ಸರಣಿ ರಜೆ, ವರ್ಷಾಂತ್ಯ: ಕರಾವಳಿಯಲ್ಲಿ ಜನಜಂಗುಳಿ

| Published : Dec 30 2024, 01:01 AM IST

ಸಾರಾಂಶ

ಕ್ರಿಸ್‌ಮಸ್‌- ವರ್ಷಾಂತ್ಯ, ಕರಾವಳಿ ಉತ್ಸವ, ರಜಾದಿನ.. ಹೀಗೆ ಎಲ್ಲವೂ ಒಟ್ಟಾದ ಈ ಭಾನುವಾರದಂದು ಸಹಸ್ರಾರು ಪ್ರವಾಸಿಗರು ಬೀಚ್‌ಗಳ ಸೌಂದರ್ಯವನ್ನು ಸವಿದರು. ನಗರದ ಪ್ರಮುಖ ಬೀಚ್‌ಗಳಾದ ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್‌ನಲ್ಲಿ ಸಂಜೆ ವೇಳೆ ಕಾಲಿಡಲು ಜಾಗವಿಲ್ಲದಷ್ಟು ಜನ ಜಮಾಯಿಸಿದ್ದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ/ಮಂಗಳೂರು

ಕ್ರಿಸ್‌ಮಸ್ ಸೇರಿದಂತೆ ನಾಲ್ಕನೇ ಶನಿವಾರ, ವರ್ಷಾಂತ್ಯ ಸರಣಿ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಬೀಚುಗಳಲ್ಲಿ ಭಾನುವಾರ ಭಾರಿ ಜನದಟ್ಟಣೆ ಕಂಡುಬಂತು.

ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾನುವಾರ ಭಾರಿ ಜನಸಂದಣಿ ಕಂಡುಬಂತು. ರಜೆಯಿಂದಾಗಿ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರದರ್ಶನ ಮಾಡಿ ಸೇವೆಗಳನ್ನು ನೆರವೇರಿಸಿದರು.

ಶನಿವಾರ, ಭಾನುವಾರ ಕ್ರಿಸ್ಮಸ್ ಆಚರಣೆ ಪ್ರಯುಕ್ತ ದೇಶದೆಲ್ಲೆಡೆ ರಜೆ ಇತ್ತು. ಹಾಗಾಗಿ ವಿವಿಧೆಡೆಗಳಿಂದ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಭೇಟಿ ಹಮ್ಮಿಕೊಂಡು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಹಾಗೂ ವಿವಿದ ಸೇವೆಗಳನ್ನು ನೆರವೇರಿಸಿದರು.

ಶುಕ್ರವಾರ ಸಂಜೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಕ್ಷೇತ್ರದ ಕಡೆಗೆ ಆಗಮಿಸಿದ್ದರಿಂದ ಕ್ಷೇತ್ರದಲ್ಲಿನ ದೇವಸ್ಥಾನದ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದವು. ಹಾಗಾಗಿ ಅಲ್ಲದೆ ವಿಪರೀತ ಬಿಸಿಲು ಮತ್ತು ಸೆಕೆಯ ವಾತಾವರಣದಲ್ಲೂ ಭಕ್ತಾದಿಗಳು ರಥಬೀದಿಯಿಂದಲೇ ಸಾಲು ನಿಂತು ದೇವರ ದರುಶನ ಪಡೆದರು. ವಾಹನ ನಿಲುಗಡೆಗಾಗಿ ಕ್ಷೇತ್ರದಲ್ಲಿರುವ ಪಾರ್ಕಿಂಗ್ ಜಾಗಗಳು ಭರ್ತಿಯಾಗಿ ಮುಖ್ಯ ರಸ್ತೆಯಲ್ಲೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಮುಂಜಾನೆಕುಮಾರಧಾರ ಸ್ನಾನ ಘಟ್ಟದಲ್ಲಿ ಕೂಡಾ ಅತ್ಯಕ ಭಕ್ತ ಸಂದಣಿ ಕಂಡು ಬಂತು.

