬ್ಬಗಳ ಮಹತ್ವ ಕೇವಲ ಅಬ್ಬರ ಮತ್ತು ಮನರಂಜನೆಗೆ ಸೀಮಿತವಾಗಿದೆ ಎಂಬುದು ಹಿರಿಯರ ಅಭಿಮತ.
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ, ತೂಬಗೆರೆ, ಸಾಸಲು, ದೊಡ್ಡಬೆಳವಂಗಲ ಹೋಬಳಿಗಳಲ್ಲೂ ಹೋಳಿಯ ಸಂಭ್ರಮ ಮನೆಮಾಡಿತ್ತು.
3ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.3ಕೆಡಿಬಿಪಿ7- ದೊಡ್ಡಬಳ್ಳಾಪುರದ ವಡ್ಡರಪೇಟೆಯಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.