ವಸತಿಗಾಗಿ ಹಡುಕಾಟ: ಹೆಚ್ಚಿನ ಪ್ರಮಾಣದಲ್ಲಿ ಯಾತ್ರಿಕರು ಕ್ಷೇತ್ರಕ್ಕೆ ಆಗಮಿಸಿದ್ದರಿಂದ ದೇವಳದ ವಸತಿಗೃಹಗಳು ಹಾಗೂ ಇತರ ಖಾಸಾಗಿ ವಸತಿಗೃಹಗಳು ಭರ್ತಿಯಾಗಿತ್ತು. ವಸತಿ ಸಿಗದೆ ಭಕ್ತಾದಿಗಳು ಹುಡುಕಾಡುವ ಪರಿಸ್ಥಿತಿ ಎದುರಾಗಿತ್ತು. ಶುಕ್ರವಾರ ಸಂಜೆಯಿಂದಲೇ ಸಂಪೂರ್ಣ ವಸತಿ ಗೃಹಗಳು ತುಂಬಿದ್ದವು. ರಾತ್ರಿ ವೇಳೆ ವಸತಿ ಸಿಗದೇ ದೇವಳದ ಧರ್ಮಸಮ್ಮೇಳನ ಮಂಟಪ, ಬಸ್‌ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳ ಪ್ಯಾಸೆಜ್ ಜಾಗಗಳಲ್ಲಿ, ಪೇಟೆಯ ಫುಟ್‌ಪಾತ್‌ನ ಇಂಟರ್ ಲಾಕ್ ಅಳವಡಿಸಿದ ಜಾಗದಲ್ಲಿ ಕೂಡ ನಿದ್ರಿಸಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.2024ರ ಕೊನೆಯ ಭಾನುವಾರ ನಗರದೊಳಗೆ ದಟ್ಟಣೆ ಮಾತ್ರವಲ್ಲ, ಜಿಲ್ಲೆಯ ಪ್ರವಾಸಿ ತಾಣಗಳು, ಅದರಲ್ಲೂ ಬೀಚ್‌ಗಳಲ್ಲಿ ಜನಜಾತ್ರೆಯೇ ಸೇರಿತ್ತು.ಕ್ರಿಸ್‌ಮಸ್‌- ವರ್ಷಾಂತ್ಯ, ಕರಾವಳಿ ಉತ್ಸವ, ರಜಾದಿನ.. ಹೀಗೆ ಎಲ್ಲವೂ ಒಟ್ಟಾದ ಈ ಭಾನುವಾರದಂದು ಸಹಸ್ರಾರು ಪ್ರವಾಸಿಗರು ಬೀಚ್‌ಗಳ ಸೌಂದರ್ಯವನ್ನು ಸವಿದರು. ನಗರದ ಪ್ರಮುಖ ಬೀಚ್‌ಗಳಾದ ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್‌ನಲ್ಲಿ ಸಂಜೆ ವೇಳೆ ಕಾಲಿಡಲು ಜಾಗವಿಲ್ಲದಷ್ಟು ಜನ ಜಮಾಯಿಸಿದ್ದರು.ಈ ಬಾರಿ ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ಗಳಿಗೆ ಆಗಮಿಸಿದ್ದು, ಸೂರ್ಯಾಸ್ತಮಾನವನ್ನು ಕಣ್ತುಂಬಿಕೊಂಡರು. ಸುರಕ್ಷತೆಯ ಕಣ್ಗಾವಲಿನಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿದು ಮೋಜು ಅನುಭವಿಸಿದರು.ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪರವೂರಿನಲ್ಲಿ ನೆಲೆಸಿರುವ ಸಹಸ್ರಾರು ಮಂದಿ ಊರಿಗೆ ಆಗಮಿಸಿದ್ದಾರೆ. ವರ್ಷಾಂತ್ಯವಾಗಿದ್ದರಿಂದ ಬೇರೆ ಜಿಲ್ಲೆ, ರಾಜ್ಯಗಳ ಪ್ರವಾಸಿಗರ ದಂಡೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಮಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್‌ ಜ್ಯಾಂ ಸಮಸ್ಯೆ ಎದುರಾಗಿದೆ.ನಂತೂರಲ್ಲಿ ಮತ್ತೆ ಸಮಸ್ಯೆ:ಕಳೆದೆರಡು ತಿಂಗಳಿನಿಂದ ನಂತೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿ ಜನರು ನಿಟ್ಟುಸಿರು ಬಿಟ್ಟಿದ್ದರು. ಈಗ ವರ್ಷಾಂತ್ಯದ ಹಿನ್ನೆಲೆಯಲ್ಲಿ ಮುಂಜಾನೆಯಿಂದ ರಾತ್ರಿ 10 ಕಳೆದರೂ ವಾಹನ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಕೆಲವೊಮ್ಮೆ ಹೆದ್ದಾರಿಯುದ್ದಕ್ಕೂ ಸಾವಿರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.ಫೋಟೊ29ಬೀಚ್‌

ಮಂಗಳೂರಿನ ಬೀಚ್‌ನಲ್ಲಿ ಭಾನುವಾರ ಕಂಡ ಜನ ಸಂದಣಿ.ಚಿತ್ರ:೨೯ಎಸ್‌ಯುಬಿ- ಸಂದಣಿ

ಆದಿತ್ಯವಾರ ಕುಕ್ಕೆಯಲ್ಲಿ ಕಂಡು ಬಂದ ಭಕ್ತ ಸಂದಣಿ